ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ವೀರಶೈವರಿಗೆ ಜಾತಿ ಭೇದ ಇಲ್ಲ ಸರ್ವರ ಏಳಿಗೆ ಬಯಸುವವರೇ ವೀರಶೈವರು:ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ದಾವಣಗೆರೆ/ನ್ಯಾಮತಿ:ಶ್ರೀ ಬಸವೇಶ್ವರ ಸ್ವಾಮಿ ಸೇವಾ ಸಮಿತಿಯ ವತಿಯಿಂದ ತಾಲ್ಲೂಕಿನ ಚೀಲೂರು ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಇಷ್ಟಲಿಂಗ ಪೂಜೆ-ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ವೃತ್ತಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಜಾತಿ ಮಾಡಿಕೊಂಡಿದ್ದೇವೆ.ವೀರಶೈವ ಎಂದರೆ ಪ್ರತಿ ದಿನ ಇಷ್ಟಲಿಂಗ ಪೂಜಿಸುವವರು ಎಂಬ ಅರ್ಥ ಇದೆ. ಎಲ್ಲರನ್ನೂ ಗೌರವಿಸುವುದು,ಎಲ್ಲರೊಂದಿಗೆ ಪ್ರೀತಿಯಿಂದ ಜೀವಿಸುವುದು ಧರ್ಮವಾಗಿದೆ. ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವ ದಾರಿಯಲ್ಲಿ ಸಾಗುವುದೇ ನೈಜ ಧರ್ಮ.ಆದ್ದರಿಂದ,ಎಲ್ಲರೂ ಧರ್ಮ ಮಾರ್ಗದಲ್ಲಿ ನಡೆದು ಉತ್ತಮ ಬದುಕು ಸಾಗಿಸಬೇಕು. ಸಮಾಜದಲ್ಲಿ ಎಲ್ಲರೊಂದಿಗೆ ಸಹಬಾಳ್ವೆ ನಡೆಸಬೇಕು. ‘ವೀರಶೈವ ಲಿಂಗಾಯತರೇ ನಾವೆಲ್ಲ ಒಂದು,ವಿಶ್ವವೇ ನಮ್ಮ ಬಂಧು’ ಎಂಬ ವಿಶಾಲ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಆಸ್ತಿಕತೆ-ನಾಸ್ತಿಕತೆ ಬಗ್ಗೆ ಪ್ರಾಚೀನ ಕಾಲದಿಂದಲೂ ವಾದ ವಿವಾದಗಳು ನಡೆದುಕೊಂಡು ಬಂದಿವೆ.ಆದರೆ, ದೇವರ ಅಸ್ತಿತ್ವ ಅನನ್ಯ,ಅನುಪಮ,ದೇವರನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ.ನಮ್ಮ ದೇಹದಲ್ಲಿ ಪಂಚಭೂತಗಳ ಅಂಶಗಳು ಇವೆ.ದೇವರು ಇದ್ದಾನೆ ಎಂಬುದಕ್ಕೆ ನಮ್ಮ ಅಸ್ತಿತ್ವವೇ ಸಾಕ್ಷಿ ಎಂದು ಪ್ರತಿಪಾದಿಸಿದರು.

ಕೊಠಡಿಗಳ ನಿರ್ಮಾಣಕ್ಕೆ ಕ್ರಮ:ಶ್ರೀಶೈಲ ಪೀಠಕ್ಕೆ

ಆಗಮಿಸುವ ಭಕ್ತರಿಗೆ ಕೊಠಡಿಗಳ ಕೊರತೆಯಿಂದಾಗಿ ಸಮಸ್ಯೆಯಾಗುತ್ತಿದೆ.ಇದನ್ನು ಮನಗಂಡು ಆಂಧ್ರಪ್ರದೇಶ ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸಿ,10 ಎಕರೆ ಜಾಗವನ್ನು ಪಡೆದುಕೊಳ್ಳಲಾಗಿದೆ.ಆ ಪೈಕಿ 5 ಎಕರೆ ಪ್ರದೇಶದಲ್ಲಿ ಗೋಶಾಲೆ,ಐಸಿಎಸ್‌ಇ ಶಿಕ್ಷಣ ಸಂಸ್ಥೆ,ಕಂಬಿ ಮಂಟಪ,ಆಸ್ಪತ್ರೆ ಹಾಗೂ 500 ಕೊಠಡಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.ಈಗಾಗಲೇ ಭಕ್ತರು 300 ಕೊಠಡಿಗಳ ನಿರ್ಮಾಣಕ್ಕೆ ಹಣ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ ಇತರೆ ಕಾರ್ಯಗಳಿಗೂ ಭಕ್ತರು ದಾನ ನೀಡಬಹುದು ಎಂದು ತಿಳಿಸಿದರು.
ಮುಂದಿನ ವರ್ಷ ಶ್ರೀಶೈಲ ಪಾದಯಾತ್ರೆ ಸಂದರ್ಭದಲ್ಲಿ ಹೊನ್ನಾಳಿಯಿಂದ ಶ್ರೀಶೈಲ ಪೀಠಕ್ಕೆ ಶ್ರೀ ಜಡೆಯ ಶಂಕರ ಮಹಾಸ್ವಾಮಿಗಳು ಮತ್ತು ಶ್ರೀ ಚನ್ನಪ್ಪ ಸ್ವಾಮಿಗಳ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ತರುವ ಸಂಕಲ್ಪವನ್ನು ಹಿರೇಕಲ್ಮಠದ ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾಡಿದ್ದಾರೆ.ಈ ಮಹತ್ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿ.ಶ್ರೀಶೈಲಕ್ಕೆ ಪಾದಯಾತ್ರೆ ಬನ್ನಿ ಎಂದು ಭಕ್ತರಿಗೆ ನುಡಿದರು.
ಹೊನ್ನಾಳಿ ಹಿರೇಕಲ್ಮಠದ ಒಡೆಯ‌ರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ,ಮನುಷ್ಯನಿಗೆ ಆಯುಷ್ಯ,ಕೀರ್ತಿ, ಯಶೋಬಲ ಸೇರಿದಂತೆ ಸಕಲವೂ ಗುರುಗಳ ಸೇವೆಯಿಂದ ಲಭಿಸುತ್ತದೆ.ಆದ್ದರಿಂದ ಎಲ್ಲರೂ ಸೇವಾ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಪಾವನರಾಗಬೇಕು ಎಂದು ತಿಳಿಸಿದರು.
ಪಾದಯಾತ್ರೆಯಿಂದ ಮನುಷ್ಯನ ಆರೋಗ್ಯ ವರ್ಧಿಸುತ್ತದೆ.ರಕ್ತದೊತ್ತಡ,ಸಕ್ಕರೆ ಕಾಯಿಲೆ,ಹೃದಯ ಸಂಬಂಧಿ ರೋಗಗಳು ಸೇರಿದಂತೆ ಅನೇಕ ವ್ಯಾಧಿಗಳನ್ನು ಇಲ್ಲವಾಗಿಸಬಹುದು.ಆದ್ದರಿಂದ, ಎಲ್ಲರೂ ಪಾದಯಾತ್ರೆ ಮಾಡಬೇಕು. ಹೊನ್ನಾಳಿಯಿಂದ ಶ್ರೀಶೈಲ ಪೀಠಕ್ಕೆ ನಾವು ಕಳೆದ ಎಂಟು ವರ್ಷಗಳಿಂದ ಪಾದಯಾತ್ರೆ ಮಾಡುತ್ತಿದ್ದೇವೆ. ಮುಂದಿನ ವರ್ಷ 9ನೇ ವರ್ಷದ ಪಾದಯಾತ್ರೆ ನಡೆಸುತ್ತೇವೆ. ಅದರಲ್ಲಿ ಹೊನ್ನಾಳಿಯಿಂದ 1008 ಜನರು ಪಾಲ್ಗೊಳ್ಳಬೇಕು.ಈ ಹಿಂದೆ ಶ್ರೀಶೈಲ ಪೀಠದಿಂದ ಹೊನ್ನಾಳಿಗೆ ಪಾದಯಾತ್ರೆ ಮೂಲಕ ಆಗಮಿಸಿದ್ದ ಜಗದ್ಗುರು ಜಡೆಯ ಶಂಕರರು ಹೊನ್ನಾಳಿ ಭಾಗವನ್ನು ಧಾರ್ಮಿಕ ಕೇಂದ್ರವನ್ನಾಗಿಸಿ ಜಾಗೃತಿ ಮೂಡಿಸಿದ್ದರು.ಅದರ ಸ್ಮರಣಾರ್ಥ ಹೊನ್ನಾಳಿಯಿಂದ ಶ್ರೀಶೈಲ ಪೀಠಕ್ಕೆ ಶ್ರೀ ಜಡೆಯ ಶಂಕರ ಮಹಾಸ್ವಾಮಿಗಳು ಮತ್ತು ಶ್ರೀ ಚನ್ನಪ್ಪ ಸ್ವಾಮಿಗಳ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ತೆರಳುವ ಸಂಕಲ್ಪ ಮಾಡಲಾಗಿದೆ.ಎಲ್ಲರೂ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ರಾಂಪುರ ಬೃಹನ್ಮಠದ ಶ್ರೀ ಶಿವಕುಮಾರ ಶಿವಾಚಾರ್ಯ ಹಾಲಸ್ವಾಮೀಜಿ,ಗೋವಿನಕೋವಿ ಹಾಲಸ್ವಾಮಿ ಮಠದ ಶ್ರೀ ಶಿವಯೋಗಿ ಮಹಾಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷರಾದ ಹೆಚ್‌.ಎ.ಉಮಾಪತಿ,ಚೀಲೂರು ಮುಖಂಡರಾದ ಯತೀಶ್‌ಚಂದ್ರ ಕೋರಿ,ಚೇತನ್ ಹುಲಿಕೆರೆ,ಗಿರೀಶ್ ಹುಲಿಕೆರೆ,ಜವಳಿ ಪ್ರದೀಪ್,ಜವಳಿ ಚಂದ್ರಶೇಖರ್,ಜವಳಿ ಮಹೇಶ್,ಕೆ.ಶಿವಲಿಂಗಪ್ಪ,ಕೆ.ಮಲ್ಲಿಕಾರ್ಜುನ್,ಜವಳಿ ವೀರೇಶ್‌ ಇತರರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ