ಜಿಲ್ಲೆಯ ರೈತರು ಸುಮಾರು ಎರಡು ತಿಂಗಳ ಹಿಂದೆ ಬೆಳೆದ ಜೋಳವನ್ನು ಖರೀದಿ ಮಾಡದೆ ರಾಜ್ಯ ಸರ್ಕಾರ ಮೀನಮೇಶ ಎಣಿಸುತ್ತಿದ್ದು ರೈತರು ಮತ್ತು ಅವರ ಜೀವನ ಸಂಕಷ್ಟಕ್ಕೆ ಸಿಲುಕಿದ್ದಾರೆ,ರಾಜ್ಯ ಸರ್ಕಾರ ರೈತರ ಜೊತೆ ಚೆಲ್ಲಾಟವಾಡುತ್ತಿದೆ ದೇವರು ವರ ಕೊಟ್ಟರೂ, ಪೂಜಾರಿ ಕೊಡಲಿಲ್ಲ ಎನ್ನುವಂತಗಿದೆ ಎಂದು ಕೆ ಆರ್ ಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿರುಪಾದಿ ಕೆ ಗೋಮರ್ಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಈ ಸಾಲಿನ ಹಿಂಗಾರು ಮತ್ತು ಮುಂಗಾರು ಮಳೆಯ ಕೊರತೆಯ ನಡುವೆಯೂ ರೈತರು ಕಷ್ಟಪಟ್ಟು ಸಾಲ ಮಾಡಿ ಜೋಳವನ್ನು ತಕ್ಕಮಟ್ಟಿಗೆ ಬೆಳೆದಿದ್ದರೂ ಸಹ ಬೆಳೆದ ಬೆಳೆಯನ್ನು ಸರ್ಕಾರದ ವತಿಯಿಂದ ಖರೀದಿ ಮಾಡುವ ಯೋಜನೆ ಸರಿಯಾದ ರೀತಿಯಲ್ಲಿ ಅನುಷ್ಠಾನ ಇಲ್ಲದಿದ್ದರ ಪರಿಣಾಮವಾಗಿ ರೈತರು ಸಮಸ್ಯೆಗೆ ಒಳಗಾಗಿದ್ದು ಕಷ್ಟಕ್ಕೆ ಸಿಲುಕಿದ್ದಾರೆ, ಜೋಳದ ಬೆಳೆ ಬೆಳೆಯುವ ಸಂದರ್ಭದಲ್ಲಿ ರೈತರು ಬಡ್ಡಿಯ ಲೆಕ್ಕಾಚಾರದಲ್ಲಿ ಕೈಗಾಡವಾಗಿ ಸಾಲ ಸೂಲ ಮಾಡಿ ಬೆಳೆಯನ್ನ ಬೆಳೆಸಿದ್ದಾರೆ.ಆದರೆ ಈಗ ಈ ಕಡೆ ಸಾಲಗಾರರಿಗೆ ಸಾಲ ತೀರಿಸಲಾಗುತ್ತಿಲ್ಲ ಆ ಕಡೆ ಬೆಳೆದ ಬೆಳೆಯನ್ನು ಅಡ್ಡ ದುಡ್ಡಿಯಾಗಿ ಮಧ್ಯವರ್ತಿಗಳಿಗೆ ಮಾರಲಾಗುತ್ತಿಲ್ಲ ರೈತರ ಜೀವನ ಇಕ್ಕಟ್ಟಿನ ಸ್ಥಿತಿಗೆ ತಲುಪಿದೆ.ಈ ನಡುವೆ ಬರಗಾಲ ಗ್ರಾಮೀಣ ಜನರನ್ನು ಕಿತ್ತು ತಿನ್ನುವಂತೆ ಕಾಣುತ್ತಿದೆ.ಜೋಳ ಖರೀದಿಸುವುದಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸುಳ್ಳು ಬರವಸೆಯನ್ನ ನೀಡಿ ಜನರನ್ನ ಯಾಮಾರಿಸುತ್ತಿದ್ದಾರೆ ಹಾಗಾಗಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ರೈತರ ಬೆಳೆದ ಜೋಳವನ್ನು ಶೀಘ್ರ ಗತಿಯಲ್ಲಿ ಖರೀದಿಸುವ ಕಾರ್ಯ ಆರಂಭಿಸಬೇಕು ಅಥವಾ ರೈತರ ಸಮಸ್ಯೆ ತೀರಿಸಲು ಸಾಲವನ್ನು ಮನ್ನಾ ಮಾಡಬೇಕು ಇಲ್ಲದಿದ್ದರೆ ರೈತರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟಗಳು ಪ್ರತಿಭಟನೆಗಳು, ಸತ್ಯಾಗ್ರಗಳನ್ನ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಆಗ್ರಹಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.