ಯಾದಗಿರಿ ಶಹಾಪುರ ತಾಲೂಕಿನ ದಂಡಾಧಿಕಾರಿಯವರು ನಾಯಕೋಡಿ ಹೆಸರಿನಲ್ಲಿ ಹಿಂದುಳಿದ ವರ್ಗದ ಜಾತಿಯ ತಳವಾರ ಜಾತಿಯವರಿಗೆ ಎಸ್ ಟಿ (ಪರಿಶಿಷ್ಟ ಪಂಗಡ) ಪ್ರಮಾಣ ಪತ್ರ ನೀಡಿ ತಾಲೂಕು ದಂಡಾಧಿಕಾರಿ ತಪ್ಪು ಮಾಡಿದ್ದಾರೆ ಅವರನ್ನು ಸೇವೆಯಿಂದ ಅಮಾನತು ಮಾಡಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ವಾಲ್ಮೀಕಿ ಸಮುದಾಯದ ಮುಖಂಡರು ಗ್ರೇಡ್ ೨ ದಂಡಾಧಿಕಾರಿ ಸೇತು ಮಾಧವ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.
ದಂಡಾಧಿಕಾರಿ ಕಚೇರಿಯ ತಾಲೂಕಿನ ಭೀಮರಾಯನ ಗುಡಿಯ ಮಂಜುನಾಥ ಬೇನಾಳ ಆರ್.ಡಿ 0039012435982 ಮತ್ತು ಕವಿತಾ ನಾಯಕೋಡಿ,ಆರ್.ಡಿ 0039012435989 ಇಬ್ಬರಿಗೆ ಹಿಂದುಳಿದ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ.ಇವರು ನಾಯಕೋಡಿ ಆಗಿದ್ದರೂ ಸಹ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ಕೊಟ್ಟಿರುವುದು ತಪ್ಪು ಈ ಜಾತಿ ಪ್ರಮಾಣ ಪತ್ರವನ್ನು ಕೂಡಲೇ ರದ್ದು ಪಡಿಸಬೇಕು ಎಂದು ವಾಲ್ಮೀಕಿ ಸಮುದಾಯ ಮುಖಂಡರು ಒತ್ತಾಯಿಸಿದ್ದರು.
ಪ್ರವರ್ಗ- ೧ ರಲ್ಲಿ ಬರುವ ಅಂಬಿಗ ತಳವಾರ ಪರಿಶಿಷ್ಟ ಜಾತಿ (ಎಸ್ ಟಿ) ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಅರ್ಜಿ ಸಲ್ಲಿಸುವ ಸಮಯದಲ್ಲಿ ನಕಲಿ ದಾಖಲೆಗಳು ಸೃಷ್ಟಿಸಿರುವುದು ಕಂಡು ಬಂದಿರುವುದು.ಈ ಬಗ್ಗೆ ಮುಂದಿನ ದಿನಗಳಲ್ಲಿ ಉನ್ನತಮಟ್ಟದ ತನಿಖಾ ತಂಡ ರಚಿಸಬೇಕು ಎಂದು ಆಗ್ರಹಿಸಿದರು.ನಿಜವಾದ ಪರಿಶಿಷ್ಟ ಜಾತಿಯವರಿಗೆ ಅನ್ಯಾಯವಾಗುತ್ತಿದೆ.ಸರ್ಕಾರಕ್ಕೆ ವಂಚನೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.ಒಂದು ವೇಳೆ ನಿರ್ಲಕ್ಷ್ಯವಹಿಸಿದರೆ ಮುಂದಿನ ದಿನಗಳಲ್ಲಿ ದಂಡಾಧಿಕಾರಿಗಳ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು ಈ ವೇಳೆ ವಾಲ್ಮೀಕಿ ಸಮಾಜದ ಮುಖಂಡರಾದ ಆರ್.ಚೆನ್ನಬಸಯ್ಯ ವನದುರ್ಗ,ನಾಗಪ್ಪ,ಕಾಶಿರಾಜ, ಗೌಡಪ್ಪಗೌಡ ಆಲ್ದಾಳ,ಶೇಖರ್ ದೊರೆ, ಮಲ್ಲಿಕಾರ್ಜುನ ಶಿರವಾಳ,ಭೀಮಣ್ಣ ಬೂದನೂರ, ಬಸಲಿಂಗಪ್ಪ ಹವಾಲ್ದಾರ್,ಅಂಭ್ರೇಶ ವಕೀಲರು, ಶರಣಪ್ಪ ವಕೀಲರು,ಬಸಪ್ಪ ಭಂಗಿ,ರಾಘವೇಂದ್ರ ಯಕ್ಷಿಂತಿ,ರಮೇಶ್ ಗಾಂಜಿ,ನಾಗರಾಜ ಹಳಿಸಗರ, ಮಾಹದೇವ ಶಾರದಹಳ್ಳಿ,ಯಂಕಣ್ಣ ಚೆನ್ನೂರ, ಮಲ್ಲಪ್ಪ ದೊಡಮನಿ,ಮಾದೇವಪ್ಪ,ಸಾಬಣ್ಣ ಶಿರವಾಳ,ಬಸಪ್ಪ ವೆಂಕಟಗಿರಿ,ವೆಂಕಟೇಶ್ ಪರಸಾಪುರ ಅನೇಕರು ಭಾಗವಹಿಸಿದ್ದರು.
ವರದಿ:ರಾಜಶೇಖರ ಮಾಲಿ ಪಾಟೀಲ್ ಶಹಾಪುರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.