ಯಾದಗಿರಿ ಶಹಾಪುರ ತಾಲೂಕಿನ ದರ್ಶನಾಪೂರ ಗ್ರಾಮದ ಕೃಷಿಕ ಸಂಸ್ಕೃತಿಯ ಮನೆತನದ ರಾಯಪ್ಪಗೌಡ ತಾಯಿ ತಿಪ್ಪಮ್ಮಗೌಡ್ತಿ ಎಂಬ ದಂಪತಿಗಳ ಮಗನಾದ ದಿ.ಬಾಪುಗೌಡರು ಶಹಾಪುರ ತಾಲೂಕಿನ ವಿಧಾನಸಭೆ ಸದಸ್ಯರಾಗಿ. ತಾಲೂಕಿನ ಅಭಿವೃದ್ಧಿ ಮಂಡಳಿಯ ಡಿ.ಸಿ.ಸಿ ಬ್ಯಾಂಕ್ ಕಲಬುರ್ಗಿಯ ಅಧ್ಯಕ್ಷರಾಗಿ ಸರ್ಕಾರದ ಮುಖ್ಯ ಸಚೇತಕರಾಗಿ ಸಣ್ಣ ಕೈಗಾರಿಕಾ ಸಚಿವರಾಗಿ ಗೃಹ ಮಂಡಳಿಯ ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರದಲ್ಲಿ ವಿವಿಧ ಹುದ್ದೆಗಳನ್ನು ಹೊತ್ತುಕೊಂಡು ಆ ಸ್ಥಾನಗಳಿಗೆ ಮೌಲ್ಯವನ್ನು ಮತ್ತು ಮಹತ್ವವನ್ನು ತಂದು ಕೊಡುವ ರೀತಿಯಲ್ಲಿ ರಚನಾತ್ಮಕ ಕಾರ್ಯಗಳನ್ನು ನಿರ್ವಹಿಸಿದರು. ಜನಪರ ಕಾಳಜಿಯಿಂದ ಎಲ್ಲರಿಗೂ ಬೇಕಾಗಿದ್ದರು ದಿ. ಬಾಪುಗೌಡ ಜನಸಾಮಾನ್ಯರ ಮತ್ತು ದಿನದಲಿತರ ಹಿಂದುಳಿದವರು ಅಲ್ಪಸಂಖ್ಯಾತರ ನಾಡಿ ಮಿಡಿತ ಬಡವರ ಬಗ್ಗೆ ತುಂಬಾನೇ ಕಾಳಜಿ ಉಳ್ಳವರಾಗಿದ್ದರು. ಸರಳ ಸಹೃದಯ ಸ್ಪಂದನಾಶೀಲ ಸಜ್ಜನ್ ರಾಜಕೀಯ ಮುತ್ಸದ್ದಿ ಯಾಗಿದ್ದರು ಬಾಪು ಗೌಡರು.
ನಾಡಿನ ಸರ್ವಾಂಗೀಣ ಅಭಿವೃದ್ದಿಗೆ ಕಂಕಣಬದ್ದರಾಗಿದರು ಬಾಪು ಗೌಡರು ತಮ್ಮ ದೂರದೃಷ್ಟಿ ಮತ್ತು ಜನಪರ ಎಲ್ಲಾ ವರ್ಗದವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಶಿಕ್ಷಣ ಪ್ರೇಮಿಯಾಗಿದ್ದ ಅವರು ಕಲ್ಯಾಣ ಕರ್ನಾಟಕ ಭಾಗದ ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಮಹತ್ತರವಾದ ಕಾರ್ಯನಿರ್ವಹಿಸಿದ್ದಾರೆ.
ಗುಲ್ಬರ್ಗ ವಿಶ್ವವಿದ್ಯಾಲಯ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಸ್ಥಾಪಿಸುವಲ್ಲಿ ಬೆನ್ನೆಲುಬಾಗಿ ನಿಂತಿದ್ದರು ಗ್ರಾಮೀಣ ಜನತೆಗೆ ಉನ್ನತ ಶಿಕ್ಷಣ ದೊರೆಯಬೇಕೆಂಬ ಕನಸಿನೊಂದಿಗೆ ಶಹಾಪುರದಲ್ಲಿ ಶ್ರೀ ಚರಬಸವೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿದರು. ಹಾಗೂ ಸಂಸ್ಥೆಯ ಸಂಸ್ಥಾಪಕರಾಗಿ ಶ್ರೀ ಚರಬಸವೇಶ್ವರ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ ಶ್ರೀ ಚರಬಸವೇಶ್ವರ ಪ್ರೌಢ ಶಾಲೆ ಹಾಗೂ ಬಾಪುಗೌಡರು ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದರ ಮೂಲಕ ಶ್ರೀ ಚರಬಸವೇಶ್ವರ ಗ್ರಾಮೀಣ ಬಾಲಕಿಯರ ವಿದ್ಯಾರ್ಥಿನಿಲಯ ಮುಂತಾದ ಶಾಲಾ ಕಾಲೇಜುಗಳು ಪ್ರಾರಂಭಿಸಿದರು. ನಾಡಿನ ಶೈಕ್ಷಣಿಕ ಹಸಿವನ್ನು ತಣಿಸಲು ಶ್ರಮಿಸಿದರು ಈ ಮೂಲಕ ಬಾಪು ಗೌಡರು ನಾಡಿನ ಸಾಂಸ್ಕೃತಿಕ ಜೀವನಕ್ಕೆ ಹೊಸ ಆಯಾಮ ನೀಡಿದರು.
ಬಾಪು ಗೌಡರು ನಿಧನದ ನಂತರ ಅವರ ಸಹೋದರ ಬಸವರಾಜಪ್ಪ ಗೌಡ ದರ್ಶನಪೂರ ಮತ್ತು ಬಾಪು ಗೌಡರ ಹಿರಿಯ ಪುತ್ರ ಶ್ರೀ ಶರಣಬಸಪ್ಪ ಗೌಡ ದರ್ಶನಪುರ ಅವರ ಶೈಕ್ಷಣಿಕ ಕಾಳಜಿಯಿಂದ ಇಂದು ದಿ.ಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ ಪದವಿ ಮಹಾವಿದ್ಯಾಲಯವನ್ನು ಪ್ರಾರಂಭಿಸಿದ್ದಾರೆ. ಬಾಪು ಗೌಡರ ಆಶಯದಂತೆ ಇಂದು ಈ ಶೈಕ್ಷಣಿಕ ಸಂಸ್ಥೆ ನಾಡಿನಲ್ಲಿ ಪ್ರತಿಷ್ಠಿತ ವಿದ್ಯಾಸಂಸ್ಥೆ ಯಾಗಿ ಜ್ಞಾನ ಪ್ರಸಾರ ಕಾರ್ಯದಲ್ಲಿ ತೊಡಗಿಸಿ ಕೊಂಡದೆ ಸರಳ ಸಜ್ಜನಿಕೆಗೆ ಹೆಸರಾಗಿದ್ದ ಬಾಪು ಗೌಡರು ಸಾರ್ವಜನಿಕ ಕಾರ್ಯದ ಜೊತೆಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ಸದಾ ಪ್ರೋತ್ಸಾಹ ನೀಡಿ ಬೆಳೆಸುತ್ತಿದ್ದರು. ತೀರ್ವವಾದ ಸಾಮಾಜಿಕ ಕಾಳಜಿ ಸಹಕಾರಿ ತತ್ವದ ಉದಾತ್ತ ಭಾವನೆಗಳು.ತಾವು ನಂಬಿದವರನ್ನು ಮಿತ್ರರನ್ನು ಅಭಿಮಾನದಿಂದ ಕಾಣುವ ಸ್ನೇಹಪರತೆವುಳ್ಳ ರಾಜಕಾರಣಿಯಾಗಿ ತುಳು ಸಮೂದಾಯಗಳ ಅಭಿವೃದ್ಧಿಗೆ ಸದಾ ತುಡಿತವುಳ್ಳವರಾಗಿದ್ದರು ಬಾಪ್ಪಗೌಡರದ್ದು ನಾಡು ಮುಚ್ಚುವ ಬದುಕಾಗಿತ್ತು. ರಾಜಕಾರಣದಲ್ಲಿ ಬಾಪುಗೌಡ ದರ್ಶನಾಪುರ ಅವರು ಸ್ಮರಣೇಯ ವ್ಯಕ್ತಿಗಳಾಗಿ ಬದುಕು ಮತ್ತು ಸಾದನೆ ನಿಲ್ಲುತ್ತಾರೆ ಇಂದಿನ ಅನುಕರಣೇಯ ಮತ್ತು ರಾಜಕೀಯ ಮತ್ತು ಮಾದರಿಯಾಗಿದ್ದಾರೆ.
ವರದಿ
ರಾಜಶೇಖರ ಮಾಲಿ ಪಾಟೀಲ್