ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕು ಜಾಗತಿಕ ಲಿಂಗಾಯತ ಮಹಾಸಭಾ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಯನ್ನು ಉದ್ದೇಶಿಸಿ ಜಾಗತಿಕ ಲಿಂಗಾಯತ ಮಹಾಸಭಾದ ಗೌರವಾಧ್ಯಕ್ಷರಾದ ನರಸಿಂಹರಾಜಪುರದ ಬಸವಕೇಂದ್ರದ ಬಸವಯೋಗಿಪ್ರಭುಗಳು ಆಶೀರ್ವಚನ ನೀಡಿದರು.
ಬಸವಣ್ಣನವರಾಗಲಿ ಅವರ ವಚನಗಳಾಗಲಿ ಒಂದು ದೇಶಕ್ಕೆ ಒಂದು ಕಾಲಘಟ್ಟಕ್ಕೆ ಒಂದು ಜಾತಿಗೆ ಸೀಮಿತವಲ್ಲ.ಬಸವಣ್ಣನವರು ಕಾಲತೀತ ದೇಶಾತೀತ ಅವರು ವಿಶ್ವಗುರು ಜಗಜ್ಯೋತಿ ಎಲ್ಲರೂ ಬಸವ ತತ್ವದಂತೆ ನಡೆದರೆ ವಿಶ್ವದ ಸಮಸ್ಯೆಗಳನ್ನು ಬಗೆಹರಿಸಬಹುದು ಎಲ್ಲಾ ವರ್ಗದ ಕಾಯಕ ಜೀವಿಗಳನ್ನು ಅಪ್ಪಿಕೊಂಡು ಎಲ್ಲಾ ಕಾಯಕಕ್ಕೂ ಸಮಾನತೆ ಕೊಟ್ಟ ಮಹಾನುಭಾವ ಪುರುಷರಿಗೆ ಸಮಾನವಾಗಿ ಮಹಿಳೆಯರಿಗೂ ಇಷ್ಟಲಿಂಗವನ್ನು ಕೊಡುವುದರ ಮೂಲಕ ಅನುಭವ ಮಂಟಪದಲ್ಲಿ
ಸಮಾನತೆ ನೀಡಿದರು.ಬಸವಣ್ಣನ ನೆನೆವುದೆ ಪರಮತತ್ವ ಬಸವಣ್ಣನ ನೆನೆವುದೆ ಮಹದನುಭಾವ
ಬಸವಣ್ಣನ ನೆನೆದು ಸಮಸ್ತ ಗಣಂಗಳೆಲ್ಲರೂ ಅತಿಶುದ್ಧರಾದರು ಎಂದು ಮಡಿವಾಳ ಮಾಚಿದೇವ ಹೇಳುತ್ತಾರೆ.ಭ್ರಷ್ಟಾಚಾರ ಮೂಢನಂಬಿಕೆ ಕಂದಾಚಾರ ಅಸಮಾನತೆ ದ್ವೇಷದಿಂದ ತುಂಬಿಕೊಂಡಿರುವ ಜಗತ್ತನ್ನು ಬಸವಾದಿ ಶರಣರ ವಚನಗಳಿಂದ ಮಾತ್ರ ಶುದ್ಧೀಕರಣ ಮಾಡಲು ಸಾಧ್ಯವಿದೆ.ಬಸವಣ್ಣನವರು ನೀಡಿದ ಇಷ್ಟಲಿಂಗ ಜಗದಗಲ ಮುಗಿಲಗಲ ಮಿಗೆಯಗಲ
ನಿಮ್ಮಗಲ ಪಾತಾಳದಿಂತ್ತತ್ತ
ಬ್ರಹ್ಮಾಂಡದಿಂತ್ತತ್ತ ಆಗಮ್ಯ ಆಗೋಚರ ಅಗಮ್ಯ ಆಗೋಚರ ಶರಣರ ಕರಸ್ಥಲದಲ್ಲಿ ಚುಳುಕಾದ ಚೇತನವಾಗಿದೆ ಎಂದರು.
ಸಾನಿಧ್ಯವಹಿಸಿದ್ದ ಮದ್ಗರ್
ಲಿಂಗಯ್ಯನ ಹುಂಡಿಯ ವಿರಕ್ತ ಮಠದ ಗೌರಿಶಂಕರ ಸ್ವಾಮೀಜಿ ಮಾತನಾಡಿ ಲಿಂಗಾಯತ ಧರ್ಮದಲ್ಲಿ ದಾನವಿಲ್ಲ ದಾಸೋಹವಿದೆ
ಹೋಮ ಹವನ ಅನ್ಯದೇವರ ಪೂಜೆಯನ್ನು ಲಿಂಗವಂತರು ಮಾಡಬಾರದು.ಇಷ್ಟಲಿಂಗವನ್ನು ಕಣ್ತೆರೆದು ನೋಡುವುದರ ಮೂಲಕ
ಧ್ಯಾನಿಸಬೇಕು ಎಂದರು.ಬಸವಣ್ಣನವರೇ ಲಿಂಗಾಯತ ಧರ್ಮದ ಗುರು ವಚಗಳೇ ನಮ್ಮ ಧರ್ಮದ ಗ್ರಂಥ ಎಂದು ಹೇಳಿದರು.ತಾಲೂಕು ಜಾಗತಿಕ ಮಹಾಸಭಾದ ಅಧಕ್ಷ ಟಿ.ಎಂ.ರವಿ ಮಾತನಾಡಿದರು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಮಹದೇವಪ್ಪ ಸೇತುವೆ ಮಠದ ಸಹಜಾನಂದ ಸ್ವಾಮಿಗಳು
ಬಿಲಿಗೆರೆಹುಂಡಿ ಗುರು ಮಲ್ಲೇಶ್ವರ ಮಠದ ಗುರುಸ್ವಾಮೀಜಿ ಚೌಹಳ್ಳಿ ಲಿಂಗರಾಜಪ್ಪ ನಂಜನಗೂಡು ನಂಜಪ್ಪ ಗುರುಸಿದ್ದಮ್ಮ ಪ್ರಧಾನ ಕಾರ್ಯದರ್ಶಿ ಬಸವಣ್ಣ ಸದಸ್ಯರು ಪದಾಧಿಕಾರಿಗಳು ಹೆಳವರಹುಂಡಿ ಬಸವೇಶ್ವರ ಭಜನಾ ಬಳಗ
ಬಸವ ಭಕ್ತರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.