ನಿನ್ನೆ ಬೆಳಗ್ಗೆ೧೦:೦೦ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ) ವತಿಯಿಂದ.ಯಾದಗಿರಿ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು (ಆರ್.ಟಿ.ಓ) ಕಚೇರಿಗೆ ಬರುವ ಡೈವಿಂಗ್ ಲೈಸೆನ್ಸ್ ಗಾಗಿ ಜನರ ಹತ್ತಿರ ಹಣ ಲೂಟಿ ಮಾಡಲಾಗುತ್ತಿದೆ.
ಆರ್.ಟಿ.ಓ ಕಚೇರಿಯಲ್ಲಿ ಸುಪರಿಂಟೆಂಡೆಂಟಾಗಿ ಕೆಲಸ ಮಾಡುತ್ತಿರುವ ಮೌನೇಶ ಬಂದ ಜನರಿಗೆ ಭೇಟಿಯಾಗದೆ ಜನರ ಕಷ್ಟಕ್ಕೆ ಸ್ಪಂದಿಸದೆ ಅವರ ಡೈವಿಂಗ್ ಲೈಸೆನ್ಸ್ ಮಾಡಿಕೊಡದೆ ಸತಾಯಿಸುತ್ತಿದ್ದಾರೆ.
ಸುಪರಿಂಟೆಂಡೆಂಟ್ ಮೌನೇಶ ಮಾಡಬೇಕಾದ ಕೆಲಸ ಅವರ ಆಪ್ತರು ರಿಯಾಜ್, ಪವನ, ನವೀನ್, ಗಫೂರ್ ಎನ್ನುವ ಈ ನಾಲ್ಕು ಜನರನ್ನು ಹಣ ಲೂಟಿ ಮಾಡುವುದ್ದಕ್ಕೆ ಇಟ್ಟುಕೊಂಡಿದ್ದಾರೆ. ಈ ನಾಲ್ಕು
ಜನ ಆರ್.ಟಿ.ಓ ಕಚೇರಿಯಲ್ಲಿ ಇವರು ಡೈವಿಂಗ್ ಲೈಸೆನ್ಸ್ ಮಾಡಿಸಿಕೊಡುವುದಕ್ಕೆ ಜನರ ಹತ್ತಿರ ೩೦೦೦ ರಿಂದ ೪೦೦೦ ಸಾವಿರ ರೂಪಾಯಿ ಪಡೆಯುತ್ತಿದ್ದಾರೆ.ಆರ್.ಟಿ.ಓ
ಕಚೇರಿಯಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವ ಒಬ್ಬ ಅಧಿಕಾರಿ ಇಲ್ಲ ಎಂದು ಹೇಳಿದರು.
ಜನರು ಈ ಅಧಿಕಾರಿಗಳ ವಿರುದ್ಧ ಸೂಕ್ತವಾದ ತನಿಖೆ ಆದೇಶವನ್ನು ಹೊರಡಿಸಬೇಕು ಎಂದು ಹೇಳಿದರು. ಸುಪರಿಂಟೆಂಡೆಂಟ್ ಮೌನೇಶ ಹಾಗೂ ಅವನ ಸಹಚರರಿಗೆ ಕೂಡಲೇ ಇಂತಹ ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ. ಭೀಮಘರ್ಜನೆ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಇದೆ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.
ಶಿವಶಂಕರ.ಹೆಚ್.ಹೊಸಮನಿ
ಜಿಲ್ಲಾ ಸಂಚಾಲಕರು
ನಾಗಣ್ಣ ಕಲ್ಲದೇವನಹಳ್ಳಿ
ರಾಜ್ಯ ಸಂ ಸಂಚಾಲಕರು
ಸದ್ದಾಂ ಹುಸೇನ್, ಮಲ್ಲಪ್ಪ ತಡಬಿಡಿ, ಮಲ್ಲಿಕಾರ್ಜುನ ತಳವಾರಗೇರಾ, ಮರೆಪ್ಪ ಬೇವಿನಾಳ, ಪರಶುರಾಮ ಹೈಯಾಳಕರ್, ರೇವಣಸಿದ್ದಪ್ಪ ಬಲಶಟ್ಟಿಹಾಳ, ಜಯರಡ್ಡಿ ಹೊಸಮನಿ, ದೇವು ಕಕ್ಕೇರಾ, ಶರಣಪ್ಪ ತೆಗ್ಗಳಿ, ಬಸವರಾಜ ಬಡಿಗೇರ, ಮಲ್ಲಿಕಾರ್ಜುನ ಜಾಲಿಬೆಂಚಿ, ಮಾನಪ್ಪ ಬಡಿಗೇರ, ಮಲ್ಲಪ್ಪ ಸಲ್ಲಾದ್ ಪುರ ಎಲ್ಲರೂ ಭಾವಿಸಿದ್ದರು.
ವರದಿ-ರಾಜಶೇಖರ ಮಾಲಿಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.