ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ 13ನೇ ಕಾರ್ಯಕ್ರಮವನ್ನು ವಿಜಯನಗರ ಜಿಲ್ಲೆ ಕೂಟ್ಟೂರು ತಾಲೂಕು, ಕೋಗಳಿ ಹೋಬಳಿಯ , ಅಂಬಳಿ ಗ್ರಾಮದಲ್ಲಿ ನಡೆಯಿತು. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಸ್ಥಾಪನೆಯಾದ ಐತಿಹಾಸಿದ ದೇವಸ್ಥಾನವಾದ ಶ್ರೀ ಕಲ್ಲೇಶ್ವರ ಸ್ವಾಮಿಯ ದರ್ಶನ ಪಡೆದು, ಗ್ರಾಮದಲ್ಲಿ ಸಂಚರಿಸಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ.ಎಂ. ತಹಶೀಲ್ದಾರರು ಉದ್ಘಾಟಿಸಿ ಗ್ರಾಮದಲ್ಲಿನ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲಾಗುವುದು. ಇನ್ನೂ ಕೆಲವು ಅರ್ಜಿಗಳಿಗೆ ಸಂಬಂಧಿಸಿದ ಇಲಾಖೆಯಿಂದ ಮಾಹಿತಿಯ ಅವಶ್ಯಕತೆ ಇದ್ದಲ್ಲಿ ತರಿಸಿಕೊಂಡು ಮೊದಲ ಆದ್ಯತೆಯ ಮೇರೆಗೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕಛೇರಿಗೆ ಬರಲು ಸಾಧ್ಯವಾಗದಂತಹ ಜನರಿಗೆ, ಗ್ರಾಮ ಸಮಸ್ಯೆಗಳನ್ನು ತಿಳಿಸಿ ಪರಿಹಾರ ಕಂಡುಕೊಳ್ಳಲು ಈ ಕಾರ್ಯಕ್ರಮ ಮಹತ್ವದಾಗಿದ್ದು ಇದರ ಸದುಪಯೋಗವನ್ನು ಪಡಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಕೋರಿದರು.
ಕಾರ್ಯನಿರ್ವಾಹಕ ಅಧಿಕಾರಿಗಳಾದ ಪರಮೇಶ್ವರಪ್ಪನವರು ಗ್ರಾಮದಲ್ಲಿ ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ, ದಾರಿಯ ಸಮಸ್ಯೆ, ಸಿಸಿರಸ್ತೆ, ಆಶ್ರಯ ಮನೆಗಳು, ಮುಖ್ಯರಸ್ತೆ ಹೀಗೆ ಅನೇಕ ಸಮಸ್ಯೆಗಳಿರಬಹುದು. ಮನವಿ ಮೂಲಕ ಸಾರ್ವಜನಿಕರು ತಿಳಿಸಿದಲ್ಲಿ ಪರಿಶೀಲಿಸಿ ನಿಯಮಾನುಸಾರ ಕ್ರಮಕೈಗೊಳ್ಳಲು ಸಹಾಯವಾಗುತ್ತದೆ. ಈ ಕಾರ್ಯಕ್ರಮವು ಅಧಿಕಾರಿಗಳು ಜನರ ಮನೆ ಬಾಗಿಲಿಗೆ ಬಂದು ಸಮಸ್ಯೆಯನ್ನು ಆಲಿಸಿ ಪರಿಹರಿಸಲು ಸಹಕರಿಸುವ ವಿನೂತನ ಕಾರ್ಯಕ್ರಮವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಇತರೆ ಇಲಾಖೆಯ-51, ಕಂದಾಯ ಇಲಾಖೆಯ-63 ಒಟ್ಟು-114 ಅರ್ಜಿಗಳು ಸ್ವೀಕೃತವಾಗಿದ್ದು, ಕಂದಾಯ ಇಲಾಖೆಯ 10 ಅರ್ಜಿಗಳು ಸ್ಥಳದಲ್ಲೇ ವಿಲೇಯಾದವು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 3 ಜನರಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಲಾಯಿತು. ಅಂಗನವಾಡಿ ಕೇಂದ್ರ, ಪ್ರಾಥಮಿಕ ಮತ್ತು ಪ್ರೌಢಶಾಲೆ ಆವರಣದಲ್ಲಿ ಶೌಚಾಲಯ ನಿರ್ಮಾಣ, ಪಶು ಆಸ್ಪತ್ರೆ ಸ್ಥಾಪನೆ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಚರಂಡಿ ಕಾಮಗಾರಿ, ಗ್ರಾಮಕ್ಕೆ ಮುಖ್ಯ ಸಂಪರ್ಕ ಇರುವ ಹಳ್ಳದ ಸೇತುವೆಯನ್ನು ಎತ್ತರಿಸುವುದು, ಅರ್ಧಕ್ಕೆ ನಿಂತಿರುವ ಗ್ರಂಥಾಲಯ ಕಟ್ಟಡ ಪೂರ್ಣಗೊಳಿಸುವುದು, ಜಮೀನುಗಳಿಗೆ ಹೋಗಲು ದಾರಿ ಕಲ್ಪಿಸಿಕೊಡುವುದು, ವಿದ್ಯುತ್ ಸಮಸ್ಯೆ, ಶಾಲಾ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಕಲಾ ಮಂದಿರ ನಿರ್ಮಿಸುವುದು, ಗ್ರಾಮಕ್ಕೆ ಪ್ರವೇಶದ ಕಮಾನು ದುರಸ್ಥಿ ಮಾಡಿಸಿಕೊಡುವುದು ಹೀಗೆ ನಾನಾ ಬೇಡಿಕೆಗಳ ಮನವಿಯನ್ನು ಅಧಿಕಾರಿಗಳ ಗಮನಕ್ಕೆ ತಂದರು.
ಕಾರ್ಯಕ್ರಮದಲ್ಲಿ ಗ್ರಾ ಪಂ ಅಧ್ಯಕ್ಷರಾದ ಹೆಚ್ ಪಿ ಅನಸೂಯಮ್ಮ, ಉಪಾಧ್ಯಕ್ಷರಾದ ವಿ ಗಂಗಮ್ಮ, ಹಾಗೂ ಸದಸ್ಯರು, ವಿಎಸ್ಎಸ್ಎನ್ ಅಧ್ಯಕ್ಷರಾದ ಜಿ ಗುರುಬಸವರಾಜ, ಉಪಾಧ್ಯಕ್ಷ ಕೆ ಗಂಗಾಧರ ರೆಡ್ಡಿ, ಎಪಿಎಂಸಿ ಸದಸ್ಯರಾದ ದೇವೇಂದ್ರಗೌಡ ಪಾಟೀಲ್, ಗುತ್ತಿಗೆದಾರ ವಿ ಬಸವರಾಜ, ಎಸ್ ಡಿ ಎಂ ಸಿ ಸಿ ಅಧ್ಯಕ್ಷ ರಮೇಶ್, ಅಲಬೂರು ಪಿ ಹೆಚ್ ಸಿ ವೈಧ್ಯರಾದ ಡಾ|| ಪ್ರವೀಣ್, ನಗೇಗಾ ಎಡಿಎ ವಿಜಯಕುಮಾರ್ ಹೆಚ್, ಎಎಸ್ಐ ಅಬ್ಬಾಸ್, ಎಪಿಎಂಸಿ ಕಾರ್ಯದರ್ಶಿ ಈರಣ್ಣ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಉಪತಹಶೀಲ್ದಾರ್ ಎಸ್ ರೇಖಾ, ಪಿಡಿಒ ಮಾರುತೇಶ್, ಕಂ ನಿ ಶಿವಕುಮಾರ್
ಡಿ, ಗ್ರಾಮ ಲೆಕ್ಕಿಗರು, ಇಸಿಒ ಅಜ್ಜಪ್ಪ, ಸಿ ಆರ್ ಪಿ ಅಜ್ಜಯ್ಯ ಹಾಗೂ ಇತರರು ಇದ್ದರು. ಸಿ.ಮ.ಗುರುಬಸವರಾಜ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಿಡಿಪಿಒ ಇಲಾಖೆಯ ಮಾದರಿ ಅಂಗನವಾಡಿ ಕೇಂದ್ರ ಹಾಗೂ ಆರೋಗ್ಯ ಇಲಾಖೆಯ ತಪಾಸಣಾ ಕೇಂದ್ರ ಗ್ರಾಮಸ್ಥರ ಗಮನ ಸೆಳೆಯಿತು. ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಮೆಚ್ಚುಗೆಗೆ ಪಾತ್ರವಾಯಿತು.
