ಪಕ್ಷಿಧಾಮ ಎಂದರೆ ರಂಗನತಿಟ್ಟು ನೆನಪಿಗೆ ಬರುವುದು ಸಹಜ. ಆದರೆ, ಉತ್ತರಕನ್ನಡ ಜಿಲ್ಲೆ ಮುಂಡಗೋಡು ತಾಲೂಕಿನಲ್ಲಿರುವ ಅತ್ತಿವೇರಿ ಪಕ್ಷಿಧಾಮ ಬಹಳಷ್ಟು ದೇಶವಿದೇಶಿ ಹಕ್ಕಿಗಳನ್ನ ಆಕರ್ಷಿಸುತ್ತದೆ.
ಸೂರ್ಯ ಉದಯಿಸುವ ಮುನ್ನವೆ ಹಕ್ಕಿಗಳ ಚಿಲಿಪಿಲಿ ಸದ್ದು ಎತ್ತ ನೋಡಿದರೂ ಅತ್ತ ಪಕ್ಷಿಗಳು. ಪಕ್ಷಿಗಳ ಹಾರಾಟ, ಕೂಗಾಟ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುವ ಸ್ವದೇಶಿ ಪಕ್ಷಿಗಳ ಕಲರವ ನೋಡಲು ಎರಡು ಕಣ್ಣುಗಳು ಸಾಲದು. ಇದಕ್ಕೆ ಸಾಕ್ಷಿಯಾಗಿದೆ
ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಅತ್ತಿವೇರಿ ಗ್ರಾಮದ ಸನಿಹದಲ್ಲಿ ಪಕ್ಷಿಧಾಮವಿದ್ದು ಹಲವಾರು ದಶಕಗಳಿಂದಲೂ ಅಕ್ಟೋಬರ್, ನವಂಬರ್ ತಿಂಗಳಲ್ಲಿ ದೇಶ ವಿದೇಶದ ನೂರಾರು ಬಗೆಯ ಪಕ್ಷಿಗಳು ವಲಸೆ ಬಂದು ವಂಶಾಭಿವೃದ್ಧಿ ಮಾಡಿಕೊಂಡು ಮಾರ್ಚ್ ಏಪ್ರೀಲ್ ತಿಂಗಳ ವೇಳೆಗೆ ಮರಳುವುದು ಸಾಮಾನ್ಯ ಅದರಂತೆ ಈ ಭಾರಿಯೂ ಪಕ್ಷಿಗಳು ಅತ್ತಿವೇರಿಗೆ ಆಗಮಿಸಿವೆ
ದೇಶ ವಿದೇಶಗಳ ಪಕ್ಷಿಗಳು ಋತುಮಾನಕ್ಕನುಸರಿಸಿ ವಲಸೆ ಬಂದು ಗೂಡುಕಟ್ಟಿ ವಂಶಾಭಿವದ್ಧಿ ತಾಣವಾಗಿದ್ದು ವೀಕ್ಷಣಾ ತಾಣವಾಗಿ ಪ್ರಸಿದ್ಧಿ ಪಡೆದಿರುವ ಮುಂಡಗೋಡ ತಾಲೂಕಿನ ಅತ್ತಿವೇರಿ ಪ್ರವಾಸಿ ತಾಣವಾಗಿದೆ
1990 ರಲ್ಲಿ ಇಂಗ್ಲೆಂಡಿನ ಸ್ಲಿಮ್‌ಬ್ರಿಡ್ಜ್‌ನ ಅಂತಾರಾಷ್ಟ್ರೀಯ ಜಲಪಕ್ಷಿ ಮತ್ತು ಜಲ ಪ್ರದೇಶಗಳ ಸಂಸ್ಥೆಯು ಮುಂಬಯಿಯ ಪ್ರಾಕತಿಕ ಇತಿಹಾಸ ಸಂಘದ ಸಹಯೋಗದಲ್ಲಿ ದೇಶದಲ್ಲಿ ಜಲಪಕ್ಷಿ ಗಣತಿಯನ್ನು ಕೈಕೊಂಡಿತ್ತು. ಇದು ಏಷ್ಯನ್ ರಾಷ್ಟ್ರಗಳಲ್ಲಿ ಏಕಕಾಲಕ್ಕೆ ನಡೆದಿತ್ತು. ಪಕ್ಷಿತಜ್ಞ ಪಿ.ಡಿ.ಸುದರ್ಶನ್ ಈ ಗಣತಿ ಕಾರ್ಯದಲ್ಲಿ ಪಾಲುಗೊಂಡು ಅತ್ತಿವೇರಿ ಜಲಾಶಯ ಪ್ರದೇಶದಲ್ಲಿ ಸಮೀಕ್ಷೆ ಕೈಕೊಂಡಾಗ ದೇಶ ವಿದೇಶಗಳ ಪಕ್ಷಿಗಳು ಅತ್ತಿವೇರಿ ಜಲಾಶಯಕ್ಕೆ ಬಂದಿರುವುದನ್ನು ಪ್ರಥಮ ಬಾರಿಗೆ ಗುರುತಿಸಿದ್ದರು. ನಂತರ ಈ ಬಗ್ಗೆ ನಿರಂತರ ವ್ಯವಸ್ಥಿತ ವೈಜ್ಞಾನಿಕ ಅಧ್ಯಯನ ಮಾಡಿ ಸರಕಾರಕ್ಕೆ ಯೋಜನಾ ವರದಿ, ನಕ್ಷೆ ಇತ್ಯಾದಿ ಸಲ್ಲಿಸಿದ್ದರು.
ಆದಕಾರಣ ಪಕ್ಷಿಧಾಮಕ್ಕೆ
ಪಕ್ಷಿ ತಜ್ಞ ಪಿ ಡಿ ಸುದರ್ಶನ್ ಹೆಸರಿಡುವOತೆ ಪಕ್ಷಿಪ್ರೆಮಿಗಳು ಒಕ್ಕೊರಲಿನಿಂದ ಮನವಿ ಮಾಡುತ್ತಿದ್ದಾರೆ