ವಿಜಯನಗರ ಜಿಲ್ಲೆ ಕೊಟ್ಟೂರು ;
ನಿರ್ದೇಶಕರು, ಇಡಿಸಿಎಸ್ (ವಿದ್ಯುನ್ಮಾನ ನಾಗರಿಕ ಸೇವಾ ವಿತರಣ ನಿರ್ದೇಶನಾಲಯ) , ಇ-ಆಡಳಿತ ಇಲಾಖೆ ವತಿಯಿಂದ ಆರ್ ಹೆಚ್ ಕೊಟ್ರೇಶ್ , ಕೊಟ್ಟೂರು ಇವರು ಪ್ರಾಂಚೈಸಿ ಕೇಂದ್ರದ ಪರವಾನಿಗೆಯನ್ನು ಪಡೆದಿದ್ದು, ತಾಲೂಕ ಕಛೇರಿಯ ಹತ್ತಿರ ಸದರಿ ಸಮಗ್ರ ನಾಗರೀಕ ಸೇವಾ ಕೇಂದ್ರವನ್ನು ತಹಶೀಲ್ದಾರರಾದ ಕುಮಾರಸ್ವಾಮಿ ಎಂ ಇವರು ಉದ್ಘಾಟಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಗ್ರಾಮ ಒನ್ ಕೇಂದ್ರಗಳು ಇದ್ದಂತೆ ಪಟ್ಟಣ ಪಂಚಾಯಿತಿ ಹಾಗೂ ತಾಲೂಕು ಕೇಂದ್ರದಲ್ಲಿ ಕರ್ನಾಟಕ ಒನ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸದರಿ ಕೇಂದ್ರಗಳಲ್ಲಿ ಆಯುಷ್ಮಾನ್ ಆರೋಗ್ಯ ಕಾರ್ಡ್, ವಿದ್ಯುತ್/ನೀರು/ಆಸ್ತಿತೆರಿಗೆ,ತೆರಿಗೆ ಪಾವತಿ/ ಹಿರಿಯ ನಾಗರೀಕರ ಗುರುತಿನ ಚೀಟಿ, ಆಧಾರ್ ನೊಂದಣಿ ಹಾಗೂ ವಿವರಗಳ ಬದಲಾವಣೆ/ಪಡಿತರ ಚೀಟಿಗಾಗಿ ಅರ್ಜಿ, ಮತದಾರರ ಗುರುತಿನ ಚೀಟಿ / ಸೇವಾ ಸಿಂಧು ಅಡಿಯಲ್ಲಿ ಎಲ್ಲಾ ಸೇವೆಗಳು ಹಾಗೂ ಇನ್ನೂ ಹಲವಾರು ಸೇವೆಗಳು ಸದರಿ ಕೇಂದ್ರದಲ್ಲಿ ಲಭ್ಯವಿದ್ದು, ಸಾರ್ವಜನಿಕರು ಈ ಕೇಂದ್ರದ ಸದುಪಯೋಗವನ್ನು ಮಾಡಿಕೊಳ್ಳುವಂತೆ ತಹಶೀಲ್ದಾರರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ನಸರುಲ್ಲಾ ಇವರು ವರ್ಷದ 365 ದಿನಗಳು ಬೆಳಿಗ್ಗೆ 8.00 ರಿಂದ ರಾತ್ರಿ 7.00 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ನಗದು/ಚೆಕ್/ಕ್ರೆಡಿಟ್/ಡಿಬಿಟ್ /ಡಿಡಿ/ಪೆಟಿಎಂ/ಯುಪಿಐ ಮುಖಂತರ ಹಣವನ್ನು ಪಾವತಿಸಬಹುದಾಗಿದ್ದು, ಕಛೇರಿಗಳಲ್ಲಿ ಹೆಚ್ಚಿನ ಒತ್ತಡವನ್ನು ನಿವಾರಿಸಿ ಸಾರ್ವಜನಿಕರಿಗೆ ತ್ವರಿತ ಸೇವೆ ನೀಡಲು ಸದರಿ ಕೇಂದ್ರವು ಮಹತ್ವದಾಗಲಿದೆ ಎಂದರು.
ಇಡಿಸಿಎಸ್ ನಿರ್ದೇಶನಾಲಯದ ಸಿಬ್ಬಂದಿಯಾದ ಮಂಜುನಾಥ, , ಕೋಆರ್ಡಿನೇಟರ್ ಮಂಜುನಾಥ, ಶಿರಸ್ತೇದಾರ್ ನಾಗರಾಜ.ಕೆ, ಅಜಮತುಲ್ಲಾ, ಪ್ರಾಂಚೈಸಿಯಾದ ಆರ್ ಹೆಚ್ ಕೊಟ್ರೇಶ್, ಅನಿಲ್, ಮಲ್ಲಿಕಾರ್ಜುನ ಹಾಗೂ ಇತರರು ಹಾಜರಿದ್ದರು