ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ತಾಲೂಕಿನಲ್ಲಿಯೇ ಅತ್ಯಂತ ದೊಡ್ಡ ಹೋಬಳಿಯಗಿದ್ದು ನಾಡಕಛೇರಿಗೆ ದಿನಾಲೂ ರೈತರೂ ಸೇರಿದಂತೆ ವಿದ್ಯಾರ್ಥಿಗಳು ಸಾರ್ವಜನಿಕರು ಅಲೆದಾಡಿದರೂ ಇಲ್ಲಿನ ನಾಡ ತಹಸೀಲ್ದಾರ್ ಸಾಹೇಬ್ರು ಮಾತ್ರ ಯಾರ ಕೈಗೂ ಸಿಗುತ್ತಿಲ್ಲ ಪ್ರಸ್ತುತ ಸಮಯ ವಿದ್ಯಾರ್ಥಿಗಳಿಗೆ ಅವಶ್ಯಕತೆ ಇರುವ ಜಾತಿ ಪ್ರಮಾಣ ಪತ್ರ 371 ಪತ್ರದ ಅವಶ್ಯಕತೆ ಇರುವುದು ಅವರಿಗೆ ಗೊತ್ತಿದ್ದರೂ ಕೇಂದ್ರ ಸ್ಥಾನದಲ್ಲಿ ಇದ್ದು ಸಾರ್ವಜನಿಕ ಸೇವೆ ಮಾಡಬೇಕಾದ ಅಧಿಕಾರಿಗಳು ಮಾತ್ರ ಮಂಗಮಾಯ ಆಗಿರುವುದರಿಂದ ರೈತರು ವಿದ್ಯಾರ್ಥಿಗಳು ಅಧಿಕಾರಿಗಳಿಗೆ ಹಿಡಿ ಶಾಪಹಾಕುವಂತಾಗಿದೆ ಮೇಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ನಾಡ ಕಚೇರಿಯಲ್ಲಿ ಅಧಿಕಾರಿಗಳು ಪ್ರತಿದಿನವೂ ಸಾರ್ವಜನಿಕರಿಗೆ ಸಹಕರಿಸಲು ತಾಕೀತು ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
✍️ಶರಣು ಹುಣಸಗಿ