ಹನೂರು:ಪೋನ್ನಾಚಿ ಅಸ್ತುರು , ಮರೂರು ಗ್ರಾಮಗಳು ಕಾಡಂಚಿನ ಗ್ರಾಮಗಳಾಗಿರುವುದರಿಂದ ಈ ಭಾಗದ ರೈತರು ಪ್ರತಿದಿನ ಕಾಡು ಪ್ರಾಣಿಗಳ ಹಾವಳಿಯಿಂದ ನರಕಯಾತನೆ ಅನುಭವಿಸುತ್ತಿದ್ದಾರೆ,
ಪೋನ್ನಾಚಿ ಗ್ರಾಮ ಪಂಚಾಯತಿ ಸದಸ್ಯರಾದ ಅಸ್ತುರು ಗ್ರಾಮದ ಡಿ ಕೆ ರಾಜೂ ಅವರಿಗೆ ಸೇರಿದ ಸರ್ವೇ ನಂ, 211ರಲ್ಲಿ 6ಎಕರೆ ಜಮೀನಿನಲ್ಲಿ ರಾಗಿ ಸಾಮೆ, ನವಣೆ ಬೆಳೆಯನ್ನು ಬೆಳೆಯಲಾಗಿದ್ದು ದಿನ ನಿತ್ಯ ಕಾಡನೆಗಳು ಹಾಗೂ ಇತರೆ ಪ್ರಾಣಿಗಳ ಜಮೀನುಗಳಿಗೆ ದಾಳಿ ನಡೆಸಿ ಫಸಲು ನಾಶ ಗೊಳಿಸುತ್ತಿವೆ,ಆದ್ದರಿಂದ ಕಾಡನೆಗಳ ಹಾವಳಿಯನ್ನು ತಪ್ಪಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಸೋಲಾರ್ ತಂತಿಯನ್ನು ಅಳವಡಿಸಿದ್ದರು ಸಹ ಸೋಲಾರ್ ತಂತಿಯನ್ನು ಲೆಕ್ಕಿಸದೆ ಜಮೀನುಗಳಿಗೆ ಕಾಡು ಪ್ರಾಣಿಗಳು ಲಗ್ಗೆ ಇಟ್ಟು ಬೆಳೆ ಯನ್ನು ನಾಶ ಪಡಿಸುತ್ತಿವೆ ಎಂದು ಅಧಿಕಾರಿಗಳ ವಿರುದ್ಧ ಸಮಾಧಾನ ವ್ಯಕ್ತ ಪಡಿಸಿದ್ದಾರೆ ಸಾರ್ವಜನಿಕರು,
ರೈತರು ತಮ್ಮ ಜಮೀನುಗಳಿಗೆ ತೆರಳಲು ಭಯ ಪಡುವಂತ ಪರಿಸ್ಥಿತಿ ಉಂಟಾಗಿದೆ ಆದ್ದರಿಂದ ಕಾಡು ಪ್ರಾಣಿಗಳ ಹಾವಳಿಯನ್ನು ತಪ್ಪಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯತಿ ಸದಸ್ಯ ಡಿ ಕೆ ರಾಜು ತಿಳಿಸಿದ್ದಾರೆ .ವರದಿ ಉಸ್ಮಾನ್ ಖಾನ್ ಬಂಡಳ್ಳಿ.