ಹನೂರು:ಶಾಸಕ ಎಂಆರ್ ಮಂಜುನಾಥ್ ರವರು ಲೊಕ್ಕನಹಳ್ಳಿ ಗ್ರಾಮ ನುಡುಕೇರಿ ಮಾರಿಯಮ್ಮ ದೇವರ ದರ್ಶನ ಮಾಡಿ ಗ್ರಾಮದ ಪ್ರತಿಯೊಂದು ಸಮುದಾಯದ ಮುಖಂಡರ ಮನೆ ಮನೆಗಳಿಗೆ ಹೋಗಿ ಹಬ್ಬದ ಶುಭಾಶಯಗಳು ತಿಳಿಸಿ ನಂತರ ಮಾತನಾಡಿ ಭಗವಂತನ ಸಕಲ ಜೀವರಾಶಿಗಳಿಗೂ ಒಳಿತು ಮಾಡಲಿ ಉತ್ತಮ ಮಳೆ ಬೆಳೆಯಾಗಿ ರೈತರ ಸಂತೋಷದಿಂದ ಇರಲಿ ಎಂದು ನಡುಕೇರಿ ಮಾರಮ್ಮನಲ್ಲಿ ಪ್ರಾರ್ಥಿಸಿಕೊಂಡರು
ಗ್ರಾಮದ ಉಪ್ಪಾರ,ಮಡಿವಾಳ,ಕುರುಬ,ಬೆಳ್ಳಳಗೌಂಡರ್, ದಲಿತ ಹಾಗೂ ಇನ್ನಿತರ ಸಮುದಾಯದ ಮುಖಂಡರು ಶಾಸಕ ಎಂ ಆರ್ ಮಂಜುನಾಥ್ ರವರಿಗೆ ಹೂಹಾರ ಹಾಕಿ ಸನ್ಮಾನಿಸಿ,ಪಾನಕ ಮಜ್ಜಿಗೆ ಊಟ ಮಾಡಿಸಿ ಪ್ರೀತಿ ವಿಶ್ವಾಸದಿಂದ ಮಾತನಾಡಿಸಿ ಶಾಸಕರಿಗೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ದೊಡ್ಡಿಂದುವಾಡಿ ಗ್ರಾಮದ ರಮ್ಯ ಎಂಬುವರು ಲೋಕನಹಳ್ಳಿ ಗ್ರಾಮದ ನಡುಕೇರಿ ಮಾರಿಯಮ್ಮ ಹಬ್ಬಕ್ಕೆ ಅಜ್ಜಿ ಮನೆಗೆ ಬಂದಿದ್ದರು ಅದೇ ಸಂದರ್ಭದಲ್ಲಿ ಶಾಸಕ ಎಂಆರ್ ಮಂಜುನಾಥ್ ರವರು ಹಬ್ಬದ ಶುಭಾಶಯ ಕೋರಕ್ಕೆ ಅಜ್ಜಿ ಮನೆಗೆ ಬಂದ ಸಂದರ್ಭದಲ್ಲಿ ರಮ್ಯ ಶಾಸಕ ಎಂಆರ್ ಮಂಜುನಾಥ್ ರವರಲ್ಲಿ ಮನವಿ ಮಾಡಿಕೊಂಡು ನಮ್ಮ ದೊಡ್ಡಿಂದ್ವಾಡಿ ಗ್ರಾಮಕ್ಕೆ ಕರ್ನಾಟಕ ಸಾರಿಗೆ ಬಸ್ಸು ಗ್ರಾಮದ ಒಳಗಡೆ ಬರುತ್ತಿಲ್ಲ ನಮ್ಮ ವಿದ್ಯಾರ್ಥಿಗಳಿಗೆ ಕೊಳ್ಳೇಗಾಲ ಮೈಸೂರು ಕಡೆಗೆ ಹೋಗಲಿಕ್ಕೆ ತುಂಬಾ ತೊಂದರೆ ಆಗುತ್ತಿದೆ ಸರ್ ಅದರಿಂದ ದಯಮಾಡಿ ನಮ್ಮ ಗ್ರಾಮಕ್ಕೆ ಸಾರಿಗೆ ಬಸ್ಸು ಬರಲಿಕ್ಕೆ ಅನುಕೂಲ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು ಮನವಿಗೆ ಸ್ಪಂದಿಸಿ ಶಾಸಕ ಎಂ ಆರ್ ಮಂಜುನಾಥ್ ರವರು ಕೆ ಎಸ್ ಆರ್ ಟಿ ಸಿ ಅಧಿಕಾರಿಗಳ ಜೊತೆ ಮಾತನಾಡಿ ಸಾರಿಗೆ ಬಸ್ಸು ಗ್ರಾಮದೊಳಗೆ ಬರಲಿಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು
ಲೋಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗೇಶ್. ಗ್ರಾಮದ ಮುಖಂಡರಾದ ರಂಗಸ್ವಾಮಿ. ರವಿ.ಚಿನ್ನಸ್ವಾಮಿ. ಪರಶಿವ. ಮಹಾದೇವ. ಅರುಣ್ ಸ್ವಾಮಿ ಡಿಕೆ ರಾಜು. ಪುಟ್ಟ ಮಾದ ಶೆಟ್ಟಿ. ಚಿಕ್ಕರಾಜ್. ಹಾಗೂ ಇನ್ನಿತರ ಹಾಜರಿದ್ದರು
ನಂತರ ಚಿಕ್ಕ ಮಾಲಪುರ. ಕಣ್ಣೂರು. ಗ್ರಾಮಗಳಿಗೆ ಶಾಸಕ ಎಂಆರ್ ಮಂಜುನಾಥ್ ರವರು ವಿವಿಧ ಸಮುದಾಯದ ಮುಖಂಡರ ಮನೆಗಳಿಗೆ ಭೇಟಿ ನೀಡಿ ಮಾರಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ವರದಿ:ಉಸ್ಮಾನ್ ಖಾನ್