ಸೊರಬ:ರಾಷ್ಟ್ರದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಮಹತ್ತರವಾಗಿದ್ದು,ಕಾರ್ಮಿಕರು ಮತ್ತು ಮಾಲೀಕರು ಒಂದೇ ನಾಣ್ಯದ ಎರಡು ಮುಖವಿದ್ದಂತೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ, ಸಮಾಜ ಸೇವಕ ಡಿ.ಎಸ್ ಶಂಕರ್ ಶೇಟ್ ಹೇಳಿದರು.
ಪಟ್ಟಣದ ಹೊಸಪೇಟೆ ಬಡಾವಣೆ ರಾಜೀವ್‌ನಗರದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಓಂ ಪಿಕಲ್ಸ್ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಮತ್ತು ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಕಾರ್ಮಿಕರ ಪರಿಶ್ರಮದಿಂದಲೇ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ.ಪ್ರತಿಯೊಂದು ದೇಶದ ಆರ್ಥಿಕತೆ ದೇಶದ ಕಾರ್ಮಿಕರ ಮೇಲೆ ಅವಲಂಬಿತವಾಗಿರುತ್ತದೆ. ಯಾವುದೇ ರೀತಿಯ ಅಭಿವೃದ್ಧಿಯನ್ನು ನಾವು ಕಾಣಬೇಕಾದಲ್ಲಿ ಅದು ಕಾರ್ಮಿಕರು ನಿರ್ವಹಿಸುವ ಕಾರ್ಯದಲ್ಲಿರುತ್ತದೆ ಹಾಗಾಗಿ ನಮ್ಮ ದೇಶದಲ್ಲಿ ಕಾರ್ಮಿಕ ಸಮೂಹಕ್ಕೆ ಹೆಚ್ಚಿನ ಮೌಲ್ಯವನ್ನು ನೀಡಲಾಗುತ್ತಿದೆ.ಕಾರ್ಮಿಕರು ಶ್ರದ್ಧೆ, ಪ್ರಾಮಾಣಿಕತೆಯಿಂದ ದುಡಿದಾಗ ಮಾತ್ರ ಮಾಲೀಕರು ಉನ್ನತ ಸ್ಥಾನಕ್ಕೆ ಏರಿ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದರು.
ಅಸಂಘಟಿತ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಕೇಶವಮೂರ್ತಿ ಪೇಟಕರ್ ಮಾತನಾಡಿ,ಶ್ರಮಜೀವಿ ವರ್ಗಕ್ಕೆ ಸೇರಿರುವ ಕಾರ್ಮಿಕರಿಗೆ,ಕಾರ್ಮಿಕ ಇಲಾಖೆಯಿಂದ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು ಅಂಥ ಸೌಲಭ್ಯಗಳ ಅರಿವನ್ನು ಪ್ರತಿಯೊಬ್ಬ ಕಾರ್ಮಿಕರು ಹೊಂದಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಓಂ ಪಿಕಲ್ಸ್ ಮಾಲೀಕ ಗಣೇಶ್ ಮಾತನಾಡಿದರು.
ಈ ಸಂದರ್ಭದಲ್ಲಿ
ಲಕ್ಷ್ಮಣ್ ಸಾಗರ್,ಗಣಪತಿ ಓಟೂರು,ಶ್ರೀಧರ್ ಮೂರ್ತಿ ನಡಹಳ್ಳಿ,ರೇಷ್ಮಾ ಡಿಸೋಜ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಮಂಜುನಾಥ್,
ರಾಘವೇಂದ್ರ.ಎಸ್ ಮತ್ತಿತರರು ಇದ್ದರು.
ಕಾರ್ಮಿಕರಾದ ರೇಣುಕಾ ಪುಷ್ಪಾವತಿ,ಕಲಾವತಿ,ಗುಪ್ತ, ವಿಜಯ್ ಮಂಜು ಅವರನ್ನು ಸನ್ಮಾನಿಸಲಾಯಿತು.
ವರದಿ-ಸಂದೀಪ ಯು.ಎಲ್.,ಕರುನಾಡ ಕಂದ ನ್ಯೂಸ್,ಸೊರಬ