ಕಾರವಾರ:ಕಡವಾಡ-ಸುಂಕೇರಿ
ಬಳಿ ಪ್ಲಾಸ್ಟಿಕ್ ತ್ಯಾಜ್ಯ ಹಾಕುವವರ ಚಾಳಿ ಮತ್ತೆ ಮುಂದುವರೆದಿದ್ದು ಕೆಲ ತಿಂಗಳಿಂದ ಪ್ರತಿ ರವಿವಾರ ಪರಿಸರ ಕಾಳಜಿಯುಳ್ಳ,ಯುವ ಮೀನುಗಾರರ ತಂಡ ನಮ್ಮ ನಡೆ ಸ್ವಚ್ಛತೆಯ ಕಡೆ ಎಂಬ ಅಭಿಯಾನ ಹಮ್ಮಿಕೊಳ್ಳುವುದರ ಮೂಲಕ ಸ್ವಚ್ಛತಾ ಕಾರ್ಯಕ್ರಮವನ್ನು ಮಾಡುತ್ತಾ ಪ್ರವಾಸೋದ್ಯಮಕ್ಕೆ ಯೋಗ್ಯವಾದ ಈ ಸ್ಥಳವನ್ನು ಸ್ವಚ್ಛಂದಗೊಳಿಸುತ್ತಾ ಬಂದಿದ್ದರು ಮತ್ತೆ ಉದ್ದೇಶಪೂರ್ವಕವಾಗಿ ಕೆಲವರು ವಿನಾಕಾರಣ ಕಸ ಹಾಕುವ ಮೂಲಕ ತಮ್ಮ ಚಾಳಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಅನೇಕ ಬಾರಿ ಈ ವಿಷಯದ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾದರೂ ಕಡವಾಡ ಗ್ರಾಮ ಪಂಚಾಯತ್ ಹಾಗೂ ನಗರಸಭೆ ಇನ್ನೂವರೆಗೂ ತಮಗೆ ಸಂಬಂಧಿಸಿದಲ್ಲ ಎಂಬುದಾಗಿ ಕಣ್ಮುಚ್ಚಿ ಕುಳಿತುಕೊಂಡಿರುವುದು ಬೇಸರದ ಸಂಗತಿಯಾಗಿದೆ.ಈ ರೀತಿ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಪ್ರಾಣಿಗಳಿಗೆ ಜೀವ ಹಾನಿಯಾಗುತ್ತಿದೆ ಇನ್ನಾದರೂ ಇಂಥ ಕೃತ್ಯವನ್ನು ನಡೆಸದೆ ಈ ಪ್ರದೇಶವನ್ನು ಸ್ವಚ್ಛವಾಗಿ ನೋಡಿಕೊಳ್ಳಬೇಕು ಎಂಬುದು ಸಾರ್ವಜನಿಕರ ಆಶೆಯಾಗಿದೆ.ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮೀನುಗಾರರ ಯುವ ಮುಖಂಡರಾದ ಪ್ರಸಾದ್ ಭೋವಿ,ಪ್ರಕಾಶ್ ಭೋವಿ, ಸುಮಂತ್ ಭೋವಿ,ಚಂದ್ರಹಾಸ್ ಭೋವಿ,ಶ್ರೀ ಗಜಾನನ ಯುವಕ ಮಂಡಳದ ಅಧ್ಯಕ್ಷರಾದ ಸುಶಾಂತ ಭೋವಿ,ಭೋವಿ ಸಮಾಜದ ಹಿರಿಯರಾದ ಕೋಮಾರ್ ಭೋವಿ,ಸತೀಶ್ ಭೋವಿ ಮತ್ತಿತರರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.