ಮೈಸೂರು.. ಸಂವಿಧಾನವನ್ನು ಪರಿಣಾಮಕಾರಿಯಾಗಿ ಬೆಳೆಸಿಕೊಳ್ಳಲು ಶೋಷಿತ ಸಮುದಾಯಗಳಲ್ಲಿ ಜಾಗೃತಿ ಉಂಟಾಗಬೇಕಿದೆ ಅಂಬೇಡ್ಕರ್ ನೀಡಿರುವ ಸಂವಿಧಾನವನ್ನು ನಾವು ಬೇರೆಯವರಿಗೆ ನೀಡುವ ಮೂಲಕ ನಾವು ಇಂದಿಗೂ ಶೋಷಣೆಗೆ ಗುರಿಯಾಗುತ್ತಿದ್ದೇವೆ ಈ ಶೋಷಣೆಯಿಂದ ವಿಮೋಚನೆ ಹೊಂದಲು ನಾವು ದಲಿತ ಮುಖ್ಯಮಂತ್ರಿ ಕರ್ನಾಟಕದಲ್ಲಿ ಪಡೆಯಲೇಬೇಕು ಎಂಬ ಸಂಕಲ್ಪ ತೊಡಬೇಕು ಎಂದು ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಅವರು ನುಡಿದರು. ಮೈಸೂರಿನ ಮಾನಸ ಗಂಗೋತ್ರಿ ಸನೆಟ್ಟ ಭವನದಲ್ಲಿ ಮಂಗಳವಾರ ಕರ್ನಾಟಕ ಸ್ವಾಭಿಮಾನಿ ಎಸ್ ಸಿ – ಎಸ್ ಟಿ ಸಂಘಟನೆಗಳ ಒಕ್ಕೂಟದ ಮೈಸೂರು ಜಿಲ್ಲಾ ಸಮಿತಿ ಆಯೋಜಿಸಿದ್ದ ಎಸ್ ಸಿ – ಎಸ್ ಟಿ ಸಮುದಾಯದ ಎಲ್ಲಾ ಸ್ವಾಮೀಜಿಗಳ ಗೌರವ ಸಮರ್ಪಣೆ ಮತ್ತು ಚಿಂತನ ಮಂಥನ ಹಾಗೂ ವಿಚಾರ ಸಂಕೀರ್ಣ ಸಂದರ್ಭದಲ್ಲಿ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ ಅವರು ಮಾತನಾಡುತ್ತಿದ್ದರು.
ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನ ನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಹೋರಾಟದ ಫಲವಾಗಿ ರಾಜ್ಯದಲ್ಲಿ ಎಸ್ ಸಿ – ಎಸ್ ಟಿ ಮೀಸಲಾತಿ ಹೆಚ್ಚಳಕ್ಕೆ ಸರಕಾರ ತೀರ್ಮಾನ ಕೈಗೊಂಡಿದೆ ಅಂತೆ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಎಸ್ ಸಿ – ಎಸ್ ಟಿ ಸಮುದಾಯ ಒಗ್ಗಟ್ಟಿನ ಶಕ್ತಿ ಪ್ರದರ್ಶನ ಪ್ರದರ್ಶಿಸುವುದು ಅಗತ್ಯವಿದೆ ರಾಜ್ಯದಲ್ಲಿ ಯಾವುದೇ ಕ್ಷೇತ್ರದಲ್ಲಿ ಎಸ್ ಸಿ ಎಸ್ ಟಿ ಸಮುದಾಯ ಯಾವುದೇ ಪಕ್ಷದಿಂದ ಸ್ಪರ್ಧಿಸಿದರು ಅವರನ್ನು ಗೆಲ್ಲಿಸುವ ನಿರ್ಧಾರವನ್ನು ಸಮುದಾಯಗಳು ಮಾಡಬೇಕು ಎಂದು ಸಮಾರಂಭದಲ್ಲಿ ಮಾತನಾಡಿದ ಸ್ವಾಮೀಜಿಗಳು ಕರೆ ನೀಡಿದರು. ಗುರು ಸಾಧನೆಗೆ ಸಮುದಾಯದ ಗುರುಗಳ ಆಶೀರ್ವಾದದ ಅವಶ್ಯಕತೆ ಇದೆ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಮೀಸಲಾತಿ ಹೋರಾಟ ಫಲ ನೀಡಿದೆ. ಇದೇ ರೀತಿ ಹೋರಾಟಗಳಲ್ಲಿ ಜಯ ಸಾಧಿಸಲು ಸ್ವಾಮೀಜಿಗಳು ಮಾರ್ಗದರ್ಶನ ನೀಡಬೇಕು ಜನಸಂಖ್ಯೆ ಇರುವ ಎಸ್ ಸಿ ಎಸ್ ಟಿ ಸಮುದಾಯ ಮುಂಬರುವ ಚುನಾವಣೆಯಲ್ಲಿ ಶಕ್ತಿ ಪ್ರದರ್ಶಿಸಬೇಕು ಮೀಸಲು ಕ್ಷೇತ್ರಗಳಲ್ಲಿ ಅಲ್ಲದೆ ಸಾಮಾನ್ಯ ಕ್ಷೇತ್ರಗಳಲ್ಲೂ ಈ ಸಮುದಾಯ ಸ್ಪರ್ದಿಸಬೇಕು ಎಂದು ನುಡಿದರು. ಗೆಲುವು ಸಾಧ್ಯವಾಗದಿದ್ದರೆ ಕನಿಷ್ಠಪಕ್ಷ ಎಲ್ಲಾ ಕ್ಷೇತ್ರಗಳಲ್ಲೂ ಫಲಿತಾಂಶ ಬದಲಿಸುವ ಶಕ್ತಿ ಎಸ್ಸಿ- ಎಸ್ ಟಿ ಸಮುದಾಯಕ್ಕಿದೆ ಎಂಬ ಸಂದೇಶ ಹೋಗಬೇಕು ಎಂದು ಸ್ವಾಮೀಜಿಗಳು ಕರೆ ನೀಡಿದರು.
ಶಿಕ್ಷಣ ಮನುಷ್ಯನನ್ನು ಸ್ವಾಭಿಮಾನಿಯಾಗಿಸುತ್ತದೆ ಶಿಕ್ಷಣ ವಂಚಿತ ಸಮುದಾಯಗಳು ಶೋಷಣೆಗೆ ಗುರಿಯಾಗುತ್ತವೆ ಇದನ್ನು ಅರಿತುಕೊಳ್ಳಬೇಕು ಗುಲಾಮಗಿರಿಯಿಂದ ಮುಕ್ತರಾಗಲು ಮೀಸಲಾತಿಯ ಅವಶ್ಯಕತೆ ಇದೆ ಆದರೆ ಸರ್ಕಾರ ಮೀಸಲಾತಿ ಪ್ರಮಾಣ ಕಡಿಮೆ ಮಾಡುತ್ತಿದ್ದು ಖಾಸಗಿಕರಣ ಹೆಚ್ಚುತ್ತಿದೆ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿಗಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂದಿದೆ ಎಂದು ಲೇಖಕ ಎಂ ಗೋಪಿನಾಥ್ ಕರೆ ನೀಡಿದರು.