ಮುಂಡಗೋಡ ತಾಲೂಕಿನಲ್ಲಿ ಬೈಕ್ ಅಪಘಾತದಲ್ಲಿ ಸಾವನ್ನಪ್ಪುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಸಾಮಾನ್ಯವಾಗಿ ಅಪಘಾತವಾದಾಗ ಕಂಡು ಬರುತ್ತಿರುವ ಅಂಶವೇನೆಂದರೆ ವಾಹನ ಸವಾರರು ಬೈಕ್ ಚಾಲನೆ ವೇಳೆ ಹೆಲ್ಮೆಟ್ ಧರಿಸದೆ ಇರುವುದು ಇದರಿಂದ ಅಪಘಾತವಾದಾಗ ತಲೆಗೆ ಹೆಚ್ಚಿನ ಏಟು ಬಿದ್ದು, ಸಾವು ಸಂಭವಿಸುತ್ತದೆ,
ಎಸ್ಟೊಂದು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುತ್ತಿದ್ದರು ಸ್ಟೈಲ್ ಹೊಡೆಯಲು ಹೋಗುವ ಹುಡುಗರು ಶೋಕಿಗಾಗಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿರುವುದು ಶೋಚನೀಯ.
ಎಲ್ಲರಿಗೂ ಒಂದು ಕಿವಿ ಮಾತು ಹೆಲ್ಮೆಟ್ ಇಲ್ಲದೇ, ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದೇ ಪ್ರಯಾಣ ಅಪಾಯ ತಂದು ಒಡ್ಡುತ್ತದೆ.
ಮೆದುಳಿನ ಕಾಂಡದ ವೈಫಲ್ಯ
(ಬ್ರೇನ್ ಸ್ಟೆಮ್ ಫೆಲ್ಯೂರ್)
ಮೆದುಳು ಬಿಟ್ಟು ಉಳಿದೆಲ್ಲ ಅಂಗ ಕಾರ್ಯ ನಿರ್ವಹಿಸುವುದು . ಆದರೆ ಮುಖ್ಯವಾಗಿ ಮೆದುಳು ಕೆಲಸ ಮಾಡುವುದು ನಿಲ್ಲಿಸುವುದು.
ಬ್ರೈನ್ ಸ್ಟೆಮ್ ವಿಫಲವಾದರೆ … ಸತ್ತು ಬದುಕಿದಂತೆ.. ಯಾಕೆ ಅಂತ ಕೇಳ್ತೀರಾ ಬ್ರೈನ್ ತನ್ನ ಕಾರ್ಯ ನಿರ್ವಹಸಬೇಕಾದ ಕಾರ್ಯ ನಿರ್ವಹಣೆ ಮಾಡಲ್ಲ. ದೇಹದ ಉಳಿದ ಅಂಗಗಳು ಕಾರ್ಯ ನಿರ್ವಹಿಸುತ್ತದೆ. ಕೆಲವೊಂದು ಸಲ ಹೀಗೂ ಮಾಡಿದ್ದು ಉಂಟು ವೆಂಟಿಲೇಟರ್ ಇಟ್ಟು ಇರುವಷ್ಟು ದಿನ ಇರಲಿ ಅಂತ. ಆದ್ರೆ ಅದು ವೇಸ್ಟ್ ಆ ಕಡೆ ದೇಹಕ್ಕೂ ತ್ರಾಸ ನೋಡುವವರಿಗೂ ಕಷ್ಟ.
ಈಗ ಹೆಚ್ಚಿನವರು ಅರ್ಥ ಮಾಡಿ ಕೊಂಡು ಅಂಗದಾನ ಮಾಡಿ ಅಲ್ಲಿ ತಮ್ಮವರನ್ನು ಕಾಣುತ್ತಾರೆ.
ನಾವು ಗಮನಿಸ ಬೇಕಾದ್ದು ಅಂಶಗಳು ಮೆದುಳು ಭಾಗಗಳು, ಯಾಕೆ ಮೆದುಳು ನಮಗೆ ಮುಖ್ಯ ವೈಫಲ್ಯ ಆದ್ರೆ ಏನು ಆಗ್ತದೆ ?
3 ಭಾಗಗಳು
1.ಮುಮ್ಮೆದುಳು 2.ಮದ್ಯ ಮೆದುಳು 3.ಹಿಮ್ಮೆದುಳು.
1.ಮುಮ್ಮೆದುಳು:
ಯೋಚನೆ , ನೆನಪಿಗೆ ಸಂಭಂದ ಪಡುತ್ತದೆ,
2.ಮದ್ಯ ಮೆದುಳು : ಸಂದೇಶ ರವಾನಿಸುತ್ತದೆ,
3 .ಹಿಮ್ಮೆದುಳು:
ಉಸಿರಾಟ, ಆಹಾರ ತಿನ್ನುವುದು,
ಶರೀರದ ಸಮತೋಲನ .
ಉಸಿರಾಟ ಹೃದಯ ಬಡಿತ, ರಕ್ತದ ಒತ್ತಡ.
ಮೆದುಳು ಮತ್ತು ಬೆನ್ನು ಹುರಿ ಕಾರ್ಯ ಮತ್ತು ಮಹತ್ವ :
ಮೆದುಳು ಮತ್ತು ಬೆನ್ನು ಹುರಿ ನರಮಂಡಲದ ದೇಹದ ಬಹು ಮುಖ್ಯ ಅಂಗ, ದೇಹದ ನರಮಂಡಲದ ಮುಖ್ಯಭಾಗ ಮೆದುಳಿನ ನರ ಮಂಡಲ ಇದು ನಮಗೆ ಸಂಕೇತವನ್ನು ಕೊಡುತ್ತದೆ.
ಯಾಕೆ ಅಂದ್ರೆ ಮೆದುಳಿನಿಂದ ಬೆನ್ನು ಹುರಿಗೆ ಹೋಗಿ ಆ ಸಂಕೇತಗಳು ಇತರ ಕಡೆ ಹೋಗುತ್ತದೆ .
ಮೆದುಳಿನ ಬಳ್ಳಿ ( ಬ್ರೈನ್ ಸ್ಟೆಮ್) ಇದು ಮೆದುಳಿಗೂ ಬೆನ್ನು ಹುರಿಗು ಮುಖ್ಯ ದ್ವಾರ ಇದ್ದಹಾಗೆ.
ಮೆದುಳು ಬಳ್ಳಿ ಕಾರ್ಯ ನಿರ್ವಹಣೆ ಮಾಡಿಲ್ಲ ಅಂದ್ರೆ ಅಥವಾ ಅದು ಅಪಾಯಕ್ಕೆ ಒಳಗಾದರೇ ,
ತೀವ್ರ ಗಾಯದಿಂದ ಚಟುವಟಿಕೆ ನಿಲ್ಲಿಸುತ್ತದೆ.
ಅದು ಚಟುವಟಿಕೆ ನಿಲ್ಲಿಸಿದರೆ ಮೆದುಳಿನಿಂದ ಯಾವ ಸಂದೇಶ ರವಾನೆ ಆಗುವುದಿಲ್ಲ.
ಅಲ್ಲಿಗೆ ಮುಖ್ಯ ಕಚೇರಿ ಸಂದೇಶ ನಿಲ್ಲಿಸುತ್ತದೆ ಆದ್ರೂ ಕೂಡ ದೇಹದ ಭಾಗ ಚಾಲನೆ ಇರುತ್ತದೆ.
ಹೋಗ್ತಾ ಹೋಗ್ತಾ ಬಿಪಿ ಹೆಚ್ಚಳ ಆಗುತ್ತದೆ ಇದರಿಂದ ಹೃದಯ ರಕ್ತ ಚಲನೆ ಜಾಸ್ತಿ ಆಗುತ್ತದೆ…
ಹೃದಯ ಮತ್ತು ಇತರ ಅಂಗಾಂಗ ತನ್ನ ಕಾರ್ಯ ವೈಫಲ್ಯ ತೋರಿಸಲಿಕ್ಕೆ ಶುರು
ಮಾಡುತ್ತವೆ. ಹೀಗೆ ಮನುಷ್ಯ ತನ್ನ ಜೀವನ ಜೀವ ಎರಡು ಕಳೆದುಕೊಳ್ತಾನೆ.