ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ವಿಕಲಚೇತನರ ಪರವಾಗಿ ಶ್ರಮಿಸಿದ ಸಮಾಜ ಸೇವಕ ಡಾ.ಕೆ.ಎಸ್.ರಾಜಣ್ಣ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದರು.ಕೆ.ಎಸ್.ರಾಜಣ್ಣ ಅವರು ತಮ್ಮ ಬಾಲ್ಯದಲ್ಲಿ ಪೋಲಿಯೋಗೆ ತುತ್ತಾಗಿ ಕೈಕಾಲುಗಳನ್ನು ಕಳೆದುಕೊಂಡಿದ್ದರು ಬೆಂಗಳೂರಿನವರಾದ ಡಾ.ರಾಜಣ್ಣ ಅವರು ತಮ್ಮ ದೈಹಿಕ ಮಿತಿಗಳನ್ನು ತಮ್ಮ ದೊಡ್ಡ ಪ್ರೇರಣೆಯಾಗಿ ಪರಿವರ್ತಿಸಿಕೊಂಡರು. ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾವನ್ನು ಹೊಂದಿದ್ದಾರೆ.
2002 ರ ಪ್ಯಾರಾಲಿಂಪಿಕ್ಸ್‌ನಲ್ಲಿ ರಾಜಣ್ಣ ಭಾರತಕ್ಕೆ ಡಿಸ್ಕಸ್ ಎಸೆತದಲ್ಲಿ ಚಿನ್ನ ಮತ್ತು ಈಜು ಬೆಳ್ಳಿ ಗೆದ್ದರು. ಉದ್ಯಮಿಯೂ ಆಗಿರುವ ಅವರು ಮತ್ತು 350 ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದ್ದಾರೆ,ಅವರಲ್ಲಿ ಅನೇಕರು ವಿಕಲಾಂಗ ವ್ಯಕ್ತಿಗಳು.
2013 ರಲ್ಲಿ ರಾಜಣ್ಣ ಮೊದಲ ಅಂಗವಿಕಲ ಕರ್ನಾಟಕ ರಾಜ್ಯ ವಿಕಲಚೇತನರ ಆಯುಕ್ತರಾದರು.
ಶ್ರೀಯುತ ಕೆ ಎಸ್ ರಾಜಣ್ಣ ಅವರು ವಿಕಲಚೇತನರ ರಾಜ್ಯ ಆಯುಕ್ತರಾಗಿದ್ದ ಅವಧಿಯಲ್ಲಿ ಶಿವಮೊಗ್ಗದ ಭಾರತೀಯ ಅಂಗವಿಕಲರ ಸಬಲೀಕರಣ ಸಂಘ ಇದರ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ವಿಕಲಚೇತನರ ವಿವಿಧ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದಿದ್ದರು.
ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಶ್ರೀ ಕೆ.ಎಸ್.ರಾಜಣ್ಣ ಅವರನ್ನು ಈ ಸುಸಂದರ್ಭದಲ್ಲಿ ಸಮಸ್ತ ವಿಕಲಚೇತನರ ಪರವಾಗಿ ಅಭಿನಂದಿಸುತ್ತೇವೆ ಎಂದು ಶ್ರೀ ಕೊಡಕ್ಕಲ್ ಶಿವಪ್ರಸಾದ್ ತಿಳಿಸಿದ್ದಾರೆ.