ದಿನಾಂಕ 14 ನವಂಬರ್ 2022 ರಂದು ಕೊಟ್ರೇಶ್ವರ ಮಹಾವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ ಮತ್ತು ಜವಾಹರ್ ಲಾಲ್ ನೆಹರುರವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶಾಂತ ಮೂರ್ತಿ ಬಿ ಕುಲಕರ್ಣಿ ರವರು ವಹಿಸಿಕೊಂಡಿದ್ದರು ವೇದಿಕೆ ಮೇಲೆ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಪ್ರೊ. ರವಿಕುಮಾರ್ ,ಪ್ರೊ. ಸಿದ್ದನಗೌಡ ,ಡಾ. ಶಿವಕುಮಾರ್ ಮತ್ತು ಡಾ. ಪೃಥ್ವಿರಾಜ್ ವೇದಿಕೆ ಮೇಲಿದ್ದರು
ಕಾರ್ಯಕ್ರಮದ ಪ್ರಾರಂಭವನ್ನು ಪ್ರಾರ್ಥನೆ ಗೀತೆಯ ನಂತರ ಜವಾಹರ್ ಲಾಲ್ ನೆಹರುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವುದರ ಮುಖಾಂತರ ಪ್ರಾರಂಭ ಮಾಡಲಾಯಿತು.
ಈ ಕಾರ್ಯಕ್ರಮ ಮಕ್ಕಳ ಗೋಸ್ಕರ ಆಯೋಜನೆ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಮಕ್ಕಳು ಜವಾಹರ್ ಲಾಲ್ ನೆಹರುರವರ ಜೀವನವನ್ನು ಕುರಿತು ತಮ್ಮ ಅನಿಸಿಕೆಯನ್ನು ಬಹಳ ಸುಂದರವಾಗಿ ಸಾದರ ಪಡಿಸಿದರು. ಕುಮಾರಿ ಸುಮಂಗಳ ಮತ್ತು ವೈಷ್ಣವಿ ಅವರ ಅನಿಸಿಕೆ ಕಾರ್ಯಕ್ರಮದಲ್ಲಿ ಹೆಚ್ಚಿನ ಮೆರಗನ್ನು ತಂದುಕೊಡುವಲ್ಲಿ ಯಶಸ್ವಿಯಾಯಿತು.
ಈ ಒಂದು ಸುಂದರ ಸಮಾರಂಭದಲ್ಲಿ ಮಕ್ಕಳಿಗಾಗಿ ಗಾಯನ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳನ್ನು ಗುರುತಿಸಿ ಅಭಿನಂದಿಸಲಾಯಿತು. ವಿಜೇತರಾದ ವಿದ್ಯಾರ್ಥಿಗಳು ಐಶ್ವರ್ಯ ಹೆಚ್.ಎಂ, ಶಬಾನಬಾನು , ಅನ್ನಪೂರ್ಣ, ಗ್ರೇಸಿ ಮತ್ತು ರೇವತಿ ಈ ಕಾರ್ಯಕ್ರಮದ ಗಾಯನ ಸ್ಪರ್ಧೆಯ ವಿಜೇತರಾದ ಮಕ್ಕಳು.
ಏಕಾಗ್ರತೆಯನ್ನು ಹೆಚ್ಚಿಸುವ ಆಟದಲ್ಲಿ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡು ಬಹಳ ಸಂತೋಷದಿಂದ ಆಟವನ್ನು ಹಾಡಿದರು ಆಟದಲ್ಲಿ ವಿಜೇತರಾದ ವಿದ್ಯಾರ್ಥಿಗಳ ಪಟ್ಟಿ ಈ ಕೆಳಗಿನಂತೆ ಇದೆ. ವಿಜೇತರಾದ ವಿದ್ಯಾರ್ಥಿಗಳು ಕುಮಾರಿ ಮುನಿಸಿರ, ನೇತ್ರ, ರಂಜಿತ ವಿಜೇತರಾದ ಮಕ್ಕಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷ್ಯ ನುಡಿಯನ್ನು ಪ್ರೊಫೆಸರ್ ಶಾಂತ ಮೂರ್ತಿ ಬಿ. ಕುಲಕರ್ಣಿ ರವರು ಜವಾಹರ್ ಲಾಲ್ ನೆಹರುರವರು ಒಬ್ಬ ಒಳ್ಳೆಯ ಲೇಖಕ ಮತ್ತು ಒಳ್ಳೆಯ ಆಡಳಿತಗಾರ ಭಾರತದ ಐಕ್ಯತೆಗಾಗಿ ಹೋರಾಡಿದಂತ ಮಹಾ ನೇತಾರ ಎನ್ನುವ ವಿಚಾರವನ್ನು ಬಹಳ ಅರ್ಥಪೂರ್ಣವಾಗಿ ಮಕ್ಕಳಿಗೆ ತಿಳಿಸಿಕೊಟ್ಟರು . ಡಿಸ್ಕವರಿ ಆಫ್ ಇಂಡಿಯಾ ಎನ್ನುವ ಇವರ ಲೇಖನ ಹಿಂದಿಯಲ್ಲಿ ಭಾರತ್ ಕಿ ಕೋಜ್ ಗಳು ಮತ್ತು ಪ್ರಾರಂಭಕ್ಕೆ ಎನ್ನುವುದರ ಬಗ್ಗೆ ಮತ್ತು ಭಾರತದಲ್ಲಿ ಮೊದಲನೇ ಬಾರಿಗೆ ಅಣೆಕಟ್ಟುಗಳು ಮತ್ತು ಐಐಟಿ ಪ್ರಾರಂಭಕ್ಕೆ ಬುನಾದಿಯನ್ನು ಹಾಕಿರುವಂತ ಮಹಾನ್ ಭಾವರು .ಇವರ ಕೊಡುಗೆ ಅಪಾರ ಭಾರತ ದೇಶದಲ್ಲಿ ಬಹಳಷ್ಟು ಅಭಿವೃದ್ಧಿಯ ಕಾರ್ಯಗಳನ್ನು ಕೈಗೊಂಡು ಅವುಗಳನ್ನು ಕಾರ್ಯರೂಪಕ್ಕೆ ತರಲು ಇವರು ಶ್ರಮಿಸಿದರು, ಎನ್ನುವಂತ ವಿಚಾರಗಳನ್ನು ಮಕ್ಕಳೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮದ ಪ್ರಸ್ತಾವಿಕ ಮತ್ತು ಸ್ವಾಗತವನ್ನು ಪ್ರಾಣಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಪೃಥ್ವಿರಾಜ್ ಸಿ. ಬೆಡ್ಜರಿಗೆ ಅವರು ನೆರವೇರಿಸಿದರು .
ಪ್ರಾರ್ಥನಾ ಗೀತೆಯನ್ನು ಕುಮಾರಿ ರೇಖಾ ಮತ್ತು ಐಶ್ವರ್ಯ, ವಂದನಾರ್ಪಣೆಯನ್ನು ಕುಮಾರಿ ರುಚಿತ , ನಿರೂಪಣೆಯನ್ನು ಭಾವನ ನೆರವೇರಿಸಿದರು.
ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಕರಡಕಲ್ಲ್