ದಾವಣಗೆರೆ ಜಿಲ್ಲೆಯ ನ್ಯಾಮತಿ ಏಪ್ರಿಲ್ 18: ತಾಲೂಕಿನ ಮಾದನಬಾವಿ ಗ್ರಾಮದ ರೈತನೊಬ್ಬ ಸಾಲದ ಹೊರೆಯಿಂದ ಬೇಸತ್ತು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಂ ಆರ್ ಶಿವರಾಜು 35 ವರ್ಷ ಆತ್ಮಹತ್ಯೆ ಮಾಡಿಕೊಂಡವರು ಅವರಿಗೆ ಒಂದು ಎಕರೆ 20 ಗುಂಟೆ ಜಮೀನಿದ್ದು,ಕೃಷಿ ಚಟುವಟಿಕೆಗಳಿಗೆ ಸ್ವಸಾಯ ಸಂಘ ಹಾಗೂ ಬ್ಯಾಂಕುಗಳಲ್ಲಿ ಒಟ್ಟು ಆರು ಲಕ್ಷ ಸಾಲ ಮಾಡಿದ್ದರು.
ಸರಿಯಾಗಿ ಮಳೆಯಾಗದ ಕಾರಣ ಬೆಳೆ ಕೈಗೆ ಬಂದಿರಲಿಲ್ಲ ಸಾಲ ತೀರಿಸುವ ಬಗ್ಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಧರ್ಮಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಎನ್ ಎಸ್ ರವಿ,ಸಬ್ ಇನ್ಸ್ಪೆಕ್ಟರ್ ಎಸ್ ಪಿ ಪ್ರವೀಣ್ ತಿಳಿಸಿದ್ದಾರೆ.
ವರದಿ-ಪ್ರಭಾಕರ ಡಿ ಎಂ