ತುಮಕೂರು ಜಿಲ್ಲೆಯ ಶಿರಾ ತಾಲೂಕು ಕೊಟ್ಟ ಗ್ರಾಮದಲ್ಲಿ ಇಂದು ಬೆಳಿಗ್ಗೆ 11 ಗಂಟೆಯಿಂದ ಸುಡುವ ಬಿಸಿಲನ್ನು ಲೆಕ್ಕಿಸದೆ ಸಾವಿರಾರು ಜನರು ದಗದಗಿಸಿ ಉರಿಯುವ ಸೂರ್ಯನ ಜೊತೆ ದಲಿತ ಸೂರ್ಯನನ್ನು ಅಂಬೇಡ್ಕರ್ ಭಾವಚಿತ್ರವನ್ನು ಜಾಥಾ ಮೂಲಕ ಗ್ರಾಮದಲ್ಲಿ ಮೆರವಣಿಗೆ ಮಾಡಿ ಕೊಟ್ಟ ಗ್ರಾಮದ ಬಸ್ ಸ್ಟಾಂಡ್ ಸರ್ಕಲ್ ನಲ್ಲಿ ಅಂಬೇಡ್ಕರ್ ನಾಮಫಲಕ ಉದ್ಘಾಟನೆ ಮಾಡಿ ಅಲ್ಲಿಂದ ಸಮಾರಂಭದ ಸ್ಥಳಕ್ಕೆ ತೆರಳಿ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.
ಈ ಒಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾllರವಿಕುಮಾರ್ ನಿಹ ದಶಮಾನಗಳಿಂದಲೂ ದಲಿತರು ಹಿಂದುಳಿದಿದ್ದಾರೆ ಆರ್ಥಿಕವಾಗಿ ಸಾಮಾಜಿಕವಾಗಿ ಧಾರ್ಮಿಕವಾಗಿ ಸಹ ಇವರಲ್ಲಿ ಸ್ವಾಭಿಮಾನದ ಕಿಚ್ಚು ಹುಟ್ಟಬೇಕು ಹಾಗೆ ಸಂಘಟನೆಯ ಶಿಕ್ಷಣ ಹೋರಾಟದ ಮೂಲಕ ನಾವು ಜಾಗೃತರಾಗಬೇಕು ಎಂದರು ನಂತರ ಡಾllನಾಗಭೂಷಣ ಬಗ್ನಾಡು ಇವರು ಇವರು ಸಹ ದೀನ ದಲಿತರ ಉದ್ದಾರಕ್ಕಾಗಿ ಅಂಬೇಡ್ಕರ್ ಅವರು ಬಹಳಷ್ಟು ಹೋರಾಟವನ್ನು ಮಾಡಿದ್ದಾರೆ.
ಇಂದು ಅವರು ಹೇಳಿರುವ ಹಾಗೆ ಸಾಮಾಜಿಕವಾಗಿ ಧಾರ್ಮಿಕವಾಗಿ ನಾವು ಶಿಕ್ಷಣವನ್ನು ಪಡೆದು ಜಾಗೃತರಾಗಬೇಕು ನಂತರ ಕೊಟ್ಟ ಶಂಕರ್ ಮಾತನಾಡಿ ಅಂಬೇಡ್ಕರ್ ಅವರು ಒಂದು ಜಾತಿಗೆ ಸೀಮಿತವಲ್ಲ ಇಡೀ ದೇಶಕ್ಕೆ ಸೀಮಿತ ಸಂವಿಧಾನವು ಸಹ ಒಂದು ಜಾತಿಗೆ ಸೀಮಿತವಲ್ಲ ಇಡೀ ದೇಶದಲ್ಲಿ ಬದುಕುವ ಎಲ್ಲಾ ಜನರಿಗೆ ಎಲ್ಲಾ ಜಾತಿಯವರಿಗೆ ಎಲ್ಲಾ ಧರ್ಮದವರಿಗೆ ಸಂವಿಧಾನವು ಅವಶ್ಯಕವಾಗಿದೆ ಎಂದು ಹೇಳಿದರು.ಈ ಸಮಾರಂಭಕ್ಕೆ ಹಾಜರಾಗಿದ್ದ.ಡಾll ರವಿಕುಮಾರ್ ನೀಹ ಚಿಂತಕರು ಮತ್ತು ಬರಹಗಾರರು ತುಮಕೂರು ಡಾ.ನಾಗಭೂಷಣ್ ತುಮಕೂರು ವಿಶ್ವವಿದ್ಯಾಲಯ. ಶ್ರೀ ಕೊಟ್ಟ ಶಂಕರ್ ಶ್ರೀ ರಾಜಸಿಂಹ ಶ್ರೀ ರಂಗನಾಥ್ ಕೆ, ಕೊಟ್ಟ ಕರಿಯಣ್ಣ,ಸಣ್ಣಪ್ಪ ಕೊಟ್ಟ ಗ್ರಾಮದ ಜೈ ಭೀಮ್ ಬಳಗದ ಯುವಕರು,ಗ್ರಾಮದ ಹಿರಿಯರು ಮತ್ತು ಮಹಿಳೆಯರು ಗ್ರಾಮದ ಮುಖ್ಯಸ್ಥರು ಸಹ ಹಾಜರಾಗಿದ್ದರು.
ವರದಿಗಾರರು ಕೊಟ್ಟ ಕರಿಯಣ್ಣ