ಶೀರ್ಷಿಕೆ:ದುಡಿಯುವ ವರ್ಗ
ಹಗಲು ರಾತ್ರಿ ದುಡಿವರು
ದೇಶಕ್ಕೆ ಅನ್ನ ನೀಡುವರು
ಹಸಿದ ಹೊಟ್ಟೆಯ ಕಾರ್ಮಿಕರು
ಕಷ್ಟದಲ್ಲಿ ದುಡಿದು ಬದುಕುವರು
ಇನ್ನೊಂದು ಊರಿಗೆ ಹೋಗುವರು
ಮನೆ ಕಟ್ಟಡದಲ್ಲಿ ಜಾಣ ನಿಪುಣರು
ಸೂರ್ಯನ ತಾಪವು ಏರಿದರು
ಮಳೆ ಚಳಿ ಎಷ್ಟು ಜೋರಾಗಿದರು
ಬಿಸಿಲು ಗಾಳಿ ಲೆಕ್ಕಿಸದೆ ದುಡಿಯುವರು
ಶುದ್ದ ಮನಸ್ಸಿನ ಸಾಧಕರು ಇವರು
ಬಲಿಷ್ಠ ದೇಶದ ಏಳಿಗೆಯ ಕಾರ್ಮಿಕರು
ಶ್ರಮಿಕರಿಗೆ ನ್ಯಾಯವು ನೀಡುವಿರಾ
ಧರ್ಮವು ಕರ್ಮವು ಕಷ್ಟದ ಕೆಲಸವು
ನಿನ್ನಿಂದ ಸಾಧ್ಯವು ಬದುಕಿನ ಸ್ತಂಭವು
ಕೈತುಂಬಾ ಕಾಂಚನ ಕಾಣದ ಸಂಬಂಧವು
ದುಡಿಯುವದರಲ್ಲಿ ಕೈಲಾಸ ಕಂಡವರು
-ಮಹಾಂತೇಶ ಖೈನೂರ
ಸಾ//ಯಾತನೂರ