ಹನೂರು;ರಾಜ್ಯದಲ್ಲಿ ಹೆಸರು ಮಾಡಿರುವ ನಾಡು ನುಡಿ ಭಾಷೆ ಬಗ್ಗೆ ಹೋರಾಟ ಮಾಡುತ್ತಿರುವ ಕರ್ನಾಟಕ ರಕ್ಷಣೆ ವೇದಿಕೆಯಾ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ರವರಿಂದ ಹನೂರು ತಾಲ್ಲೂಕಿನ ನೂತನ ಶಾಖೆ ಉದ್ಘಾಟನೆ ಮಾಡಿದರು,
ಪಟ್ಟಣದ ಲೋಕೋಪಯೋಗಿ ಇಲಾಖೆಯಾ ವಸತಿ ಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮುಖಾಂತರ ಉದ್ಘಾಟನೆಯನ್ನು ಮಾಡಿದರು.
ಉದ್ಘಾಟನೆ ಮಾಡಿ ಮಾತನಾಡಿದ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಹನೂರು ತಾಲ್ಲೂಕು ರಾಜ್ಯದ ಗಡಿಯಲ್ಲಿ ಇದ್ದರು ಯಾವುದೇ ಅಭಿವೃದ್ಧಿ ಕೆಲಸ ಆಗದೇ ಹಿಂದೆ ಉಳಿದಿರುವುದು ವಿಷಾದಿನಿಯ ಆಗಬೇಕಾಗಿರುವ ಕೆಲಸ ತುಂಬಾ ಇದೆ ರಸ್ತೆ ಅಭಿವೃದ್ಧಿ ಆಸ್ಪತ್ರೆ ಹಾಗೂ ಇನ್ನಿತ್ತಾರ ಸಾಮಾಜಿಕ ಕ್ಷೇತ್ರಗಳು ಅಭಿವೃದ್ಧಿ ಆಗಬೇಕು, ಗಡಿ ನಾಡಿನಲ್ಲಿರುವ ಕನ್ನಡಿಗರು ಮಾತೃ ಭಾಷೆಯಲ್ಲಿ ಮಾತನಾಡಬೇಕು ಇತರರನ್ನು ಒಲಿಸುವುದಕ್ಕೆ ಬೇರೆ ರಾಜ್ಯದ ಭಾಷೆಗಳಲ್ಲಿ ಮಾತನಾಡುತ್ತ ಇದ್ದಾರೆ ಇದ್ದರಿಂದ ಪರ ಭಾಷಿಕರು ನಮ್ಮನ್ನ ಅಕ್ರಮಿಸಿಕೊಳ್ಳತ್ತ ಇದ್ದಾರೆ,ಸರ್ಕಾರ ಗಡಿ ಭಾಗದಲ್ಲಿರುವ ಗ್ರಾಮಗಳ ರೈತರು ಕನ್ನಡಿಗರ ಬಗ್ಗೆ ಗಮನಹರಿಸಿ ಅಭಿವೃದ್ಧಿ ಮಾಡಬೇಕು ಆ ಕೆಲಸ ಇನ್ನೂ ಕೂಡ ಮಾಡುತ್ತಿಲ್ಲ ನಮ್ಮದೇ ಜಾಗಗಳಲ್ಲಿರುವ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳಬೇಕು ಎಂದು ಮಾತನಾಡಿದರು
ಈ ಸಂಧರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಶಿವರಾಜೇಗೌಡ, ಜಿಲ್ಲಾ ಉಸ್ತುವಾರಿ ಎನ್ ಮಂಜೇಶ್, ರಾಜ್ಯ ಕಾರ್ಯದರ್ಶಿ ಲೋಕೇಶ್, ಚಾಮರಾಜನಗರ ಜಿಲ್ಲಾಧ್ಯಕ್ಷ ಆರ್ ಮೋಹನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ್ ಪಾಷಾ, ಹನೂರು ಘಟಕದ ಮಹದೇವ (ರಾಜಣ್ಣ )ಇನ್ನಿತ್ತರು ಹಾಜರಿದ್ದರು.
ವರದಿ ಉಸ್ಮಾನ್ ಖಾನ್.