ಕಾರಟಗಿ:ತಾಲೂಕಿನ ಸಿಂಗನಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಬೂಟ್ ಮತ್ತು ಸಾಕ್ಷಿ ವಿತರಣೆ ಮಾಡುವ ಮೂಲಕ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಗೌಡ ಪಾಟೀಲ್ ಮತ್ತು ಶಿಕ್ಷಕರಾದ ವೀರೇಶ್ ಮಾತನಾಡಿ ಸರಕಾರ ಶಾಲೆಗಳು ಶಿಕ್ಷಣದಲ್ಲಿ ಎಲ್ಲಾ ರೀತಿಯಲ್ಲಿ ಸರಕಾರದ ಸೌಲಭ್ಯಗಳೊಂದಿಗೆ ಶಿಕ್ಷಣವನ್ನು ಒದಗಿಸುತ್ತದೆ ಅದನ್ನು ಪಾಲಕರು ದಿನ ನಿತ್ಯ ತಮ್ಮ ಮಕ್ಕಳ ಚಟುವಟಿಕೆಗಳನ್ನು ಮನೆಯಲ್ಲಿ ಗಮನ ಹರಿಸಬೇಕು, ಶಾಲೆಯಲ್ಲಿ ಮಧ್ಯಾಹ್ನದ ಊಟ ಜೊತೆ ಮೊಟ್ಟೆ ಹಾಲು ಮತ್ತು ಬಾಳೆಹಣ್ಣನ್ನು ವಿತರಿಸಲಾಗುತ್ತದೆ, ಇನ್ನೊಂದು ಸಂತೋಷದಾಯಕ ವಿಷಯ ವಿಚಾರವೇನಂದರೆ, ಇದೇ ಶಾಲಿಯಲ್ಲಿ ಓದಿ ಕೆಲ ಮಕ್ಕಳು ಸರಕಾರಿ ನೌಕರರನ್ನು ಪಡೆದಿದ್ದಾರೆ, ಮತ್ತು ಇಂದು ಇದೆ ಶಾಲೆಯಲ್ಲಿ ಓದಿದ ಕುಬೇರಪ್ಪ ಮಡಿವಾಳರ, ಲಕ್ಷ್ಮಿ ದೇವಿ ಲಿಂಗ ರೆಡ್ಡಿ, ಮಹಾದೇವಿ ಕಂಬಳಿ, ದುರ್ಗಮ್ಮ, ಮಂಜುನಾಥ ತಳವಾರ್, ಶಿಕ್ಷಕರಾಗಿ ನೇಮಕಾತಿಯನ್ನು ಪಡೆದಿದ್ದಾರೆ , ಖಾಸಗಿ ಶಾಲೆಯಲ್ಲಿ ಅಡ್ಮಿಶನ್ ಮತ್ತು ಡೊನೇಷನ್ ಹೆಚ್ಚು ಖರ್ಚು ಮಾಡುವುದಕ್ಕಿಂತ ಕಡಿಮೆ ವೆಚ್ಚದಲ್ಲಿ ನಿಮ್ಮ ಸರಕಾರ ಶಾಲೆ ಶಿಕ್ಷಣವನ್ನು ನೀಡಿ ಎಂದರು, ಈ ಸಂದರ್ಭದಲ್ಲಿ ಮಲ್ಲಿಕಾರ್ಜುನಗೌಡ ಪಾಟೀಲ್, ರಮೇಶ್ ತಳವಾರ್ ,ನಾಗೇಶ್ ಭೋವಿ, ಹನಮೇಶ್ ಅಂಗಡಿ, ರೆಡ್ಡೆಪ್ಪ ಮಳಗಡ್ಡಿ, ಯಂಕಪ್ಪ ಹಡಪದ್, ಚನ್ನಬಸವ, ಮಲ್ಲನಗೌಡ ಹಾಗೂ ಶಾಲಾ ಶಿಕ್ಷಕ ವೃಂದದವರು ಊರಿನ ಯುವಕರು ಭಾಗಿಯಾಗಿದ್ದರು
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ