ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲ್ಲೂಕಿನ ಪೋಲಿಸ್ ಠಾಣೆಯ ಆವರಣದಲ್ಲಿ ಜರುಗಿದ ಹೋಳಿ ಹಬ್ಬದ ಕುರಿತ ಶಾಂತಿ ಸಭೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುವದರ ಜೊತೆಗೆ ಎಲ್ಲಾ ಸಮಾಜದವರು ಒಂದಾಗಿ ಹೋಳಿ ಹಬ್ಬವನ್ನು ಆಚರಿಸಲು ಪ್ರಯತ್ನಿಸಿ ಎಂದು ಪಿ ಎಸ್ ಆಯ್ ಘೋರಿ ಹೇಳಿದರು. ಮಂಗಳವಾರ ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಕರೆದ ಸರ್ವ ಸಮಾಜದ ಗಣ್ಯರ ಶಾಂತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೋಳಿ ಹಬ್ಬ ಒಂದು ಸಂತೋಷದ ಸಂದರ್ಭವಾಗಿದೆ ಆ ಸಂತೋಷದಲ್ಲಿ ಎಲ್ಲರೂ ಭಾಗಿ ಆಗುವಂತಾಗಬೇಕು ಒತ್ತಾಯ ಪೂರಕವಾಗಿ ಯಾರಿಗೂ ಬಣ್ಣ ಹಾಕಬೇಡಿ ಬಣ್ಣ ಆಡುವಾಗ ರಾಸಾಯನಿಕ ಬಣ್ಣಗಳ ಬದಲಿಗೆ ನೈಸರ್ಗಿಕ ಬಣ್ಣ ಬಳಿಸಬೇಕು ಆಡುವಾಗ ಕುಡಿದು ಗಲಾಟೆ ಮಾಡಿರುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಒತ್ತಾಯ ಪೂರಕವಾಗಿ ವಾಹನ ಚಾಲಕರಿಂದ ಹಣ ವಸೂಲಿ ಮಾಡಬಾರದು ಇಲಾಖೆಯ ನಿರ್ದೇಶನಗಳನ್ನು ಪಾಲಿಸಿ ಎಂದರು. ಮುಖಂಡ ವಿಜಯ ಸಿಂಗ ಹಜೇರಿ ಮಾತನಾಡಿ ಪಟ್ಟಣದಲ್ಲಿ 26,27 ರಂದು ಬಣ್ಣವನ್ನು ಆಡಲಾಗುವುದು ಪ್ರತಿವರ್ಷ ಹಬ್ಬವನ್ನು ನಾವು ಪಟ್ಟಣದಲ್ಲಿ ಹಿಂದೂ ಮುಸ್ಲಿಮರೆಲ್ಲರೂ ಕೂಡಿಕೊಂಡು ಆಚರಿಸುತ್ತೇವೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಾವು ನೋಡಿಕೊಳ್ಳುತ್ತೇವೆ ಇದಕ್ಕೆ ಇಲಾಖೆಯ ಸಹಕಾರವೂ ಬೇಕು ಎಂದರು.ದಲಿತ ಮುಖಂಡ ಜೈ ಭೀಮ್ ಮುತ್ತಗಿ ಮಾತನಾಡಿ ಹೋಳಿ ಹಬ್ಬದ ಇತಿಹಾಸ ಬೇರೆ ರೀತಿ ಆಗಿದ್ದರೂ ಇದನ್ನು ಮೊದಲಿನಿಂದಲೂ ಆಚರಿಸಿಕೊಂಡು ಬರುತ್ತಿರುವುದರಿಂದ ಹಬ್ಬವನ್ನು ಶಾಂತರೀತಿಯಿಂದ ಆಚರಿಸಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ ನಮಗೆಲ್ಲರಿಗೂ ಪಟ್ದಣದ ಶಾಂತಿ ಮುಖ್ಯವಾಗಬೇಕು ಎಂದರು.ಈ ಸಮಯದಲ್ಲಿ ಮುರುಗೇಶ ವಿರಕ್ತಮಠ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ,ಎಂ ಕೆ ಚೋರಗಸ್ತಿ,ಸಿದ್ದನಗೌಡ ಪಾಟೀಲ್ ನಾವದಗಿ, ಮುರಿಗೆಪ್ಪ ಸರಶಟ್ಟಿ,ಕಾಶಿನಾಥ್ ಮುರಾಳ,ಶಶಿಧರ ಡಿಸಲೆ,ಶಿವಶಂಕರ ಹಿರೇಮಠ,ಮಹಾಂತೇಶ ಮುರಾಳ, ಫಯಾಜ್ ಉತ್ನಾಳ,ಅಮಿತ್ ಮನಗೂಳಿ,ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ,ಅಣ್ಣಾರಾವ ಜಗತಾಪ,ಜೈಸಿಂಗ್ ಮೂಲಿಮನಿ,ಪರಶುರಾಮ್ ತಂಗಡಗಿ,ಇಬ್ರಾಹಿಂ ಮನ್ಸೂರ,ಮೋದಿನಸಾ ನಗಾಚಿ೯ ಮತ್ತಿತರರು ಇದ್ದರು.
ವರದಿ:ಉಸ್ಮಾನ ಬಾಗವಾನ