ಸಿರುಗುಪ್ಪ: ನ: 23: ನೈಸರ್ಗಿಕ ಸಂಪತ್ತು ಹಾಗೂ ಪರಿಸರ ಸಂರಕ್ಷಣೆ ಸೇವಾ ಟ್ರಸ್ಟಿನವರು ತಾಲೂಕಿನ ದೇಶನೂರು ಗ್ರಾಮದಲ್ಲಿ ಪರಿಸರ ಜಾಗೃತಿ ಅಭಿಯಾನ ನಡೆಸಿದರು
ಸೇವಾ ಟ್ರಸ್ಟಿನವರು ಕಳೆದ ತಿಂಗಳಿನಿಂದ ಈ ಪರಿಸರ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು ತಾಲೂಕಿನ ಅನೇಕ ಕಡೆಗಳಲ್ಲಿ ಅಭಿಯಾನ ಮಾಡುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ತಾಲೂಕಿನ ದ್ವೀಪ ಗ್ರಾಮ ದೇಶನೂರಿನಲ್ಲಿ ಬುಧವಾರ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು
ಗ್ರಾಮ ಪಂಚಾಯಿತಿ ಕಚೇರಿಯಿಂದ ಶಾಲಾ ಮಕ್ಕಳೊಂದಿಗೆ ಪರಿಸರ ಜಾಗೃತಿ ಅಭಿಯಾನ ಪ್ರಾರಂಭಿಸ ಲಾಯಿತು. ಶಾಲಾ ಮಕ್ಕಳೊಂದಿಗೆ ಗ್ರಾಮದ ಅನೇಕ ವಿಭಾಗಗಳಿಗೆ ತೆರಳಿ ಎಲ್ಲರಿಗೂ ಪರಿಸರದ ಬಗ್ಗೆ ಜಾಗೃತಿ ತಿಳಿಸಿದರು. ಶಾಲಾ ಮಕ್ಕಳು ಪರಿಸರ ಕುರಿತಾದ ಅನೇಕ ಘೋಷಣೆಗಳನ್ನು ಹಾಕಿದರು
ಗ್ರಾಮದ ಮುಖ್ಯರಸ್ತೆ ಹಾಗೂ ವೃತ್ತಗಳು ಹಾಗೂ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ಉತ್ತಮ ಪರಿಸರ ಕಾಪಾಡಿಕೊಳ್ಳುವ ಬಗ್ಗೆ ವಿವರವಾಗಿ ತಿಳಿಸಲಾಯಿತು. ಶಾಲಾ ಮಕ್ಕಳು ಅತ್ಯಂತ ಶಿಸ್ತಿನಿಂದ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಜಾಗೃತಿ ಮೂಡಿಸಿದರು
ಈ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಣಿ ಅನ್ನಪೂರ್ಣ ಗ್ರಾ.ಪಂ. ಸದಸ್ಯ ವೀರೇಶ, ಟ್ರಸ್ಟಿನ ಅಧ್ಯಕ್ಷ ಸಿರಿಗೇರಿ ಮಂಜು, ಕಾರ್ಯದರ್ಶಿ ರವಿಕುಮಾರ್, ಯವ ಮುಖಂಡ ಶಿವರಾಜ್ ಹೆಚ್, ದೇವೇಂದ್ರ, ದುರುಗಪ್ಪ, ರಾಘವೇಂದ್ರ ಹಾಗೂ ತೆಲುಗರ ಈರಪ್ಪ ಸೇರಿದಂತೆ ಪಾಲ್ಗೊಂಡಿದ್ದರು