ವಿಜಯನಗರ ಜಿಲ್ಲೆ ಕೊಟ್ಟೂರು ;
ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಇದನ್ನು ಅರಿತುಕೊಂಡ ಕೊಟ್ಟೂರು ಪಟ್ಟಣದ ದಂಪತಿಗಳಾದ ಕೆ ಶಿವರಾಜ್ ಶೋಭಾರವರ ಮೊದಲನೇ ಪುತ್ರ ವಿಜಯ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಇಂದು ಸರ್ಕಾರಿ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಬ್ರೆಡ್ ಬಾಳೆಹಣ್ಣು ಬಿಸ್ಕತ್ ಹಾಗೂ ಮೊಟ್ಟೆಯನ್ನು ನೀಡಲಾಯಿತು ಶೋಭಾರವರು ಮಾತನಾಡಿ ನೀವು ಕೂಡ ನಿಮ್ಮ ಕೈಯಲ್ಲಾದ ಸಹಾಯವನ್ನು ಮಾಡಿರಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿಕೊಂಡರು ನಂತರ ತಾಯಂದಿರ ತಾಯಿ ಮಹಾತಾಯಿ ರುದ್ರಮ್ಮರ ಅನಾಥಾಶ್ರಮಕ್ಕೆ ತೆರಳಿ ಅವರ ಆರೋಗ್ಯವನ್ನು ವಿಚಾರಿಸಿ ನಂತರ ಬ್ರೆಡ್ ಬಾಳೆಹಣ್ಣು ಬಿಸ್ಕತ್ ಹಾಗೂ ಮೊಟ್ಟೆಯನ್ನು ಅಲ್ಲಿರುವ ಪ್ರತಿಯೊಬ್ಬರಿಗೂ ನೀಡಿ ರುದ್ರಮ್ಮನ ಆಶೀರ್ವಾದ ಪಡೆಯಲಾಯಿತು ನಂತರ ಅಲ್ಲಿಂದ ಕೂಡ್ಲಿಗಿ ರಸ್ತೆಯಲ್ಲಿರುವ ವೃದ್ರಾಶ್ರಮಕ್ಕೆ ತೆರಳಿ ಅಲ್ಲಿ ಕೂಡ ಬ್ರೆಡ್ ಬಾಳೆಹಣ್ಣು ಬಿಸ್ಕೆಟ್ ಹಾಗೂ ಮೊಟ್ಟೆಯನ್ನು ವಿತರಿಸಿ ಅವರ ಆಶೀರ್ವಾದ ಪಡೆಯಲಾಯಿತು ಈ ಸಮಯದಲ್ಲಿ ಶಿವರಾಜ್ ಶೋಭಾ ದೀಪ ಹಾಗೂ ಜಯಶ್ರೀ ಇದ್ದರು
