ಯಾದಗಿರಿ:ಇಂದು ಬೆಳಗ್ಗೆ ೧೧ ಗಂಟೆಗೆ ಪ್ರವಾಸಿ ಮಂದಿರದಲ್ಲಿ ನಡೆದ ಸ್ವಾಭಿಮಾನಿ ಸಂಖ್ಯೆತವಾಗಿ, ಸಾಮಾಜಿಕ ಕಳಕಳಿಯಿಂದ ಶೋಷಿತರಿಗೆ ದಲಿತರಿಗೆ ಅಲ್ಪಸಂಖ್ಯಾತರಿಗೆ, ಬುದ್ಧ ಮಾರ್ಗದಲ್ಲಿ ನಡೆಯಲು ಬಾಬಾ ಸಾಹೇಬ್ ಅಂಬೇಡ್ಕರ ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಲು ಆ ನಿಟ್ಟಿನಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯು ಸಮಾಜಮುಖಿ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿದೆ. ಈ ಹೋರಾಟಗಳನ್ನು ದ್ವಿಗುಣಗೊಳಿಸಲು ಆಯುಷ್ಮಾನ್ "ಮಲ್ಲಕಾರ್ಜುನ ಕುಮನೂರ ರವರನ್ನು ಅಂಬೇಡ್ಕರ ಸ್ವಾಭಿಮಾನಿ ಸೇನೆಯ "ವಡಗೇರಾ ತಾಲೂಕಿನ ಗೌರವಧ್ಯಕ್ಷರಾಗಿ" ಹಾಗೂ "ಭೀಮಪ್ಪ ಕರ್ನಾಳ " ರವರನ್ನು "ವಡಗೇರಾ ತಾಲೂಕ ಕಾರ್ಯದರ್ಶಿಯಾಗಿ", "ಮಲ್ಲಪ್ಪ ಕುರಕುಂದ ರವರನ್ನು “ವಡಗೇರಾ ತಾಲೂಕು ಸಹ ಕಾರ್ಯದರ್ಶಿಯಾಗಿ, "ಕುಮಾರ ನಾಟೇಕಾರ" ರವರನ್ನು "ವಡಗೇರ ತಾಲೂಕ ಸಮಿತಿ ಸದಸ್ಯರನ್ನಾಗಿ" ಮತ್ತು "ಶಿವರಾಜ ನಾಟೇಕಾರ" ರವರನ್ನು ವಡಗೇರ, ತಾಲೂಕ ಸಮಿತಿ ಸದಸ್ಯರನ್ನಾಗಿ, ಜಿಲ್ಲಾ ಸಮಿತಿಯ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ತಾವುಗಳು ಸಂಘಟನೆಯ ಮೂಲ ಆಶಯ, ನಿಯಮಗಳಿಗೆ ಮೀರಿ ನಡೆಯಬಾರದೆಂದು ಆಶಿಸುತ್ತೇನೆ ಎಂದು ಕಾಶೀನಾಥ್ ನಾಟೇಕರ್ ನೂತನ ಪದಾಧಿಕಾರಿಗಳಿಗೆ ಕಿವಿ ಮಾತು ಹೇಳಿದರು. ಇದೆ
ಸಂದರ್ಭದಲ್ಲಿ :-ಕಾಶೀನಾಥ್ ನಾಟೇಕರ್ ಜಿಲ್ಲಾಧ್ಯಕ್ಷರು ಯಾದಗಿರಿ. ಸಾಯಬಣ್ಣ ನಾಟೇಕರ್ ಜಿ ಪ್ರ ಕಾರ್ಯದರ್ಶಿ.ದೊಡ್ಡ ಸಾಬಣ್ಣ ಕಟಗಿ ಶಹಾಪೂರ ಜಿಲ್ಲಾ ಕಾರ್ಯದರ್ಶಿ. ಸಾಬಣ್ಣ ಹಂಚಿನಾಳ. ಹಂಪಯ್ಯ ಯಡ್ಡಳ್ಳಿ. ಬಾಲರಾಜ್ ಹೊರಟೂರ್. ಬನ್ನಪ್ಪ ಕುರಕುಂದಿ ಮರೆಪ್ಪ ಗುರಸುಣಿಗಿ. ಮೌನೇಶ ಯಡ್ಡಳ್ಳಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ
ರಾಜಶೇಖರ ಮಾಲಿ ಪಾಟೀಲ್ ಶಹಾಪುರ