ಬಾಗಲಕೋಟೆ/ರಬಕವಿ ಬನಹಟ್ಟಿ:ಈಗಿನ ಕಾಲದ ಮಕ್ಕಳು ತಮ್ಮದೇ ಆದ ಮೊಬೈಲ್ ಫೋನಿನ ಜಗತ್ತಿನಲ್ಲಿ ಇರುತ್ತಾರೆ,ಆದರೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದ ಭಾರಪೇಟ ಗಲ್ಲಿಯಲ್ಲಿ ಅಸದದುಲ್ಲಾ ಎಂಬ ಯುವಕ ತನ್ನ ಪ್ರಾಣವನ್ನು ಲೆಕ್ಕಿಸದೆ 6 ವರ್ಷದ ಮಾಹೆರಾ ಎಂಬ ಹೆಣ್ಣಮಗು ಆಟ ಆಡುತ್ತಿರುವಾಗ ನೀರಿನ ಟ್ಯಾಂಕ್ ಒಂದರಲ್ಲಿ ಬಿದ್ದು ನೀರು ಕುಡಿದು ಪ್ರಜ್ಞೆಯನ್ನು ತಪ್ಪಿತ್ತು.ಕೂಡಲೇ ನೋಡಿದ ಯುವಕನು ಆಕೆಯನ್ನು ಕೈಯಲ್ಲಿ ಗಾಬರಿಗೊಳ್ಳದೆ ಎತ್ತಿಕೊಂಡು ಹೋಗಿ ಸಮೀಪದ ಡೊರ್ಲೆ ಮಕ್ಕಳ ಆಸ್ಪತ್ರೆಗೆ ದಾಖಲಿಸಿ ಮಗುವಿನ ಪ್ರಾಣ ಉಳಿಸಿದ ಘಟನೆ ರಬಕವಿಯಲ್ಲಿ ನಡೆದಿದೆ.
ಮಾಹೆರಾ ಅಬ್ದುರಜಾಕ ಇನಾಮ್ದಾರ್ ಎಂಬ 6 ವರ್ಷದ ಹೆಣ್ಣು ಮಗುವಿನ ಪ್ರಾಣವನ್ನು ಕಾಪಾಡಿದ ಅಸದದ್ದುಲ್ಲಾ ಗದ್ಯಾಳ ಎಂಬ ಯುವಕನಿಗೆ ಜಮಿಯತ್ ಎ ಉಲ್ಮಾ ಸಂಘಟನೆಯವರು ಕರೆದು ಇವರ ಕಾರ್ಯವನ್ನು ಮೆಚ್ಚಿ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನಾ ಮೋಸಿನ್ಅಹಮದ್ ಗೋಕಾಕ್,ಮಾನವೀತೆಯ ಕೆಲಸ,ನಮ್ಮ ಸಮಾಜ ಹೆಮ್ಮೆ ಪಡುವ ಸಂಗತಿ ಮೊದಲು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮನುಷ್ಯತ್ವ ಅಥವಾ ಮಾನವೀಯತೆಯಿಂದ ಜೀವನ ಸಾಗಿಸಬೇಕು ಎಂದು ಮಹಮ್ಮದ್ ಪೈಗಂಬರ್ ರವರು ಹೇಳಿದ್ದಾರೆ ಎಂದು ಹೇಳಿದರು.ಇಂತಹ ಕೆಲಸಕ್ಕೆ ನಾವು ಮೆಚ್ಚುಗೆ ತಿಳಿಸುತ್ತೇವೆ.ಕೇವಲ ಮುಸ್ಲಿಂ ಸಮಾಜ ಅಷ್ಟವಲ್ಲದೆ ಯಾವುದೇ ಸಮಾಜವಿದ್ದರೂ ಇಂತಹ ಕೆಲಸ ಅಥವಾ ಅವರ ಕಷ್ಟ ಸುಖದಲ್ಲಿ ಭಾಗಿಯಾಗಬೇಕೆಂದು ಈಗಿನ ಯುವಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೌಲಾನ ಮೋಸಿನ ಗೋಕಾಕ, ಗಪುರ ಮೌಲಾನ,ಕರವೇ ಗಜಸೇನೆ ತಾಲೂಕ ಅಧ್ಯಕ್ಷ ಮಹಮ್ಮದ ಹುಸೇನ್ ಲೆಂಗ್ರೆ ಯುವಕನ ತಂದೆ ಬಂದೆನಮಾಜ್ ಗದ್ಯಾಳ ಇನ್ನೂ ಅನೇಕರು ಇದ್ದರು.
ವರದಿ ಮಹಿಬೂಬ್ ಎಂ ಬಾರಿಗಡ್ಡಿ