ಹನೂರು:ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಯುವ ಕ್ರಿಯಾಶೀಲಾತ್ಮಕ ಸಮಾಜ ಸೇವಕ ಮುಖಂಡರಾದ ನಿಶಾಂತ್ ಶಿವಮೂರ್ತಿಯವರು ಭಗವಾನ್ ಬಿರ್ಸಾ ಮುಂಡಾ ಜಯಂತಿಯನ್ನು ಆಚರಣೆ ಮಾಡಿದ್ದರು.ಬಿರ್ಸಾ ಮುಂಡಾ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೀರಿಗೆಗದ್ದೆ ಮಾದಮ್ಮ ರವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿದರು.
ಭಗವಾನ್ ಬಿರ್ಸಾಮುಂಡಾ ಜಯಂತಿ ಅಂಗವಾಗಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸೋಲಿಗ ಸಮುದಾಯದ ಜನರು ಪಟ್ಟಣದ ಮಲೆ ಮಹದೇಶ್ವರ ಬೆಟ್ಟದ ಹೆದ್ದಾರಿಯಿಂದ ಖಾಸಗಿ ಬಸ್ ನಿಲ್ದಾಣದವರೆಗೆ ಮೆರವಣಿಗೆ ಮಾಡಿದರು.
ಬಳಿಕ ಮಾತನಾಡಿದ ನಿಶಾಂತ್ ರವರು ಬುಡಕಟ್ಟು ಸಮುದಾಯದ ನಾಯಕರಾದ ಬಿರ್ಸಾ ಮುಂಡಾ ಅಂದಿನ ಬಂಗಾಳ ಹಾಗೂ ಇಂದಿನ ಜಾರ್ಖಂಡ್ ನಲ್ಲಿ ಬ್ರಿಟಿಷರ ವಿರುದ್ಧ ದಂಗೆಯೇಳುವ ಮೂಲಕ ಬುಡಕಟ್ಟು ಸಮುದಾಯದಲ್ಲಿ ಪ್ರಖ್ಯಾತಿಯನ್ನು ಪಡೆದಿದ್ದರು.ನಂತರ ಸಾಕಷ್ಟು ಹೋರಾಟಗಳಲ್ಲಿ ಇವರು ಹೆಸರುವಾಸಿಯಾಗಿದ್ದಾರೆ.ಇದರಿಂದ ಬಿಸ್ರಾ ಮುಂಡಾ ರವರ ಜನಪ್ರಿಯತೆ ಹೆಚ್ಚಾಗುತ್ತಿದ್ದಾಗ,ಇದನ್ನು ಅರಿತ ಬ್ರಿಟಿಷರು ಬಿರ್ಸಾ ಮುಂಡಾರನ್ನು ಬಂಧಿಸಿ 2ವರ್ಷಗಳ ಕಾಲ ಸೆರೆಮನೆ ವಾಸವನ್ನು ನೀಡಿದ್ದರು.ಬಿರ್ಸಾ ಮುಂಡಾ ರವರು ತಮ್ಮ ಸಮುದಾಯಕ್ಕೆ ಸ್ಥಾನಮಾನ ಕಲ್ಪಿಸಬೇಕು ಎಂದು ತಮ್ಮ ಜೀವನವನ್ನೇ ಮುಡುಪಾಗಿಟ್ಟರು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸೋಲಿಗ ಮುಖಂಡರಾದ ರಂಗೇಗೌಡ,ಸೀಗೆ ಹೊಸೂರು ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಬುಲೆಟ್ ಬಸವರಾಜು,ಬೈಲೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸದಾನಂದ ಮೂರ್ತಿ,ಮುಖಂಡರುಗಳಾದ ರವೀಂದ್ರ,ಕಣ್ಣಪ್ಪ,ಕಿರಣ್,ಚೇತನ್,ಬಾಬು,ಪಾಳ್ಯ ಸಿದ್ದಪ್ಪಾಜಿ,ತೇಜು ಇನ್ನೂ ಮುಂತಾದ ಮುಖಂಡರುಗಳು ಹಾಜರಿದ್ದರು. ವರದಿ ಉಸ್ಮಾನ್ ಖಾನ್ ಬಂಡಳ್ಳಿ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.