ಕಲಬುರಗಿ:ಲೋಕಸಭೆ ಚುನಾವಣೆ ಹಿನ್ನೆಲೆ ಕಲಬುರಗಿಯಿಂದ ಡಾ.ಉಮೇಶ್ ಜಾಧವ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಬೃಹತ್ ಮೆರವಣಿಗೆಯ ಮುಖಾಂತರ ನಾಮಪತ್ರ ಸಲ್ಲಿಸಿದರು.ಈ ಮೆರವಣಿಗೆಯು ಕಲಬುರಗಿ ನಗರದ ಗಂಜ್ ಪ್ರದೇಶದಲ್ಲಿರುವ ನಗರೇಶ್ವರ ಶಾಲೆಯಿಂದ ಶುರುವಾಗಿ ನಗರದ ಬಂಬೂ ಬಜಾರ,ಕಿರಾಣಾ ಬಜಾರ,ಸೂಪರ್ ಮಾರ್ಕೆಟ್,ಜಗತ್ ವೃತ್ತದ ಮುಖಾಂತರ ಜಿಲ್ಲಾಧಿಕಾರಿ ಕಛೇರಿಗೆ ಮುಕ್ತಾಯವಾಯಿತು ನಂತರ ಮಾತನಾಡಿದ ವಿಜಯೇಂದ್ರ ಅವರು ಈ ಸುಡುಬಿಸಿಲಿನಲ್ಲಿ ಪಕ್ಷದ ಕಾರ್ಯಕರ್ತರು ಜಮಾವಣೆಯಾಗಿರುವುದು ಹಾಗೂ ಕಾರ್ಯಕರ್ತರ ಹುಮ್ಮಸ್ಸು ನೋಡುತ್ತಿದ್ದರೆ ಉಮೇಶ್ ಜಾಧವ್ ಅವರು ಮೂರು ಲಕ್ಷಕ್ಕಿಂತ ಅಧಿಕ ಮತಗಳಿಂದ ಜಯಭೇರಿ ಬಾರಿಸುತ್ತಾರೆ ಅನ್ನುವುದು ಮನದಟ್ಟಾಗುತ್ತಿದೆ ಎಂದರು.ಮೆರಣಿಗೆಯಲ್ಲಿ ಪಕ್ಷದ ಮುಖಂಡರು,ಕಾರ್ಯಕರ್ತರು ಭಾಗಿಯಾಗಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.