ಇಂಡಿ -ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ 22ನೇ ತ್ರೈಮಾಸಿಕ ಮಹಾಧಿವೇಶನ ಪ್ರಾಥಮಿಕ ಪ್ರತಿನಿಧಿಗಳ ಚುನಾವಣೆಯು ಇಂಡಿ ಪಟ್ಟಣದ ಎಲ್. ಟಿ. ಎಂ. ಆರ. ಹೆಸ್ಕಾಂ ಕಚೇರಿಯಲ್ಲಿ ಬುಧವಾರದಂದು ಜರಗಿತು.
ಇಂಡಿ ಉಪ ವಿಭಾಗದಲ್ಲಿ 4 ಸ್ಥಾನಗಳಿಗೆ 10 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ಎರಡು ಅಭ್ಯರ್ಥಿಗಳು ನಾಮಪತ್ರವನ್ನು ಹಿಂಪಡೆದುಕೊಂಡಿದ್ದರಿಂದ 8 ಅಭ್ಯರ್ಥಿಗಳು ಕಣದಲ್ಲಿ ಉಳದಿದ್ದರು.
ಕಣದಲ್ಲಿ ಉಳಿದ ಅಭ್ಯರ್ಥಿಗಳ ಚುನಾವಣೆಯು ಮಧ್ಯಾಹ್ನ 12-00 ಗಂಟೆಯಿಂದ 4.30 ರ ವರೆಗೂ ನಡೆಯಿತು.ಇಂಡಿ ಶಹರ್ ಪೊಲೀಸ್ ಠಾಣೆಯ ಆರಕ್ಷಕ ಸಿಬ್ಬಂದಿಯವರು ಬಿಗಿ ಬಂದೋಬಸ್ತ್ ವಹಿಸಿದ್ದರು. ಸಾಯಂಕಾಲ 5:00 ಗಂಟೆಯಿಂದ ಮತ ಎಣಿಕೆ ಪ್ರಾರಂಭವಾಯಿತು. ತದನಂತರ ಚುನಾವಣಾ ಅಧಿಕಾರಿಗಳಾದ ಶ್ರೀ ಎಸ್. ಆರ. ಮೇಡೆಗಾರ್ ಎ.ಇ.ಇ ಹೆಸ್ಕಾಂ ಉಪ ವಿಭಾಗ ಇಂಡಿ ಇವರು ಚುನಾವಣಾ ಫಲಿತಾಂಶವನ್ನು ಘೋಷಣೆ ಮಾಡಿದರು.
1)ಶ್ರೀ ಪ್ರಶಾಂತ್. ವೈ .ಪಾಟೀಲ್ 122 ಮತ
2)ಶ್ರೀ ಎಸ್. ಬಿ. ಕಂಠಿಕಾರ್ 104 ಮತ
3)ಶ್ರೀ ಜಿ. ಡಿ. ಬಾಬಾನಗರ 95 ಮತ
4)ಶ್ರೀ ಸಂತೋಷ್. ಎಸ್.ಬಣಗೊಂಡೆ 95 ಮತ
ಈ ನಾಲ್ಕು ಅಭ್ಯರ್ಥಿಗಳು ಚುನಾವಣೆಯಲ್ಲಿ ವಿಜಯಶಾಲಿಯಾದರು.
ನಂತರ ಮಾತನಾಡಿದ ಶ್ರೀ ಸಿ ಎಂ ಕಾಂಬಳೆ ಅವರು ನಾಲ್ಕು ಅಭ್ಯರ್ಥಿಗಳ ಆಯ್ಕೆಯಲ್ಲಿ ನಮ್ಮ ಪ್ರಗತಿಪರ ತಂಡದ ಮೂರು ಅಭ್ಯರ್ಥಿಗಳು ಜಯಶೀಲರಾಗಿದ್ದು, ಪ್ರತ್ಯಕ್ಷವಾಗಿ, ಪರೋಕ್ಷವಾಗಿ, ಬೆಂಬಲಿಸಿದ ಎಲ್ಲ ಅಧಿಕಾರಿಗಳಿಗೂ ಹಾಗೂ ನೌಕರ ಮಿತ್ರರಿಗೂ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಪ್ರೀತಿ ,ವಿಶ್ವಾಸ ಸದಾ ಹೀಗೆ ಇರಲಿ. ನಮ್ಮ ಪ್ರಗತಿಪರ ತಂಡ ಯಾವತ್ತು ಚಿರಋಣಿಯಾಗಿರುತ್ತದೆ ಎಂದು ಹೇಳಿದರು.
ವರದಿ – ಕರುನಾಡ ಕಂದ