ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಹೊಳೆಹರಳಹಳ್ಳಿ ಕ್ರಾಸ್‌ನ ಚೆಕ್ ಪೋಸ್ಟ್ ಬಳಿ ಎಸ್.ಎಸ್.ಟಿ. ತಂಡದವರು ಖಾಸಗಿ ಬಸ್ ತಪಾಸಣೆ ಮಾಡಿದ ಸಮಯದಲ್ಲಿ ಅಬ್ದುಲ್ ಖಲೀಲ್ ಎಂಬ ವ್ಯಕ್ತಿಯ ಬ್ಯಾಗಲ್ಲಿ ಯಾವುದೇ ದಾಖಲೆಗಳಿಲ್ಲದ 17 ಮೊಬೈಲ್‌ಗಳನ್ನು ಮತ್ತು ನಂದಿಗುಡಿಯ ಪ್ರೌಢಶಾಲಾ ಶಿಕ್ಷಕರಾದ ಎಚ್.ಡಿ.ಗಡೆಕಟ್ಟೆ ಅವರ ದ್ವಿಚಕ್ರ ವಾಹನವನ್ನು ತಪಾಸಣೆ ಮಾಡಿದಾಗ ಯಾವುದೇ ದಾಖಲೆಗಳಿಲ್ಲದ 3,98,000 ರೂ. ಹಣವನ್ನು ವಶಕ್ಕೆ ಪಡೆದು ಖಜಾನಾಧಿಕಾರಿಗಳ ಸುಪರ್ದಿಗೆ ಒಪ್ಪಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಅಭಿಷೇಕ್ ತಿಳಿಸಿದರು.
ನ್ಯಾಮತಿ ತಹಶೀಲ್ದಾರ್ ಫಿರೋಜ್ ಷಾ ಸೋಮನಕಟ್ಟಿ,ಹೊನ್ನಾಳಿ ತಹಶೀಲ್ದಾರ್ ಪುರಂದರ ಹೆಗ್ಡೆ,ಫೈಯಿಂಗ್ ಸ್ವಡ್ ಕೃಷಿ ಅಧಿಕಾರಿ ಅತೀಕ್ ಉಲ್ಲಾ,ಎಸ್.ಎಸ್.ಟಿ.ತಂಡದ ಉಪನ್ಯಾಸಕ ಎಚ್.ದೊಡ್ಡಸ್ವಾಮಿ,ಎಚ್.ಎಲ್.ಬಸವರಾಜ್, ಪೊಲೀಸ್ ಸಿಬ್ಬಂದಿ ಎಚ್.ಎಲ್. ಉಮೇಶ್,ಗ್ರಾಮ ಆಡಳಿತಾಧಿಕಾರಿ ಭರ್ಮಪ್ಪ ಅಂಚಿನಮನೆ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.