ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಾಡಿ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ರೈಲು ಹಳಿ ಚಿದ್ರ; ನೆಲಕ್ಕುರುಳಿದ ಗೂಡ್ಸ್

ಕಲಬುರಗಿ:ಭಾರ ತಾಳಲಾರದೇ ರೈಲು ಹಳಿ ಛಿದ್ರಗೊಂಡು ಗೂಡ್ಸ್ ಗಾಡಿ ನೆಲಕ್ಕುರುಳಿದ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ರೈಲು ನಿಲ್ದಾಣದಲ್ಲಿ ಮಾ.14 ರಂದು ರಾತ್ರಿ 10 ಗಂಟೆ ಸುಮಾರಿಗೆ ಜರುಗಿದೆ.ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸಿಕಂದ್ರಾಬಾದನಿಂದ ವಾಡಿ ಪಟ್ಟಣದ ಗೂಡ್ಸ್‌ ಯಾರ್ಡ್‌ಗೆ ಕಲ್ಲು ಹೊತ್ತುಕೊಂಡು ಬರುತ್ತಿದ್ದ ಗೂಡ್ಸ್ ಟ್ರೈನ್‌ನ ಭಾರ ತಾಳದೇ ಹಳಿಗಳು ಸೀಳಿದ್ದರಿಂದ ಏಕಾಏಕಿ ದೊಡ್ಡ ಸದ್ದಿನೊಂದಿಗೆ 5 ಬೋಗಿಗಳು ನೆಲಕ್ಕೆ ಬಿದ್ದಿವೆ.ರೈಲು ನಿಲ್ದಾಣದ ಕ್ಯಾಂಟೀನ್‌ ಹತ್ತಿರವೇ ಈ ದುರ್ಘಟನೆ ಜರುಗಿದ್ದು ಸದ್ದಿಗೆ ಸುತ್ತಲೂ ಹಾಗೂ ರೈಲು ನಿಲ್ದಾಣದಲ್ಲಿ ಇದ್ದ ಜನರು ಗಾಬರಿಗೊಂಡರು.
ಈ ಘಟನೆ ರೈಲು ಹಳಿಗಳ ನಿರ್ವಹಣೆ ಮೇಲೆ ಪ್ರಶ್ನೆಗಳು ಹುಟ್ಟುವಂತೆ ಮಾಡಿದ್ದು ಆತಂಕಕ್ಕೆ ಕಾರಣವಾಗಿದೆ.
ಘಟನಾ ಸ್ಥಳಕ್ಕೆ ರೈಲ್ವೆ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ದೊಡ್ಡ ಕ್ರೇನ್‌ಗಳ ಸಹಾಯದಿಂದ ಹಳಿಗಳ ಮೇಲಿನ ಬೋಗಿಗಳ ವಿಲೇವಾರಿ ಕಾರ್ಯ ನಡೆಯುತ್ತಿದೆ

ವರದಿ-ಮೊಹಮ್ಮದ್ ಅಲಿ,ಚಿತ್ತಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ