ಯಾದಗಿರಿ:2024-25ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಬಿ.ಎ, ಬಿ.ಕಾಂ. ಬಿಎಸ್ಸಿ,ಬಿ.ಎಸ್ ಡಬ್ಲ್ಯೂ ಪ್ರಥಮ ವರ್ಷದ ತರಗತಿಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ ಎಂದು ಯಾದಗಿರಿ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ಹರೀಶ ರಾಥೋಡ ಅವರು ತಿಳಿಸಿದ್ದಾರೆ.
ನಮ್ಮ ಕಾಲೇಜಿನಲ್ಲಿ ಅನುಭವಿ ನುರಿತ ಪ್ರಾಧ್ಯಾಪಕರಗಳಿದ್ದು,ಸುಸಜ್ಜಿತವಾದ ಕಟ್ಟಡ, ಸ್ಮಾರ್ಟ್ ತರಗತಿಗಳಿರುತ್ತವೆ ಮತ್ತು ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸಗಳು,ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ ಹಾಗೂ ನಮ್ಮ ಮಹಾವಿದ್ಯಾಲಯದಲ್ಲಿ ಸುಸಜ್ಜಿತವಾದ ಕಂಪ್ಯೂಟರ್ ಲ್ಯಾಬ್,ಗಣಕೀಕೃತ ಗ್ರಂಥಾಲಯವಿದ್ದು,ಸುಮಾರು 10 ಸಾವಿರಕ್ಕಿಂತ ಹೆಚ್ಚು ಪುಸ್ತಕಗಳಿವೆ ಮತ್ತು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು,ಎನ್ಎಸ್ಎಸ್, ಸ್ಕೌಟ್ ಮತ್ತು ಗೈಡ್ಸ್,ರೆಡ್ಕ್ರಾಸ್ ಘಟಕಗಳ ವತಿಯಿಂದ ಸಮಾಜಮುಖಿ ಕಾರ್ಯಚಟುವಟಿಕೆಗಳೊಂದಿಗೆ, ಸರ್ಕಾರದ ನಿಯಮಾನುಸಾರ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ಸೌಲಭ್ಯದೊಂದಿಗೆ ಈ ಮಹಾವಿದ್ಯಾಲಯವು ನಗರದ ಮಧ್ಯಭಾಗದಲ್ಲಿ ಸುಂದರ ಕಟ್ಟಡ ಹೊಂದಿ ಈ ಮಹಾವಿದ್ಯಾಲಯದಲ್ಲಿ ಶೇಕಡ 99 ಫಲಿತಾಂಶ ಹೊಂದಿರುತ್ತದೆ.ಇದು ವಿದ್ಯಾರ್ಥಿನಿಯರ ಸರ್ವಾಂಗೀಣ ಶೈಕ್ಷಣಿಕ ಪ್ರಗತಿಗೆ ಅನುಕೂಲಕರ ವಾತವರಣವಿರುತ್ತದೆ.ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಅತ್ಯಂತ ಹೆಚ್ಚು ನ್ಯಾಕ್ನಿಂದ ಸಿಜಿಪಿಎ 2.89 ಅಂಕದೊಂದಿಗೆ ಬಿ ಶ್ರೇಣಿ ಪಡೆದಿದೆ.
ಹೆಚ್ಚಿನ ಮಾಹಿತಿಗಾಗಿ ಕಾಲೇಜು ಪ್ರವೇಶ ಪಡೆಯಲು ಪ್ರಾಂಶುಪಾಲರು ಮೊ.ನಂ.9880652908, 7353333046,9591328654,9945456153, 9972678194,9108765206,9379379037ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ವರದಿ:ಶಿವರಾಜ ಸಾಹುಕಾರ್,ವಡಗೇರಾ