30-04-24 ಸಿರವಾರದ ಮಾನ್ವಿ ಕ್ರಾಸ್ ನಲ್ಲಿ ನಡೆದ ಪ್ರತಿಭಟನೆ.
ಕಾರ್ಪೊರೇಟರ್ ಕೋಮುವಾದಿ ಫ್ಯಾಸಿಸ್ಟ್ ನೇತೃತ್ವದ ಬಿಜೆಪಿಯನ್ನು ಸೋಲಿಸಿ ದೇಶದ ಸಾರ್ವಭೌಮತ್ವ,ಸಂವಿಧಾನ, ಪ್ರಜಾತಂತ್ರವನ್ನು ರಕ್ಷಿಸಿ ಚುನಾವಣೆ ಬಾಂಡ್ ಬೃಹತ್ ಭ್ರಷ್ಟಾಚಾರವನ್ನು ತನಿಖೆಗೊಳಪಡಿಸಲು ಹೋರಾಡಿ ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಬಾರಿಯ ಲೋಕಸಭೆಗೆ 400 ಸ್ಥಾನ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ಜನರ ತೀರ್ಪಿಗಿಂತ ಮುಂಚೆ ತಾವೆ ತೀರ್ಪು ಘೋಷಿಸಿಕೊಳ್ಳುವುದು ಪ್ಯಾಸಿಸ್ಟ್ ಸರ್ವಾಧಿಕಾರದ ಧೋರಣೆಯಲ್ಲವೆ ?ಅವರು ಚುನಾವಣೆ ಆಯೋಗ ಇಡಿ ಐಡಿ ಸಿಬಿಐ ಇತರೆ ಸರ್ಕಾರಿ ಯಂತ್ರಗಳನ್ನು ಬಳಸಿಕೊಂಡು ಮತ್ತು ಹಣದ ಹೊಳೆ ಹರಿಸಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಸುಳ್ಳು ಮತ್ತು ದ್ವೇಷದ ಪ್ಯಾಕ್ಟರಿಯಿಂದ ಅನೇಕ ಸಶಸ್ತ್ರಗಳನ್ನು ಉತ್ಪಾದಿಸಿಕೊಂಡು ಚುನಾವಣೆಗೆ ಸಿದ್ಧಗೊಂಡಿದ್ದಾರೆ. 2019 ರ ಚುನಾವಣೆಯಲ್ಲಿ ಪುಲ್ವಾಂ ಘಟನೆಯನ್ನು ಮುಂದಿಟ್ಟುಕೊಂಡಿದ್ದರು. ಈ ಬಾರಿ ಚುನಾವಣೆಯಲ್ಲಿ ಶ್ರೀ ರಾಮನ ಮೂರ್ತಿ ಪ್ರತಿಷ್ಠಾಪನೆ ಸರ್ಕಾರದ ಸಾಧನೆ ಎನ್ನುವಂತೆ ಬಿಂಬಿಸಿ ಮತದಾರರನ್ನೂ ಮೋಡಿ ಮಾಡುತ್ತಿದ್ದಾರೆ. ಕರ್ನಾಟಕ ಸೆರಿದಂತೆ ಬಿಜೆಪಿಯೆತಾರ ಆಡಳಿತ ಇರುವ ರಾಜ್ಯಗಳಿಗೆ ನ್ಯಾಯಯುತವಾಗಿ ಕೊಡಬೇಕಾದ ತೆರಿಗೆ ಪಾಲಿನ ಹಣ ಕೊಡದೆ ಕೇಂದ್ರ ಆರ್ಥಿಕ ಸರ್ವಾಧಿಕಾರ ನಡೆಸಿದೆ. ಜಾರ್ಖಂಡ ಮತ್ತು ದೆಹಲಿ ಮುಖ್ಯಮಂತ್ರಿಗಳನ್ನು ಬಂಧಿಸಿ ಮತ್ತು ಕೆಲವು ಪಕ್ಷಗಳ ಬ್ಯಾಂಕ್ ಖಾತೆಗಳನ್ನು ಬಂದ್ ಮಾಡಿ ಪ್ರಜಾತಂತ್ರದ ಕತ್ತನ್ನು ಹಾಡುಹಗಲೇ ಕೊಯಿದಿದ್ದಾರೆ. ಆದರೆ 2024ರ ಚುನಾವಣೆ ಅವರ ಎಲ್ಲಾ ಲೆಕ್ಕಚಾರಗಳನ್ನು ತಲೆಕೆಳಗೆ ಮಾಡುತ್ತೇವೆ. ಏಕೆಂದರೆ ಇತಿಹಾಸದಲ್ಲಿ ಜನರನ್ನು ಸುಲಿಗೆ ಮಾಡುವ ಶತ್ರುಗಳು ಯಾರೂ ಹೆಚ್ಚಿನ ಕಾಲಾವಧಿ ಅಧಿಕಾರದಲ್ಲಿ ಉಳಿದಿಲ್ಲ. ಜಗತ್ತಿನಲ್ಲಿ ದೊಡ್ಡದಾದ ಚುನಾವಣೆ ಬಾಂಡ ಹಗರಣ ಕಾರ್ಪೊರೇಟರ್ ಕಿಂಗ್ ಅಲೆಯಲ್ಲಿ ಚುನಾವಣೆ ಗೆಲ್ಲುವ ಭ್ರಮೆ1999-2024CPIML ಸ್ಪರ್ಧೆ?. ಚುನಾವಣೆಯಲ್ಲಿ ಪರದರ್ಶಕತೆ ತರುವ ನೆಪದಲ್ಲಿ ರಾಜಕೀಯ ಪಕ್ಷಗಳಿಗೆ ದೇಣಿಗೆ ಕೊಡುವ ಕಾಯ್ದೆಗೆ ಕೇಂದ್ರ ಸರ್ಕಾರ 2018ರಲ್ಲಿ ತಿದ್ದುಪಡಿ ತಂದಿತ್ತು ಹಿಂದೆ ಯಾವುದೇ ಕಂಪನಿ ಮತ್ತು ಉದ್ಯಮಿದಾರರು ಮೂರು ವರ್ಷಗಳ ಲಾಭದಲ್ಲಿ ಶೇಕಡ %7. ಏಳರಷ್ಟು ಹಣವನ್ನು ದೇಣಿಗೆ ಕೊಡಬಹುದಾಗಿತ್ತು.. ತಿದ್ದುಪಡಿ ಕಾಯ್ದೆಯ ನಂತರ ನಷ್ಟದಲ್ಲಿದ್ದ ಕಂಪನಿಗಳು ಕೂಡ ಚುನಾವಣೆ ಬಾಂಡ್ ಕೊಡಬಹುದು. ಅವಕಾಶವನ್ನು ಬಳಸಿಕೊಂಡು ದೊಡ್ಡ ದೊಡ್ಡ ಕಾರ್ಪೊರೇಟರ್ ಕಂಪನಿಗಳು ಸರ್ಕಾರಕ್ಕೆ ನಷ್ಟ ತೋರಿಸಿ ತಮ್ಮ ಲಾಭವನ್ನು ಬೇನಾಮಿ ಹೆಸರಿನ ಶೇಲ್ ಕಂಪನಿಗೆ ವರ್ಗಾಯಿಸಿ ಲಕ್ಷಾಂತರ ಕೋಟಿ ರೂಪಾಯಿ.ಸಾಲ ಮನ್ನಾ ಮಾಡಿಸಿಕೊಂಡು ಬಿಜೆಪಿಗೆ 8,250 ಕೋಟಿ ರೂಪಾಯಿ ಬೆಲೆಯ ಬಾಂಡ್ ಕೊಟ್ಟಿವೆ ಈ ಹಗಲು ದರೋಡೆಯ ವಿರುದ್ಧ ಖ್ಯಾತ ವಕೀಲರಾದ ಪ್ರಶಾಂತ್ ಭೂಷಣ ಮತ್ತು ಇತರರು ಸತತ ಐದು ವರ್ಷಗಳವರೆಗೆ ಕಾನೂನು ಹೋರಾಟ ನಡೆಸಿದರು. ಚುನಾವಣೆ ಬಾಂಡ್ ವ್ಯವಹಾರ ಆ ಸಂವಿಧಾನಿಕವೆಂದು ವ್ಯಾಖ್ಯಾನಿಸಿದ ಸುಪ್ರೀಂ ಕೋರ್ಟ್ “” ಫೆಬ್ರವರಿ ತಿಂಗಳಲ್ಲಿ” ಐತಿಹಾಸಿಕ ತೀರ್ಪು ನೀಡಿ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಿದ್ದು. ಕಾಂಗ್ರೆಸ್ ನೇತೃತ್ವದಲ್ಲಿ UPA 2 ಸರ್ಕಾರದ ಅವಧಿಯ, 2 ಜಿ ಸ್ಪೆಕ್ಟ್ರಮ್ ಯೋಜನೆ ಜಾರಿಯಾದರೆ ಸರ್ಕಾರಕ್ಕೆ 1.70 ಲಕ್ಷ ಕೋಟಿ ತೆರಿಗೆ ವಂಚನೆಯಾಗುತ್ತದೆ ಎಂದು ಅಂದಾಜು ಮಾಡಲಾಗಿತ್ತು.ಈ ಹಗರಣದ ವಿರುದ್ಧ ದೇಶದ ಜನರು ಮತ್ತು ಅಣ್ಣಾ ಹಜಾರೆ ಅವರ ನೇತೃತ್ವದಲ್ಲಿ ದೇಶದಾದ್ಯಂತ ದೊಡ್ಡ ಮಟ್ಟದ ಹೋರಾಟ ನಡೆಸಿದರು. ಮಾಧ್ಯಮಗಳು ಸರ್ಕಾರದ ವಿರುದ್ಧ ಮುಗಿvಬಿದ್ದಿದ್ದವು ಈ ಕಾರಣದಿಂದ UPA ನೇತೃತ್ವ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಚುನಾವಣೆ ಬಾಂಡ್ ಹಗರಣ 2 ಜಿ, ಹಗ ರಣಕ್ಕಿಂತ 20 ಪಟ್ಟು ದೊಡ್ಡದಾಗಿದೆ. ಕಾರಣವೇನೆಂದರೆ ಸಾವಿರಾರು ಕೋಟಿ ಬೆಲೆಯ ಬಾಂಡುಗಳನ್ನು ಬಿಜೆಪಿಗೆ ಕೊಟ್ಟಿರುವ ಪ್ರಮುಖ 30 ಕಂಪನಿಗಳು.ರಾಷ್ಟ್ರೀಯ ಕಾರಿಡಾರ್, ರಸ್ತೆ ರೇಲ್ವೆ, ವಿಮಾನಯಾನ, ಬಂದರು,ನಿರ್ಮಾಣ ಮತ್ತು ಕಲ್ಲಿದ್ದಲು ಇತರೆ ಗಣಿಗಾರಿಕೆ ಗುತ್ತಿಗೆ ಪಡೆದು ಹತ್ತಾರು ಲಕ್ಷ ಕೋಟಿ ರೊ. ಸಾರ್ವಜನಿಕ ತೆರಿಗೆ ಹಣವನ್ನು ನುಂಗಿ ಹಾಕಿವೆ. ಪರಿಸರ,ಅರಣ್ಯ ಸಂರಕ್ಷಣೆ ಮಾಡುವ ಕಾಯ್ದೆಗೆ ತಿದ್ದುಪಡಿ ತಂದು, ನಿಸರ್ಗವನ್ನು ನಾಶ ಮಾಡಲು ಕಂಪನಿಗಳಿಗೆ ಹಸಿರು ನಿಶಾನೆ ತೋರಲಾಗಿದೆ. ಕೈಗಾರಿಕೆ ನೆಪದಲ್ಲಿ ರೈತರು ಭೂಮಿ ಕಿತ್ತುಕೊಳ್ಳುವುದು ಸೇರಿದಂತೆ ದೇಶದ ಸಂಪತ್ತನ್ನು ಲೂಟಿ ಮಾಡಲು ಕಂಪನಿಗಳಿಗೆ ಅಧಿಕಾರ ನೀಡಲಾಗಿದೆ. ಹಾಗಾಗಿ ಬಾಂಡು ಖರೀದಿ ಕೇಂದ್ರ ಸರ್ಕಾರದ ಹಾಫ್ತಾ ವಸೂಲಿ ವ್ಯವಹಾರವಾಗಿದೆ. ಎಸ್ ಬಿ ಐ ಮೋದಿ ಸರ್ಕಾರವನ್ನು ಬಚ್ಚವ್ ಮಾಡಲು ಪ್ರಾರಂಭದಲ್ಲಿ ಡ್ರಾಮಾ ಪ್ರಾರಂಬಿಸಿತ್ತು. ಸುಪ್ರೀಂ ಕೋರ್ಟ್ ಚೀಮಾರಿ ಹಾಕಿದ ನಂತರ ಹಗರಣ ಬಯಲುಗೊಂಡಿದೆ. ಆದರೂ ಇನ್ನೂ ಮುಖ್ಯವಾದ ಮಾಹಿತಿಯನ್ನು ಮುಚ್ಚಿಟ್ಟು ಮೋದಿ ಸರ್ಕಾರವನ್ನು ರಕ್ಷಿಸುವ ಕಾರ್ಯ ಮುಂದುವರೆದಿದೆ. ಮಾಸ್ ಲೈನ್ ರೆಡ್ ಫ್ಲ್ಯಾಗ್ ಸಮಿತಿಯ ರಾಜ್ಯ ಸಮಿತಿ ಜಂಟಿ ಕರೆ ಸಂಘಟನೆಯು , ಕಾರ್ಪೊರೇಟರ್ ಕೋಮುವಾದಿ ರಾಜ್ಯ ಸಮಿತಿ ನೇತೃತ್ವದ. ಬಿಜೆಪಿಯನ್ನು ಸೋಲಿಸಿ, ಇಂಡಿಯಾ ಮೈತ್ರಿಕೂಟದ ಪಕ್ಷಗಳನ್ನು ಗೆಲ್ಲಿಸಿ!” ದೇಶದ ಸರ್ವಬೌಮತ್ವ ಸಂವಿಧಾನ ಪ್ರಜಾತಂತವನ್ನು ರಕ್ಷಿಸಿ!” ಚುನಾವಣೆ ಬಾಂಡ್ ಬೃಹತ್ ಭ್ರಷ್ಟಾಚಾರವನ್ನು ತನಿಖೆಗೋಳಪಡಿಸಲು ಹೋರಾಡಿ!’ ಯಾವುದೇ ರೀತಿಯಿಂದ ಬಿಜೆಪಿ ಸರ್ಕಾರವನ್ನು ಗೆಲ್ಲಿಸದಿರಿ. ಯಾಕಂದ್ರೆ ಬಿಜೆಪಿ ಸರ್ಕಾರವು ಬಹಳಷ್ಟು ಮೋಸ ಮತ್ತು ಹಗರಣಗಳನ್ನು ಮಾಡಿದೆ, ಅದನ್ನು ತಡೆಗಟ್ಟುವ ಒಂದು ಉದ್ದೇಶದಿಂದ ಈ ಒಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು. ಪ್ರತಿಭಟನೆಯ ಉದ್ದೇಶ ಸಂವಿಧಾನ ರಕ್ಷಣೆಯಾಗಬೇಕು ಬಿಜೆಪಿ ಸರ್ಕಾರವನ್ನು ಕೋಮ ವಾದಿ ಪಕ್ಷವಾಗಿದೆ ಆ ಪಕ್ಷವನ್ನು ಸೋಲಿಸುವ ಮುಖಾಂತರ ಬಿಜೆಪಿಗೆ ಯಾವುದೇ ರೀತಿಯಿಂದ ವೋಟುಗಳನ್ನೂ ಹಾಕಬೇಡಿ ಎಂದು ಮಾಸ್ ಲೈನ್ ರೆಡ್ ಫ್ಲ್ಯಾಗ್ ರಾಜ್ಯ ಸಮಿತಿ ಜಂಟಿ ಕರೆ ಸಂಘಟನೆಯಿಂದ ಸಿರವಾರದ ಮಾನ್ವಿ ಕ್ರಾಸ್ ಸರ್ಕಲ್ ನಲ್ಲಿ ಹೋರಾಟವನ್ನು ಮಾಡಿದರು. ಇದೇ ಸಂದರ್ಭದಲ್ಲಿ,, ಮಾಸ್ ಲೈನ್ ರೆಡ್ ಫ್ಲ್ಯಾಗ್ ರಾಜ್ಯ ಸಮಿತಿ ಜಂಟಿ ಕರೆ ಸಂಘದ ಪದಾಧಿಕಾರಿಗಳು ಸಂಘದ ಬೆಂಬಲಿತರು, ಇನ್ನು ಇತರರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.