ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ತಂದೆ ಮಲ್ಲಪ್ಪ ತಾಯಿ ಸತ್ವವ್ವ ಪುಣ್ಯ ದಂಪತಿಗಳ ಮುದ್ದಿನ ಮಗ ಪ್ರಶಾಂತ ಪಾಟೀಲರು. ಪ್ರಾಥಮಿಕ ಶಿಕ್ಷಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ ಪ್ರೌಢ ಶಿಕ್ಷಣವನ್ನು ಸಿದ್ದೇಶ್ವರ ಪ್ರೌಢ ಶಾಲೆ ಮೋಳೆ ಗ್ರಾಮದಲ್ಲಿ ಕಲಿತರು ಕೆ.ಎಲ್.ಇ ಅಥಣಿ ಹಾಗೂ ಹಾರುಗೇರಿಯಲ್ಲಿ ಪಿಯುಸಿ ಶಿಕ್ಷಣ ಮುಗಿಸಿದರು.
ಇಂಜಿನೀಯರಿಂಗ್ ಶಿಕ್ಷಣವನ್ನು ದಾವಣಗೆರೆಯಲ್ಲಿ ಮುಗಿಸಿದರು ಮಹಾರಾಷ್ಟ್ರ ರಾಜ್ಯದ ಕೊಲ್ಲಾಪೂರ ಕಾರ್ಖಾನೆಯಲ್ಲಿ ಇಂಜಿನೀಯರ್ ರಾಗಿ ಸೇವೆ ಸಲ್ಲಿಸಿದರು,ನಗರ ಬಿಟ್ಟು ತಮ್ಮ ಹಳ್ಳಿಗೆ ಮರಳಿದರು. ನೀರಾವರಿ ವಂಚಿತ ಹೊಲ ಗದ್ದೆಗಳಿಗೆ ಸರ್ ಎಂ ವಿಶ್ವೇಶ್ವರಯ್ಯ ಏತ ನೀರಾವರಿ ಯೋಜನೆ ರೈತರ ಸಹಕಾರದಲ್ಲಿ ಕೃಷ್ಣಾ ನದಿಯಿಂದ ಪೈಪ್ ಲೈನ್ ಮೂಲಕ ನೀರು ತಂದ ಹಸಿರು ಕ್ರಾಂತಿಯ ಹರಿಕಾರಯೆಂದರೆ ತಪ್ಪಗಲಾರದು.ಆದರೆ ನಿಸ್ವಾರ್ಥ ಸೇವೆ ಕೆಲವು ವಿರೋಧಿಗಳಿಗೆ ಹಿಡಿಸುತ್ತಿರಲಿಲ್ಲ ಇದನ್ನು ಮನ ಗಂಡು ಸಂಘ ದಿಂದ ಹೊರಗೆ ಬಂದರು.ತಾವೇ ಬಾವಿ ತೋಡಿ ನೀರಾವರಿ ಮಾಡಿ ಒಂದು ಎಕರೆಗೆ 75 ರಿಂದ 80 ಟನ್ ಕಬ್ಬು ಇಳುವರಿ ಪಡೆದರು ಪ್ರಗತಿಪರ ರೈತರಾಗಿ ಹೊರಹೊಮ್ಮಿದರು ದಿನಗಳು ಕಳೆದಂತೆ ಸ್ಥಳೀಯ ಗ್ರಾಮ ಪಂಚಾಯತ ಸದಸ್ಯರಾಗಿ ಸೇವೆ ಸಲ್ಲಿಸಿದರು,ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಪ್ರಶಾಂತ ಪಾಟೀಲರನ್ನು ಸೋಲಿಸಿದರು ಅಧ್ಯಕ್ಷ ಸ್ಥಾನ ವಿರೋಧಿಗಳ ಪಾಲಾಯಿತು ಏಕೆಂದರೆ ಹಣ ಗೆದ್ದಿತ್ತು ಸತ್ಯ ಮಣ್ಣುಪಾಲಾಯಿತು.ಹೀಗೆ ಎರಡು ಮೂರು ಚುನಾವಣೆಯಲ್ಲಿ ಮೋಸ ಮಾಡಿದರು ರಾಜಕೀಯದಿಂದ ದೂರವಾದರು.ಬಡವರ ದೀನ ದಲಿತರ ಪರ ಕೆಲಸ ಮಾಡುವ ಪ್ರಶಾಂತ ಪಾಟೀಲರು ಒಳ್ಳೆಯತನ ಅವರಿಗೆ ಮುಳ್ಳಾಯಿತು.ಯಾರ ಬಳಿಯೂ ಹಣ ಪಡೆಯದೆ ಕಾಯಾ ವಾಚಾ ಮನಸಾ ದಿಂದ ಕೆಲಸ ಮಾಡಿದ ಕಾಯಕಯೋಗಿ ಅಂದರೆ ತಪ್ಪಗಲಾರದು.ಹೀಗೆ ನಿರಾಶೆಗಳ ಮೇಲೆ ನಿರಾಶೆ ಬಂದು ನಮ್ಮ ಪಾಲಿನ ಮರೆಯಲಾಗದ ದಿನಗಳು 2021 ಮೇ 5 ಘಟನೆ ನಡೆದು ಹೋಯಿತು ಅದು ಕೋರೋನಾ ಸಮಯ ಆಸ್ಪತ್ರೆಗೆ ಹೋದ ಸಹೋದರ ಪ್ರಶಾಂತ ಪಾಟೀಲರು ಜೀವಂತವಾಗಿ ಬರಲಿಲ್ಲ, ಕಷ್ಟಗಳ ದಿನಗಳು ಪ್ರಾರಂಭವಾಯಿತು,ಬಿಟ್ಟು ಹೋದ ಸಹೋದರನ ಚಿಂತೆಯಲ್ಲಿ ಬೆಂದು ಹೋಗುತ್ತಿದ್ದೇವೆ, ಪ್ರತಿಕ್ಷಣ ಮರೆಯಲಿಕ್ಕೆ ಸಾಧ್ಯವೇ? ಆ ಘಟನೆಗಳು ಇಂದಿಗೂ ನಡೆದಾಡುವ ಆ ಹೆಜ್ಜೆಗಳು ನೆನಪುಗಳು ಕಾಡುತ್ತಿವೆ.ಸದಾ ಕಾಲ ಇಂದಿಗೂ ಮರೆಯಲಾಗದ ಆ ದಿನಗಳು…
ಪ್ರಶಾಂತ ಪಾಟೀಲರ ಪುಸ್ತಕದಿಂದ ಆಯ್ದ ಚುಟುಕುಗಳು
ಅರಗಿಣಿ..
ಓ ನನ್ನ ಅರಗಿಣಿ
ನನ್ನ ಬಾಳು ಬೆಳಗು ನೀ.
ಓಲೆ…
ನೀರಿಷಿಸಿದ್ದೆ
ನಿನ್ನ
ಪ್ರೇಮ ಓಲೆ
ಕಡೆಗೂ ಬಂತು
ನಿನ್ನ
ಮದುವೆಯ
ಕರೆಯೋಲೆ.
ಒಲವೇ…
ಬೀಜ ಸಸಿಯಾತು
ಸಸಿ ಮರವಾಯಿತು
ಮರಹು ಬಿಟ್ಟಿತು
ಹೂ ಮೊಗ್ಗಾಯಿತು
ಕಾಯಿ ಹಣ್ಣಾಯಿತು
ಆದರೆ ನಿನ್ನ ಕಲ್ಲು ಹೃದಯ ಮಾತ್ರ ಕಲ್ಲಾಗಿಯೇ ಉಳಿಯಿತು.
ಪ್ರೀತಿ…
ಪ್ರೀತಿ ಎಂಬ ಎರಡಕ್ಷರಗಳಲ್ಲಿ
ತುಂಬಿದೆ,ಹೃದಯ ಹೃದಯಗಳ ಸಂಬಂಧ
ಭಾವ ಭಾವಗಳ ಅನುಬಂಧ
ಬೇಧ ಬೇಧಗಳ ಸಮಾಗಮ
ಕಾವ್ಯ ಕರುಣೆ ಆಶೆಗಳ ಸಮ್ಮೇಳನ,
ಸಾಹಿತ್ಯದ ಬಗ್ಗೆ ಅಭಿಮಾನ ಜೊತೆ ಪ್ರೀತಿಯ ಕನಸುಗಾರ ಪ್ರಶಾಂತ ಪಾಟೀಲರು ನಾಡಿ ನಾಡಿಯಲ್ಲಿ ಹರಿಯುವ ರಕ್ತದಂತೆ ಹರಿಯುವ ಸಹೋದರ ಪ್ರಶಾಂತ ಪಾಟೀಲರಿಗೆ ಸವಿನೆನಪುಗಳೊಂದಿಗೆ “”
ಲೇಖಕರು ದಯಾನಂದ ಪಾಟೀಲ,ಭಾರತೀಯ ಕನ್ನಡ ಸಾಹಿತ್ಯ ಬಳಗ,ಮಹಾರಾಷ್ಟ್ರ