ಗುರತೇ ಸಿಗದ ಹಾಗೆ ಎತ್ತ ನೋಡಿದರೂ ಜಾಲ ಬಿರುಕುಗಳ ದಾರಿ,
ಮಳೆಯನ್ನೇ ಕಾಣದೆ ಒಣಗಿದ ಸಸ್ಯ,
ಹೆಚ್ಚಾಗಿದೆ ಬಿಸಿಲಿನತಾಪ,
ತಾ ಹೊರಟ ಹಾದಿಯಲ್ಲಿ ಸಾಗಲುಹಲವಾರು ಬಾರಿ ಏಳು,ಬೀಳುಗಳು ಕಂಡುಬರುತ್ತಿವೆ.
ತಾ ಕಂಡಿದ್ದೆ ಚಿಂತನೆಯ ತನ್ನದೇ ಪದಗಳ ಅರ್ಥೈಸುವಿಕೆಯ ಚಿಂತನಾ ವಿಹಾರಿಯ ಮನಮೋಹಕ ತಾರ ಮೆರಗು,
ಹಸಿರಿನ ಕಾನನದಲ್ಲಿ ಹರಿಷಿಣ,
ಕೆಂಪಿನ ಆಕಾಶ ಆಹಾರವನ್ನು ಹುಡುಕಿಕೊಂಡು ಬಂದ ವಲಸೆ ಹಕ್ಕಿ,
ನಿಂತ ಜಲದಲ್ಲಿ ಬದಕಿಗಾಗಿ ಹೋರಾಟದ ಜಲಚರ ಪ್ರಾಣಿ,
ಪ್ರಾಪಂಚಿಕವೇ ಜಾಲವಾಗಿ ಕಂಡು ಬರುತ್ತಿದೆ.
ಮಾನವ ನೀ ಬಲೆಗೆ ಸಿಕ್ಕ ಪ್ರಾಣಿ
ಮಾನವ ನೀ ಮಾನವರ ಬಲೆಗೆ ಸಿಕ್ಕ “ಜೇಡರ ಬಲೆ”.
-ಚೇತನ್ ಕುಮಾರ್