ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸುಕ್ಷೇತ್ರ ಬಂಡಿ ಗ್ರಾಮದಲ್ಲಿ ಶ್ರೀ ತ್ರಿವಿಧ ದಾಸೋಹ ಮೂರ್ತಿ ಶ್ರೀ ಶರಣಬಸವೇಶ್ವರರ 15ನೇ ವರ್ಷದ ರಥೋತ್ಸವ, ಕುಂಭೋತ್ಸವ,ಸಾಮೂಹಿಕ ಕಲ್ಯಾಣೋತ್ಸವ ಹಾಗೂ ಜಂಗಮ ವಟುಗಳಿಗೆ ದೀಕ್ಷ ಕಾರ್ಯಕ್ರಮ ಜರುಗಿತು. ಮಂಗಳೂರಿನ ಸಿದ್ದಲಿಂಗ ಸ್ವಾಮೀಜಿ,ಹಾಲಕೇರಿಯ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ ಹಾಗೂ ಹರಗುರು ಚರಮೂರ್ತಿಗಳ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಪುರಾಣ ಪ್ರವಚನಕಾರ ಪ್ರಕಾಶಯ್ಯ ಶಾಸ್ತ್ರಿ,ಸಂಗೀತ ಬಳಗದ ಮಂಗಳೇಶ ಶ್ಯಾಗೋಟಿ,ಶರಣಕುಮಾರ ಬಂಡಿ ಅವರು ಸೇವೆ ಸಲ್ಲಿಸಿದರು.ನಾಗರಸಕೊಪ್ಪದ ಗ್ರಾಮದವರಿಂದ ಮಾದಮ್ಮ ತಾಯಿಯ ಮೂರ್ತಿಯ ಸೇವೆ,ಬಂಡಿ ಗ್ರಾಮದ ಭಕ್ತರು ರಥೋತ್ಸವ ಕ್ಕೆ ಕಳಸ ಮತ್ತು ಶ್ರೀ ಶರಣರ ಉತ್ಸವ ಮೂರ್ತಿಯ ಸೇವೆ, ಹಿರೇನಂದಿಹಾಳ ಗ್ರಾಮದವರಿಂದ ತೇರಿನ ಹಗ್ಗದ ಸೇವೆ,ಜೂಲಕಟ್ಟಿ ಗ್ರಾಮದ ಭಕ್ತರಿಂದ ಬಾಳೆ ಕಂಬದ ಸೇವೆ,ಡೊಣ್ಣೆ ಗುಡ್ಡದ ಗುರು ಹಿರಿಯರಿಂದ ರಥೋತ್ಸವಕ್ಕೆ ಮಾಲೆಯ ಸೇವೆ ಹಾಗು ಕಡಬಲಕಟ್ಟಿ ಗ್ರಾಮದವರಿಂದ ಶ್ರೀ ಬಸವೇಶ್ವರ ಪಲ್ಲಕ್ಕಿ ಸೇವೆ ಮತ್ತು ಡೊಳ್ಳು,ಕರಡಿ ಮಜಲು ಸಕಲ ವಾದ್ಯಗಳೊಂದಿಗೆ ಜಾತ್ರೆ ಅದ್ದೂರಿಯಾಗಿ ಜರುಗಿತು.ಶ್ರೀ ಶರಣಬಸವೇಶ್ವರ ಜಾತ್ರೋತ್ಸವ ಸಮಿತಿ,ಗ್ರಾಮದ ಗುರುಹಿರಿಯರು,ಮಹಿಳೆಯರು ಸುತ್ತಮುತ್ತಲಿನ ಅಪಾರ ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.