ಕಲಬುರಗಿ:ಪದವಿ ಮತದಾರನಿಗೆ ಒಂದು ನಿಮಿಷ/ಆದರೆ ಎಂ.ಎಲ್.ಸಿ.ಗೆ ಆರು ವರ್ಷ ಬಹಳ ಎಚ್ಚರಿಕೆಯಿಂದ ಮತ ಚಲಾಯಿಸಿರಿ,ಪದವಿಧರರ ಕಷ್ಟಗಳಿಗೆ ಸ್ಪಂದಿಸುವ ಗುಣ ಹೊಂದಿರಬೇಕು,ಶಿಕ್ಷಣ ಅಭಿವೃದ್ಧಿಗಾಗಿ ಸದಾ ಹಗಲಿರುಳು ಶ್ರಮಿಸುವ ವ್ಯಕ್ತಿಯಾಗಿರಬೇಕು,ಪದವಿಧರರಿಗೆ ಲಭ್ಯವಾಗುವ ಮತ್ತು ಶಿಕ್ಷಣ ಅಭಿವೃದ್ಧಿಗೆ ಆದ್ಯತೆ ನೀಡುವ ವ್ಯಕ್ತಿಯಾಗಿರಬೇಕು,ಯಾವುದೇ ಪಕ್ಷ, ಧರ್ಮ,ಜಾತಿ,ಪಂಥ,ಪಂಗಡ,ಅಭಿಮಾನ,ಹಣ ಮತ್ತು ಹೆಂಡಕ್ಕೆ,ಲಾಭಿಗೆ ಹಾಗೂ ಮೂಲಾಜಿಗೆ ಬೀಳದೆ ನಮ್ಮ ಮತ ಸೂಕ್ತ ವ್ಯಕ್ತಿಗೆ ಚಲಾಯಿಸಬೇಕು.
ಒಬ್ಬ ರಾಜಕಾರಣಿ ಎಷ್ಟೇ ಅಧಿಕಾರ,ಸಂಪತ್ತು,ಹೆಸರು ಗಳಿಸಿ,ಅನುಭವಿಸಿದರೂ ಕೂಡಾ ತಮ್ಮ ಸ್ವಾರ್ಥಕ್ಕಾಗಿ ಯಾವ ಸಂದರ್ಭದಲ್ಲಿ ಯಾವ ಪಕ್ಷಕ್ಕೆ ಸೇರುತ್ತಾರೋ ಗೋತ್ತಾಗಲ್ಲ.ಹಾಗಾಗಿ ನಾವುಗಳು ಬಹಳ ಎಚ್ಚರಿಕೆಯಿಂದ ಒಬ್ಬರಿಗೊಬ್ಬರು ಜಗಳವಾಡದೆ ಪ್ರೀತಿ ವಿಶ್ವಾಸದಿಂದ ಇದ್ದು. ನಮಗೆ ಬೇಕಾದವರಿಗೆ ನಮ್ಮ ಒಂದು ಮತ ತಪ್ಪದೆ ಚಲಾಯಿಸಿರಿ,ಶಿಕ್ಷಣ ಅಭಿವೃದ್ಧಿ ಕಡೆ ನಮ್ಮ ನಡೆ ಇರಲಿ,ಶಿಕ್ಷಣ ಅಭಿವೃದ್ಧಿಯಾದರೆ- ದೇಶ ತಾನಾಗಿಯೇ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಬಹುದು.ವಿಧಾನ ಪರಿಷತ್ ಈಶಾನ್ಯ ವಲಯ ಪದವಿ ಕ್ಷೇತ್ರದಲ್ಲಿರುವ ಬೀದರ್,ಕಲಬುರಗಿ, ಯಾದಗಿರ,ರಾಯಚೂರ,ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ವರೆಗೆ ಇದ್ದು ಸೋಮವಾರ 03 ಮೇ 2024 ರಂದು ಮುಂಜಾನೆ 08 ರಿಂದ ಸಾಯಂಕಾಲ 05 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿದ್ದು ತಪ್ಪದೆ ಎಲ್ಲಾ ಪದವಿ ಮತದಾರರು ಮತ ಚಲಾಯಿಸುವ ಮೂಲಕ ಶಿಕ್ಷಣ ಅಭಿವೃದ್ಧಿಗೊಳಿಸಬೇಕು.ವಿವಿಧ ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆದು ಪದವಿ ಪಡೆದರೂ ಸಹ ಉದ್ಯೋಗವಿಲ್ಲ ಹಾಗಾಗಿ ಕಲ್ಯಾಣ ಕರ್ನಾಟಕ ಪದವಿಧರರನ್ನು/ಪ್ರತಿಭಾವಂತರನ್ನು ವಿವಿಧ ಇಲಾಖೆಯಲ್ಲಿ ಸದ್ಬಳಿಕೆ ಮಾಡಿಕೊಂಡು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೊಳಿಸಲು ವಿಧಾನ ಪರಿಷತ್ ಈಶಾನ್ಯ ವಲಯ ಎಲ್ಲಾ ಪದವಿಧರರ ಪರವಾಗಿ ಆಗ್ರಹಿಸುತ್ತೆನೆ.
-ಡಿ.ಪಿ.ಸಜ್ಜನ,ಉಪನ್ಯಾಸಕರು ಮತ್ತು ಅಧ್ಯಕ್ಷರು
ಶ್ರೀ ಕೇತಕಿ ಸಂಗಮೇಶ್ವರ ಶಿಕ್ಷಣ ಟ್ರಸ್ಟ್ (ರಿ.),ಹೊನ್ನಕಿರಣಗಿ ತಾ.ಜಿ.ಕಲಬುರಗಿ.