ವೆಂಕಟಶೆಟ್ಟಿ ಗ್ರಾಮಕ್ಕೆ ಸ್ಮಶಾನ ಜಾಗ ಮಂಜೂರು ಜಿಲ್ಲಾಧಿಕಾರಿಗಳ ಆದೇಶ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಹುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ ವೆಂಕಟ ಶೆಟ್ಟಿ ದೊಡ್ಡಿ ಗ್ರಾಮಕ್ಕೆ ಜಿಲ್ಲಾಧಿಕಾರಿಗಳು ಹುತ್ತೂರು ಸರ್ವೆ ನಂಬರ್ 16 ಬಿ ಮೂರರಲ್ಲಿ 50 ಸೆಂಟ್ ಜಾಗವನ್ನು ಸಾರ್ವಜನಿಕ ಸ್ಮಶಾನಕ್ಕೆ ನಿಗದಿ ಮಾಡಿ ಆದೇಶ ಹೊರಡಿಸಿದ್ದಾರೆ. ಸೆಪ್ಟೆಂಬರ್ ತಿಂಗಳು 9 ನೇ ತಾರೀಕಿನಂದು ವೆಂಕಟಶೆಟ್ಟಿ ದೊಡ್ಡಿ ಗ್ರಾಮದ ಪುಟ್ಟರಾಜ ಶೆಟ್ಟಿ ಎಂಬುವರು ತೀರಿಕೊಂಡಿದ್ದು ಸಾರ್ವಜನಿಕ ಸ್ಮಶಾನದ ಸೌಲಭ್ಯ ಇಲ್ಲದೆ ಖಾಸಗಿ ಜಮೀನಿನ ಜೋಳದ ಫಸಲನ್ನು ಕಟಾವು ಮಾಡಿ ಅಂತ್ಯಕ್ರಿಯೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಹಲವಾರು ವರ್ಷಗಳಿಂದ ವೆಂಕಟಶೆಟ್ಟಿ ದೊಡ್ಡಿ ಗ್ರಾಮಕ್ಕೆ ಸ್ಮಶಾನದ ಜಾಗವಿಲ್ಲದೆ ಅರಣ್ಯದಂಚಿನಲ್ಲಿ ಮತ್ತು ಬೇರೆಯವರ ಖಾಸಗಿ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡಿಕೊಂಡು ಬರುತ್ತಿದ್ದರು. ಹಲವಾರು ಬಾರಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ತಹಸಿಲ್ದಾರರಿಗೆ ಮತ್ತು ಶಾಸಕರಿಗೆ ಮನವಿ ಮಾಡಿದ್ದರು ಸಹ ಇಲ್ಲಿಯ ತನಕ ಯಾವುದೇ ಅನುಕೂಲ ಆಗಿರಲಿಲ್ಲ. ಸೆಪ್ಟಂಬರ್ 9ರಂದು ವೆಂಕಟಶೆಟ್ಟಿ ದೊಡ್ಡಿ ಗ್ರಾಮದ ಪುಟ್ಟರಾಜ ಶೆಟ್ಟಿ ತೀರಿಕೊಂಡ ತರುವಾಯ ಗ್ರಾಮಸ್ಥರ ಆಕ್ರೋಶದ ಹಿನ್ನಲೆ, ಹಲವಾರು ಮುದ್ರಣ ಮತ್ತು ಟಿವಿ ಮಾಧ್ಯಮಗಳು ವರದಿ ಬಿತ್ತರಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ವೆಂಕಟಶೆಟ್ಟಿ ದೊಡ್ಡಿ ಗ್ರಾಮಕ್ಕೆ ಸ್ಮಶಾನದ ಜಾಗ ಮೀಸಲಿಸಲಾಗಿದೆ. ಸಾರ್ವಜನಿಕ ಸ್ಮಶಾನ ಜಾಗವನ್ನು ಹನೂರು ತಹಸೀಲ್ದಾರರು ಹುತ್ತೂರು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿ ಮುಂದಿನ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳ ಕಚೇರಿ ಸೂಚಿಸಿದೆ.ವರದಿ ಉಸ್ಮಾನ್ ಖಾನ್.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.