ಯಾದಗಿರಿ:ಕಿಲ್ಲನಕೇರಾ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದ್ದು,ಕುಡಿಯುವ ನೀರಿಗಾಗಿ ಗ್ರಾಮಸ್ಥರು 9 ಕಿ.ಮೀ ದೂರದ ಸೈದಾಪೂರಕ್ಕೆ ಹೋಗಿ ಶುದ್ದ ನೀರು ತರಬೇಕಾಗಿದೆ ಈ ಸಮಸ್ಯೆ ಸರಿಪಡಿಸದಿದ್ದರೆ ಮುಂದಿನ ಲೋಕಸಭಾ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಯಾದಗಿರಿ ತಾಲ್ಲೂಕಿನ ಕಿಲ್ಲನಕೇರಾ ಗ್ರಾಮ ಪಂಚಾಯಿತಿಯ ಕಿಲ್ಲನಕೇರಾ ಗ್ರಾಮದಲ್ಲಿ ಸುಮಾರು 500 ಕ್ಕೂ ಹೆಚ್ಚು ಮನೆಗಳಿದ್ದು 2500 ಕ್ಕೂ ಮತದಾರರು ಇದ್ದಾರೆ.ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿದ್ದರೂ,ಕೆಟ್ಟು ನಿಂತು ಸುಮಾರು ವರ್ಷ ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ನೀರಿನ ಘಟಕ ಸರಿಪಡಿಸದೆ ಇರುವುದರಿಂದ ಶುದ್ದ ನೀರಿಗಾಗಿ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.
ದ್ವಿಚಕ್ರ ವಾಹನ ಹೊಂದಿರುವವರು ದೂರದೂರಿಂದ ನೀರು ತರುತ್ತಾರೆ ವಾಹನ ಇಲ್ಲದವರು ಏನು ಮಾಡಬೇಕು.
ಕಿಲ್ಲನಕೇರಾ ಗ್ರಾಮದಲ್ಲಿ ಕಿಡ್ನಿಯ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ 100 ಗಡಿ ದಾಟಿದೆ ಇದಕ್ಕೆಲ್ಲ ಮುಖ್ಯ ಕಾರಣ ಶುದ್ದ ಕುಡಿಯುವ ನೀರಿನ ಘಟಕ ಇಲ್ಲದಿರುವುದೇ ಆಗಿದೆ.
ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡುವಂತೆ ಪಿಡಿಓ ಅವರಿಗೆ,ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜವವಾಗಿಲ್ಲ ಬೇರೆ ಊರಿಂದ ನೀರು ತರುವ ಗೋಳು ತಪ್ಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಮಸ್ಯೆಗೆ ಆದಷ್ಟು ಬೇಗ ಮುಕ್ತಿ ನೀಡದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರಾದ ಬನ್ನಪ್ಪ ಹೊಸಮನಿ,ಮಹಿಬೂಬಸಾಬ್ ಕತ್ತಣ್ಣೋರ್, ರಾಘವೇಂದ್ರ ಅಗಸಿಮುಂದಳ್,ಲಕ್ಷ್ಮಣ ಬಾವೂರ,ದೇವಣ್ಣ ನಾಟೇಕಾರ ಟವರ್,ಉಮೇಶ ಧೋತ್ರೆ,ಬಸವರಾಜ ಬಾವೂರ,ನಿಂಗಪ್ಪ ಹೊನ್ನಪ್ಪನ್ನೋರ್,ನರಸಪ್ಪ ಆಶಪ್ಪನ್ನೋರ್,ಮರೆಪ್ಪ ಬಾವೂರ ಶಿಲ್ಪಿ,ಖಾಜಪ್ಪ ಪಿಂಜಾರ್,ಬೀರಲಿಂಗಪ್ಪ ಎದ್ದೇರಿ,ಪಿಲಿಂಗ ಬಾವೂರ,ಬೆಂಜೆಮಿನ್ ದಳಪತಿ,ಭೀಮು ನಾಟೇಕಾರ,ಈರಪ್ಪ ಬಾವೂರ,ಸಾಬರೆಡ್ಡಿ ಅಗಸಿಮುಂದಳ್,ಸಾಬಣ್ಣ ಘಂಟಿ,ಪರಶುರಾಮ ಬಡಗೇರ,ಬನ್ನಪ್ಪ ಹಡಪದ, ಮಲ್ಲಪ್ಪ ಕಾವಲಿ ಸೇರಿದಂತೆ ಇನ್ನಿತರರು ದೂರಿದ್ದಾರೆ.
ವರದಿ:ಶಿವರಾಜ್ ಸಾಹುಕಾರ್ ವಡಗೇರಾ