ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹರಳಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರೊಫೆಸರ್ ಕೃಷ್ಣಪ್ಪ ನಗರಕ್ಕೆ ಜಲೋತ್ಸವ ಮನೆ ಮನೆಗೆ ಗಂಗೆ ಯೋಜನೆಯಡಿ 2021/22 ನೇ ಸಾಲಿನಲ್ಲಿ 35,89,768 ರೂಗಳ ಖರ್ಚು ಮಾಡಿದ್ದಾರೆ ಆದರೆ
ಇಂದು ಈ ನೀರನ್ನು ಕುಡಿಯಬೇಕೋ ಅಥವಾ ಬೀಡಬೇಕೋ ಎಂದು ಭಯವಾಗುತ್ತಿದೆ.
ಏಕೆಂದರೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕಾದ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಇಂದು ಕಣ್ಮುಚ್ಚಿ ಕುಳಿತಿದ್ದಾರೆ
ನಲ್ಲಿಯ ಹತ್ತಿರ ಕೊಳಚೆ ನೀರು ನಿಂತಿದೆ,ಇಲ್ಲಿ ಯಾವುದೇ ರೀತಿಯ ಸ್ವಚ್ಛತೆ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಈ ಕಾಮಗಾರಿ ಮುಗಿದು ಒಂದು ವರ್ಷ ಕಳೆದರೂ ಇದರಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಆದರೂ ಜನರು ನೀರು ಕುಡಿಯಲು ಬಳಸುತ್ತಿಲ್ಲ.ಲಕ್ಷಾಂತರ ರೂಪಾಯಿ ಖರ್ಚಾ ಮಾಡಿದ ಇಂತಹ ಮಹಾನ್ ಯೋಜನೆ ಹಾಳಾಗಿದ್ದು
ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ನೋಡಿದರೂ ನೋಡದಂತೆ ಕುಳಿತ್ತಿದ್ದಾರೆ
ಇಂತಹ ಮಹಾನ್ ಯೋಜನೆ ಜನರ ಮನೆ ಬಾಗಿಲಿಗೆ ಬಂದರೂ ಜನರಿಗೆ ತಲುಪದೆ ಇರುವುದಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳೇ ಅಥವಾ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಅಧಿಕಾರಿಗಳೇ ಉತ್ತರ ನೀಡಬೇಕು.
ವರದಿ ಪ್ರಭಾಕರ್ ಡಿ ಎಂ ಹೊನ್ನಾಳಿ