ಓ ಬಿಸಿಲೆ
ಬೀಸುವುದು ಉರಿ ಗಾಳಿ ಇಲ್ಲೇ
ಭೂಮಿ ಕಾಯುತಿರುವುದು ನಿನ್ನಿಂದಲೇ
ಗಿಡ ಮರಗಳಿಗೆ ನೀರಿಲ್ಲದೆ
ಭಾಸ್ಕರನ ನೋಟ
ಸುಡುತ್ತಿರುವುದು ತಲೆಯು ಕೆಂಡಮಂಡಲ
ಹೆಚ್ಚಿರುವುದು ಬಾಯಾರಿಕೆ ದಾಹ
ಛತ್ರಿಗಳೇ ನಮಗೆ ಪರ್ಯಾಯ ಮಾರ್ಗ
ಮನೇಲಿ ಇರಬೇಕು ಪ್ರತಿದಿನ
ಭಾಸ್ಕರನ ಬಿಸಿಲಿಗೆ ಎದುರಿ ಆ ಕ್ಷಣ
ಕುಡಿಬೇಕು ಶುದ್ಧವಾದ ನೀರನ್ನು
ಈ ಕ್ಷಣದಲ್ಲಿ ಬದುಕುವುದು ಕಷ್ಟವಣ್ಣ
-ಚಂದ್ರಶೇಖರಚಾರ್ ಎಂ,
ಶಿಕ್ಷಕರು ವಿಶ್ವಮಾನವ ಪ್ರೌಢಶಾಲೆ,ಚಿತ್ರದುರ್ಗ