ಹನೂರು :- ಗ್ರಾಮೀಣ ಭಾಗದ ಜನರಿಗೆ ತೊಂದರೆ ಆಗದಂತೆ ವಿವಿಧ ಇಲಾಖೆ ಅಧಿಕಾರಿಗಳು ಉತ್ತಮ ಕಾರ್ಯನಿರ್ವಹಿಸುವ ಮೂಲಕ ಜನ ಸಾಮಾನ್ಯರ ಸಮಸ್ಯೆಗಳನ್ನು ಬಗೆ ಹರಿಸಬೇಕು. ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ತಿಳಿಸಿದರು
ತಾಲೂಕಿನ ಲೊಕ್ಕನಹಲ್ಲಿ ಹೋಬಳಿ ವ್ಯಾಪ್ತಿಯ ಕಾಡಂಚಿನ ಮಿಣ್ಯಂ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಉದ್ಘಟನೆ ನೆರವೇರಿಸಿ ಸಾವ೯ಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಜನರಿಂದ ಮೂಲಭೂತ ಸಮಸ್ಯೆಗಳು ಮತ್ತು ವೈಯಕ್ತಿಕ ಸಾಲ ಸೌಲಭ್ಯಗಳನ್ನ ಒದಗಿಸಿವಂತೆ ಮನವಿಗಳು ಬಂದಿದೆ. ಅಲ್ಲದೆ ವಿಧ್ಯುತ್ ಅರಣ್ಯ ಸಾರಿಗೆ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚಿನ ದೂರು ಬಂದಿದೆ. ಎಂದರು
ಅರಣ್ಯ ಇಲಾಖೆ ಅಧಿಕಾರಿಗಳು ಜಮೀನಿಗೆ ಹೋಗಲು ದಾರಿ ಬಿಡುತ್ತಿಲ್ಲ ವಿನಾ ಕಾರಣ ತೊಂದರೆ ನೀಡುತ್ತಿದ್ದರೆಂದು ರೈತರೊಬ್ಬರ ದೂರಿಗೆ ಸ್ಪಧಿಸಿದ ಜಿಲ್ಲಾಧಿಕಾರಿ ರಮೇಶ್ ಕಾಡಿನ ಮಧ್ಯ ರೈತರ ಜಮೀನು ಇದ್ದು ತಿರುಗಾಡಲು ಬಿಡುತ್ತಿಲ್ಲ ಎಂದರೆ ಅವರು ಹೆರೋಪ್ಲಾನ್ ಮೇಲೆ ಹೋಗಕ್ಕೆ ಆಗತ್ತಾ ಎಂದು ಅರಣ್ಯ ಅಧಿಕಾರಿಗಳನ್ನು ಪ್ರಶ್ನಿಸಿದರು. ಅಲ್ಲದೆ ಕಾಡಂಚಿನ ಜಮೀನು ಹೊಂದಿರುವ ರೈತರಿಗೆ ತಿರುಗಾಡಲು ಅವಕಾಶ ನೀಡಬೇಕು. ಎಂದು ತಾಕೀತು ಮಾಡಿದರು.
ಸಾರಿಗೆ ಬಸ್ ವ್ಯವಸ್ಥೆ ಇಲ್ಲದೆ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗುತ್ತಿದೆ. ಬಸ್ ಸೌಲಭ್ಯ ಸಮಪ೯ಕವಾಗಿ ಇಲ್ಲದಿದ್ದರಿಂದ ಶಿಕ್ಷಕರು 11 ಗಂಟೆಗೆ ಬಂದು 03 ಗಂಟೆಗೆ ಹೊರಟ ಹೋಗುತ್ತಾರೆ. ಬಸ್ ಇದ್ದರೆ ಸಾಯಂಕಾಲ 5 ರ ತನಕ ಪಾಠ ಮಾಡುತ್ತಾರೆಂದಿದ್ದು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ ಸಾರಿಗೆ ವ್ಯವಸ್ಥೆ ಮಾಡಲಾಗುವುದು ಹಾಗೆಯೇ ಚೆಸ್ಕ್ಂ ಅಧಿಕಾರಿಗಳಲ್ಲಿ ನಿರಂತರ ವಿಧ್ಯುತ್ ಸೌಲಭ್ಯ ಒದಗಿಸುವ ಬಗ್ಗೆ ಮತ್ತು ಅಲ್ಲಿನ ಸಕಾ೯ರಿ ಸೌಲಭ್ಯ ಬಗ್ಗೆ ಜನರ ಮುಂದೆ ಚೆಚಿ೯ಸಿದರು.
ತಾಲ್ಲೂಕು ಪಂಚಾಯ್ತಿ ಇಲಾಖೆಗೆ ಸಂಬಂಧಿಸಿದಂತೆ ಇಒ ಶ್ರೀನಿವಾಸ್ ಮಾತನಾಡಿ ಗ್ರಾಮೀಣ ಭಾಗದ ಜನರಿಗೆ ನರೇಗಾ ಯೋಜನೆಯಡಿ ಕೊಟ್ಟಿಗೆ ಮನೆ ಕೆರೆಕಟ್ಟೆ ಕಾಲುವೆ ಜಮೀನು ಸಮತಟ್ಟು ರಸ್ತೆ ಅಭಿವೃದ್ದಿ ದನಗಳ ಕುಡಿಯುವ ನೀರಿನ ತೊಟ್ಟಿ ತೊಂಬೆ ಇನ್ನಿತರ ಗ್ರಾಮಾಭಿವೃದ್ದಿ ಮತ್ತು ವೈಯಕ್ತಿಕ ಕೆಲಸಗಳನ್ನು ಮಾಡಲು ಅವಕಾಶ ಇರುವ ಬಗ್ಗೆ ತಿಳಿಸಿದರು.
ಪರಿಶಿಷ್ಟ ಪಂಗಡ ಕಲ್ಯಾಣ ವಗ೯ಗಳ ಇಲಾಖೆ ಮಂಜುಳ ಮಾತನಾಡಿ ಹಕ್ಕುಪತ್ರ ನೀಡುವಂತೆ ಅಜಿ೯ ಬಂದಿದ್ದು ಪರಿಶೀಲನೆ ನಡೆಸಿ ಅನುಭವ ಸ್ವಾಧೀನದಂತೆ ಕ್ರಮ ವಹಿಸಲಾಗುತ್ತದೆ. ಹಾಗೆಯೆ ಮಕ್ಕಳಿಗೆ ಊಟ ವಸತಿ ಶಿಕ್ಷಣ ಒದಗಿಸಲಾಗುತ್ತಿದೆ. ಅಂತರ ಜಾತಿ ವಿವಾಹ ಆದರೆ 3 ಲಕ್ಷದ ವರೆಗೂ ಧನ ಸಹಾಯ ಮಾಡಲಾಗುತ್ತದೆ. ಪಂಗಡದ ಮಕ್ಕಳು 10 ಮತ್ತು 12 ನೇ ತರಗತಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ಮಕ್ಕಳಿಗೆ 20 ಸಾವಿರ ಧನ ಸಹಾಯ ನೀಡುತ್ತಿದೆ. ಎಂದರು ಅಲ್ಲದೆ ಜಮೀನು ಉಳುಮೆ ಮಾಡಲು ಎತ್ತುಗಳನ್ನು ಕೇಳಿದ್ದು ಇದರ ಬಗ್ಗೆ ಕ್ರಮ ವಹಿಸಲಾಗುವುದು. ಎಂದರು
ಹುಲಿ ಸಂರಕ್ಷಣೆ ಕೈ ಬಿಡುವುದು ಸೇರಿದಂತೆ ವ್ಯವಸಾಯ ಜೊತೆಗೆ ಕುರಿ ಕೋಳಿ ಹಸು ಮೇಕೆಗಳನ್ನು ಕೊಡಿಸಿದರೆ ಜೀವನ ನಡೆಸಲು ಅನುಕೂಲ ಆಗುತ್ತದೆ. ಎಂಬ ಬೇಡಿಕೆಗಳೆ ಹೆಚ್ಚಾಗಿ ಕೇಳಿ ಬಂದಿದೆ. ಅಲ್ಲದೆ ಆರೋಗ್ಯ ಉಪ ಕೇಂದ್ರಗಳಲ್ಲಿ ಸಿಂಬಂಧಿಗಳು ತುತು೯ ವಾಹನ ಸೌಲಭ್ಯಗಳು ಒದಗಿಸಬೇಕು. ಮೊಬೈಲ್ ಟವರ್ ಇಲ್ಲದ ಕಾರಣ ಆರೋಗ್ಯ ಸಮಸ್ಯೆ ಉಂಟಾದಾಗ ನಿಗಧಿತ ಸಮಯಕ್ಕೆ ಅಂಬ್ಯುಲೇನ್ಸ್ ಬರುತ್ತಿಲ್ಲ. ಆಗಾಗಿ ಸ್ಥಳೀಯ ವಾಹನ ವ್ಯವಸ್ಥೆ ಮೂಲಕ ಆರೋಗ್ಯ ಸೌಲಭ್ಯ ಒದಗಿಸುವ ಕೈಗೆತ್ತಿಕೊಳ್ಳುವಂತೆ ತಿಳಿಸಿದರು.
ಪಶು ವೈಧ್ಯಾಧಿಕಾರಿ ಡಾ.ಶಿವಣ್ಣ ಮಾತನಾಡಿ ದನಗಳಿಗೆ ಚಮ೯ ಗಂಟು ರೋಗ ಕಾಣಿಸಿ ಕೊಂಡಿದೆ. ಅಲ್ಲದೆ ಕಾಲು ಬಾಯಿ ಜ್ವರ ಸಹ ಬಂದಿದೆ. ಈಗಾಗಲೇ ಮಲೆ ಮಹದೇಶ್ವರ ಬೆಟ್ಟ ಸುತ್ತ ಮುತ್ತಲಿ ಗ್ರಾಮಗಳಲ್ಲಿ ಚಮ೯ ಗಂಟು ರೋಗಕ್ಕೆ ಚಿಕತ್ಸೆ ನೀಡಿದ್ದು ನಿಮ್ಮ ಭಾಗದಲ್ಲೂ ಸಹ ಚಿಕಿತ್ಸೆ ಮಾಡಲಾಗುತ್ತಿದೆ. ಹಾಗೆಯೆ ಕಾಲು ಬಾಯಿ ಜ್ವರಕ್ಕೂ ಔಷಧ ನೀಡಲಾಗುತ್ತಿದ್ದು ರೈತರು ಎದರದೆ ದೈಯ೯ವಾಗಿರಿ ಎಂದರು.
ಈ ವೇಳೆ ಶಾಸಕ ಆರ್.ನರೇಂದ್ರ ಗ್ರಾ.ಪಂ. ಅಧ್ಯಕ್ಷೆ ರಾಜಮ್ಮ ಉಪಾಧ್ಯಕ್ಷ ಮಹದೇವ ಕೊಳ್ಳೇಗಾಲ ಉಪವಿಭಾಧಿಕಾರಿ ಗೀತಾ ಹುದೇಡ್ ತಹಸೀಲ್ದಾರ್ ಆನಂದಯ್ಯ ತಾ.ಪಂ. ಇಓ ಶ್ರೀನಿವಾಸ್ ಚೆಸ್ಕ್ಂ ಎಇಇ ಶಂಕರ್ ಎಇ ಬಿ.ರಂಗಸ್ವಾಮಿ ಕೃಷಿ ಸಹಾಯಕಿ ನಿದೇ೯ಶಕಿ ಸುಂದರಮ್ಮ ಪರಿಶಿಷ್ಟ ವಗ೯ಗಳ ಇಲಾಖೆ ಮಂಜುಳ ಶಿಕ್ಷಣಾಧಿಕಾರಿ ಶಿವರಾಜ್ ಡಿಹೆಚ್ ಓ ಡಾ.ವಿಶ್ವೇಶ್ವರಯ್ಯ ಡಾ.ಪ್ರಕಾಶ್ ಪಿಡಿಓ ಮಾದೇಶ್ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂಧಿಗಳು ಹಾಜರಿದ್ದರು.
ವರದಿ ಉಸ್ಮಾನ್ ಖಾನ್ .