ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ತೆಂಗಿನ ಎಳೆ ನೀರಿನಿಂದ ಶ್ರೀ ಶಂಕರಲಿಂಗೇಶ್ವರ ಮಹಾರಥ ಶುದ್ಧೀಕರಣ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಈಚೆಗೆ ನಡೆದ ಶ್ರೀ ಶಂಕರಲಿಂಗೇಶ್ವರ ಮಹಾರಥೋತ್ಸವದಲ್ಲಿ ಪಾಲ್ಗೊಳ್ಳಲು ಭಕ್ತರು ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ನಿರೀಕ್ಷೆಗೂ ಮೀರಿ ಆಗಮಿಸಿದ ಹಿನ್ನಲೆ ಜನದಟ್ಟಣೆ ಉಂಟಾಗಿ ಕಾಲ್ತುಳಿತಕ್ಕೆ ಒಳಗಾಗಿ ರಥದ ಚಕ್ರಕ್ಕೆ ಸಿಲುಕಿ ಸ್ಥಳೀಯ ಮೂವರು ಭಕ್ತರು ಮೃತಪಟ್ಟ ಹಿನ್ನೆಲೆ ಗುರುವಾರದಂದು 2501ಎಳೆಯ ತೆಂಗಿನ ಕಾಯಿ ನೀರಿನಿಂದ ರಥವನ್ನು ಶುದ್ಧೀಕರಿಸಲಾಯಿತು.
ಈ ನಿಮಿತ್ಯ ಪ್ರಾರಂಭದಲ್ಲಿ ಬಂಥನಾಳದ ಶ್ರೀ ಡಾ.ವೃಷಭಲಿಂಗೇಶ್ವರ ಮಹಾಶಿವಯೋಗಿಗಳು, ಅಗರಖೇಡದ ವೀರಕ್ತಮಠದ ಪ್ರಭುಲಿಂಗ ಸ್ವಾಮೀಜಿ, ಆಳೂರಿನ ಶಂಕರಾನಂದ ಸ್ವಾಮೀಜಿ,ಶಿರವಾಳದ ಶ್ರೀ ಸೋಮಲಿಂಗ ಸ್ವಾಮೀಜಿ,ಸೋಲಾಪುರದ ಜಯಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ವಿಘ್ನೇಶ್ವರ ಪೂಜೆ,ರಥಕ್ಕೆ ಮಹಾರುದ್ರಾಭಿಷೇಕ,ಸ್ವಸ್ತಿ ಪುಣ್ಯವಾಚನ,ಹೋಮ ಹವನ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನೆರವೇರಿತು.
ತೆಲಂಗಾಣ ರಾಜ್ಯದ ಗುರ್ಜಾಲದ ಅಭಿಷೇಕ ಹಿರೇಮಠ,ಯಾದಗಿರಿ ಜಿಲ್ಲೆಯ ರಟ್ನಡಗಿಯ ಸಿದ್ದಯ್ಯ ಸ್ವಾಮೀಜಿ,ಜಾಲಾಪುರದ ವೀರಭದ್ರಯ್ಯ ಸ್ವಾಮೀಜಿ ನಿರಂತರ 4 ಗಂಟೆಯ ವರೆಗೆ ವೇದ ಘೋಷ, ಸಂಸ್ಕೃತದಲ್ಲಿ ಮಂತ್ರ ಪಠಿಸಿದರು.ಸ್ಥಳೀಯ ವೇ.ಈರಯ್ಯ ಹಿರೇಮಠ ದಂಪತಿ ಪೂಜೆ ಸಲ್ಲಿಸಿದರು.
ಬಳಿಕ ರಥದ ಮೇಲಿನ ಬಂಥನಾಳದ ಲಿಂಗೈಕ್ಯ ಶ್ರೀ ಶಂಕರಲಿಂಗೇಶ್ವರ ಹಾಗೂ ಲಿಂ.ಶ್ರೀ ಸಂಗನಬಸವೇಶ್ವರ ಮಹಾಶಿವಯೋಗಿಗಳ ಮೂರ್ತಿಗೆ ಅಭಿಷೇಕ ನೆರವೇರಿಸಿದ ಬಳಿಕ ಸ್ಥಳಿಯ ಸುತ್ತಲ ಗ್ರಾಮದ ಭಕ್ತರು ಕೊಡಮಾಡಿದ ಒಟ್ಟು 2501 ಎಳೆಯ ಟೆಂಗಿನ ಕಾಯಿ ನೀರಿನಿಂದ ಇಡೀ ರಥವನ್ನು ಪೂಜ್ಯರ,ನೆರೆದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂತ್ರಘೋಷದೊಂದಿಗೆ ಸಂಪೂರ್ಣ ಶುದ್ಧಿಕರಿಸಲಾಯಿತು.
ಬಳಿಕ ಶ್ರದ್ದಾ,ಭಕ್ತಿಯಿಂದ ರುದ್ರ ಹೋಮ, ಗಣಹೋಮ,ಮಹಾಮೃತ್ಯುಂಜಯ ಹೋಮ, ಜಯಾದಿ ಹೋಮ,ಹವನ ಕಾರ್ಯಕ್ರಮದೊಂದಿಗೆ ರಥ ಶುದ್ದಿಕರಣ ಕಾರ್ಯ ಸಂಪನ್ನಗೊಂಡಿತು. ಇದೇ ದಿನ ಸಂಜೆ ಗ್ರಾಮದ ಸಂಪ್ರದಾಯದಂತೆ ಉತ್ಸವದ ನಿಮಿತ್ಯ ರಥಕ್ಕೆ ಅಳವಡಿಸಲಾದ ಕಳಶದ ಅವರೋಹಣ ಕಾರ್ಯ ಸರ್ವ ಭಕ್ತರ ಸಮ್ಮುಖದಲ್ಲಿ ನಡೆಯಿತು.

ವರದಿ ಮನೋಜ್ ನಿಂಬಾಳ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ