ಬೆಳಗಾವಿ:ಸ್ಥಳೀಯ ಬಾವುರಾವ ಕಾಕತಕರ ಜ್ಯೋತಿ ಪದವಿ ಮಹಾವಿದ್ಯಾಲಯದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಆಂಗ್ಲ ಭಾಷಾ ಪ್ರಾಧ್ಯಾಪಕರ ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿತ್ತು ಉದ್ಘಾಟಕರಾಗಿ ಪ್ರೊಫೆಸರ್ ವಿಜಯ ನಾಗಣ್ಣವರ ಆಗಮಿಸಿದ್ದರು ಮುಖ್ಯ ಅತಿಥಿಗಳಾಗಿ ಡಾ.ನಾಗರತ್ನ ಪರಾಂಡೆ ಗುರುಮಾತೆ ಮಾತನಾಡುತ್ತಾ ಹೊಸ ಶಿಕ್ಷಣ ನೀತಿ ಅಳವಡಿಕೆಯಿಂದ ವಿವೇಕಾನಂದರ ವಿಚಾರಗಳ ಸೃಜನಶೀಲತೆ ಬೆಳಕಿಗೆ ತರಲು ಹಾಗೂ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಹಾಗೂ ಭವ್ಯ ಭಾರತದ ಭವಿತವ್ಯಕ್ಕೆ ಆದರ್ಶವಾಗಲಿ ಎಂದು ಉಪನ್ಯಾಸಕರಿಗೆ ತಿಳಿ ಹೇಳಿದರು ಡಾ ಎಸ್ ಎನ್ ಪಾಟೀಲ ಪ್ರಾಚಾರ್ಯರು ನೂತನ ಶಿಕ್ಷಣ ನೀತಿ ಅಳವಡಿಕೆಯಾದ ನೀತಿಯನ್ನು ವಿವರಿಸಿದರು ಇದೇ ಸಂದರ್ಭದಲ್ಲಿ ಡಾ ಆಶಾಲತಾ ಕುಲಕರ್ಣಿ.ಡಾ.ಎಸ್ ಬಿ.ಬಿರಾದಾರ.ಪ್ರೊ.ಎಮ್ . ಎಸ್.ಮಾಳಗೆ.ಪ್ರೊ. ವಿಜಯಲಕ್ಷ್ಮೀ ತಿರಲಾಪುರ ಅಧ್ಯಾಪಕ ವೃಂದವನ್ನು ಸನ್ಮಾನಿಸಲಾಯಿತು ಪಿ.ಎಚ.ಡಿ. ಅಧ್ಯಯನ ಮಾಡಿದ ಎಲ್ಲಾ ಪ್ರಾಧ್ಯಾಪಕರನ್ನು ಸತ್ಕರಿಸಲಾಯಿತು.ಪ್ರೊ.ರಾಜಶೇಖದ ಶೇಗುಣಸಿ ವಚನ ವಾಚಿಸಿದರು ಪ್ರೊ ಗೀತಾ ಗೊಂಡಕರ ಅವರು ಪ್ರಾರ್ಥನೆ ಮಾಡಿದರು ಪ್ರೊ ಜೆ ಕೆ ಪಾಟೀಲ್ ನಿರೂಪಿಸಿದರು ಪ್ರೊ ಅರುಣಕುಮಾರ ಲೋಕರೆ ಅವರು ವಂದಿಸಿದರು ವರದಿಗಾರರು. ದಿನೇಶ್ ಕುಮಾರ್ ಅಜಮೇರಾ ಬೆಳಗಾವಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.