ಹನೂರು: ತಾಲೂಕಿನ ಹುತ್ತೂರು ಗ್ರಾಮದ ಶ್ರೀ ಮಲೆ ಮಹದೇಶ್ವರ ಮಠದ ಬಸವನ ಬಾಗಿಲು ಉದ್ಘಾಟನಾ ಸಮಾರಂಭಕ್ಕೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಆರ್. ಮಂಜುನಾಥ್ ಭೇಟಿ ನೀಡಿ ಪೂಜಿ ಸಲ್ಲಿಸಿದರು.
ಈ ವೇಳೆ ಮಂಜುನಾಥ್ ಅವರು ಮಾತನಾಡಿ, ಮಲೆ ಮಹದೇಶ್ವರ ಬೆಟ್ಟ ಸಾಲೂರು ಬೃಹನ್ ಮಠ ಹೊರತುಪಡಿಸಿದರೆ ರಾಗಿ ಬೀಸುವ ಕಲ್ಲು ಪ್ರತಿಷ್ಠಾಪನೆ ಇರುವ ದೇವಾಲಯ ಎಂಬ ಪ್ರತೀತಿ ಮತ್ತು ನಂಬಿಕೆಗೆ ಪಾತ್ರವಾಗಿರುವ ಶ್ರೀ ಮಲೆ ಮಹದೇಶ್ವರ ಸ್ವಾಮಿ ಹುತ್ತೂರು ಮಠದಲ್ಲಿ ಬಸವನ ಬಾಗಿಲು ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೂತನವಾಗಿ ಜರುಗುತ್ತಿರುವುದು ಸಂತಸದಾಯಕ ವಿಚಾರವಾಗಿದೆ. ಗ್ರಾಮದ ಜನತೆ ಶ್ರದ್ಧಾ ಭಕ್ತಿಯಿಂದ ದೇವಾಲಯ ಹಾಗೂ ಆವರಣವನ್ನು ನಿರ್ಮಾಣ ಮಾಡಿರುವುದು ಮೆಚ್ಚುಗೆಯ ಸಂಗತಿ. ಇದೇ ರೀತಿ ಮುಂದಿನ ದಿನಗಳಲ್ಲಿ ಕೂಡ ಜನತೆ ಶಾಂತಿ ಸೌಹಾರ್ದತೆಯಿಂದ ಜೀವನ ನಡೆಸಲಿ ಎಂದು ಆಶಿಸಿದ ಅವರು ನಮ್ಮನ್ನು ಧಾರ್ಮಿಕ ಕಾರ್ಯಕ್ಕೆ ಆಹ್ವಾನಿಸಿರುವುದಕ್ಕೆ ಗ್ರಾಮದ ಯೋಜನೆಗೆ ಆಭಾರಿಯಾಗಿದ್ದಾನೆ ಎಂದರು.
ಕಾರ್ಯಕ್ರಮದಲ್ಲಿ ದೇವಾಲಯಕ್ಕೆ ಆರ್ಥಿಕ ನೆರವಿನ ಸಹಾಯ ಹಸ್ತ ಚಾಚಿದ್ದ ಎಂ.ಆರ್. ಮಂಜುನಾಥ್ ಅವರನ್ನು ದೇವಾಲಯದ ವತಿಯಿಂದ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಮೂರ್ತಿ. ಮಂಜೇಶ್ ಮಾದೇವಣ್ಣ ನಂಜಪ್ಪನಾಯಕ ಪರಶಿವ ನಾಗಣ್ಣ ಶಾಂತಮೂರ್ತಿ ಗೋಪಾಲನಾಯಕ ವೆಂಕಟಮಾದನಾಯಕ ನಿಂಗಶೆಟ್ರು ಇನ್ನು ಅನೇಕ ಜೆ ಡಿ ಎಸ್ ಮುಖಂಡರು ಹಾಜರಿದ್ದರು. ವರದಿ ಉಸ್ಮಾನ್ ಖಾನ್ ಬಂಡಳ್ಳಿ.