ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಬಡತನದಲ್ಲಿ ಬೆಂದು ಅರಳಿದ ನಾಮದೇವ ಢಸಾಳ್

ಮಹಾರಾಷ್ಟ ರಾಜ್ಯದ ಪುಣೆ ಪುರಖಾನೇ ಸರ್ ನಲ್ಲಿ 1949 ರಲ್ಲಿ ಹುಟ್ಟಿದ ನಾಮದೇವ ಢಸಾಳ್ ಖ್ಯಾತ ಮರಾಠಿ ಸಾಹಿತಿ.
ಅಂಬೇಡ್ಕರರಿಂದ ಗಾಢವಾಗಿ ಪ್ರಭಾವಿತರಾದ ಢಸಾಳ್ 1973 ರಲ್ಲಿ ತಮ್ಮ ಗೆಳೆಯರೊಂದಿಗೆ ದಲಿತ ಪ್ಯಾಂಥರ್ಸ್ ಸಂಘಟನೆ ಹುಟ್ಟುಹಾಕಿದರು 80 ದಶಕದ ಹಿಂದೆ ಕವಿಗೋಷ್ಟಿ ನಡೆಯುತ್ತಿತ್ತು ಸಭಿಕರ ನಡುವೆ ಅಪರಿಚಿತ ಯುವಕ ವೇದಿಕೆ ಕಡೆಗೆ ಬಂದು ವೇದಿಕೆ ಏರಿ ಆ ಕವಿಯಿಂದ ಮೈಕ್ ಕಸಿದುಕೊಂಡು ತನ್ನ ಕವಿತೆ ಹೇಳಲು ಪ್ರಾರಂಭಿಸಿದ ಗಡಸು ಧ್ವನಿಯ ಯುವಕನ ಬಾಯಿಯಿಂದ ಹೊರಟ ದೇಶೀ ಮರಾಠಿ ಪದಗಳು ಅವನ ಆತ್ಮದ ತುಣುಕುಗಳೊಂದಿಗೆ ಎಂಬಂತೆ ಸಿಟ್ಟು ಆವೇಶ ನೋವು ಎಲ್ಲವನ್ನು ಗ್ರಹಿಸಿಕೊಂಡು ಕಾವ್ಯವಾಗಿ ಹೊರ ಹೊಮ್ಮಿಸುವ ಕವನ ವಾಚನ ಮಾಡುತ್ತಾ ಹೋದಾಗ ನೆರೆದ ಜನ ಇಂಥ ಪಧ್ಯಬರಲು ಸಾಧ್ಯವೇ? ಅಚ್ಚರಿಗೊಂಡು ಮಾತು ಚಪ್ಪಾಳೆ ಎಲ್ಲವನ್ನೂ ಮರೆತರು..
ಆತರುಣ ಪ್ರಸಿದ್ಧ ಮರಾಠಿ ಕವಿ ನಾಮದೇವ ಢಸಾಳ್ ಕೇಂದ್ರ ಸಾಹಿತ್ಯ ಅಕಾಡೆಮಿಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಜೀವಮಾನ ಸಾಧನೆಗಾಗಿ ಅಕಾಡೆಮಿ ಪ್ರಶಸ್ತಿ ಪಡೆದವರು.
ಇಂಗ್ಲೀಷ ಹಿಂದಿ ಬಂಗಾಳಿ ಕನ್ನಡ ತೆಲುಗು ಭಾಷೆಗಳಲ್ಲಿ ಅನುವಾದಗೊಂಡಿದೆ.
ಅಸ್ಪೃಶ್ಯ ಕುಟುಂಬದಲ್ಲಿ ಜನಿಸಿದ ನಾಮದೇವ ಚಿಕ್ಕ ವಯಸ್ಸಿನಲ್ಲಿ ಮುಂಬಯಿಗೆ ಬಂದರು ಮಾಂಸದಂಗಡಿಯಲ್ಲಿ ಸಹಾಯಕರಾಗಿದ್ದ ಅವರ ತಂದೆ ಕೆಂಪು ದೀಪ ಪ್ರದೇಶದ ಧೋರ ಚಾಳ್ ನಲ್ಲಿ ವಾಸವಾಗಿದ್ದರು ಅದು ಸ್ಮಗ್ಲರ್ ಗಳು ಮಾದಕ ವಸ್ತುಗಳ ವ್ಯಾಪಾರಿಗಳು ಸುಪಾರಿ ಕೊಲೆಗಡುಕರು ಕಳ್ಳರು ಲೇವಾದಾರರು ರೌಡಿಗಳಿಂದ ತುಂಬಿದ ಸ್ಥಳ.ಮುಂಬಯಿ ಮಹಾನಗರಿ ಹಳ್ಳಿಯ ದಲಿತ ಕೆರೆಯ ಹುಡುಗನಿಗೆ ಹೊಸ ಅವಕಾಶ ಒದಗಿ ಬಂತು ಅಲ್ಲದೇ ವಿವಿಧ ಭಾಷೆ ಜನಾಂಗ ಧರ್ಮಗಳ ಜನಗಳ ಸಂಗಮ ಮುಂಬಯಿ ಹೈಸ್ಕೂಲಕ್ಕಿಂತ ಹೆಚ್ಚು ಓದದ ಢಸಾಳ್ ಬದುಕಿನ ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆದವರು ಅವರು ನೆಲೆಸಿದ್ದ ಕಾಮಾಟಿಪುರ ಕೊಳೆಗೇರಿ ದಲಿತ ಕೇರಿಗಳ ಅನುಭವ ಜೀವನ ಪಾಠ ಕಲಿಸಿದವು 5ನೇ ತರಗತಿಯಲ್ಲಿ ಕವನ ಬರೆಯುತ್ತಿದ್ದ ಢಸಾಳ್ ನಂತರ ಉಪಾಧ್ಯಾಯರ ಮಾರ್ಗದರ್ಶನ ಪ್ರೋತ್ಸಾಹ ಸತತ ಕಾವ್ಯಾಭ್ಯಾಸದಿಂದ ಶುದ್ದ ಕಾವ್ಯದ ಎಲ್ಲಾ ವರಸೆಗಳನ್ನು ಅರಗಿಕೊಂಡವರು.
ನೆಗೆಟಿವ್ ಸ್ಪೇಸ್ ಹಾಡಕಿ ಹಳವಳಾ ಇವೆರಡು ಕಾದಂಬರಿಗಳು ಢಸಾಳ್ ರಚಿಸಿದ್ದಾರೆ.ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಬಗ್ಗೆ ಪ್ರಿಯದರ್ಶಿನಿ ಎಂಬ ದೀಘ ಕವನ ರಚಿಸಿದ ಅವರು ರಾಜಕೀಯ ಬಗ್ಗೆ ಅನೇಕ ಕವನಗಳನ್ನು ಬರೆದಿದ್ದಾರೆ ಭಾರತೀಯ ಭಾಷೆಯಲ್ಲದೆ ಲ್ಯಾಟಿನ್ ಹಾಗೂ ಇನ್ನಿತರ ಭಾಷೆಗಳಲ್ಲಿ ಅನುವಾದವಾಗಿ ಜನಮನ ಗೆದ್ದಿವೆ
ಆ ಹಿರಿಯ ಕವಿಯ ಕವನಗಳು ಆಗ ಆಕಾಶವಾಣಿಯಲ್ಲಿ ಮೇಲಿಂದ ಮೇಲೆ ಪ್ರಸಾರವಾಗುತ್ತಿದ್ದವು.ಅವರ ಕವನ ಕೇಳಿ ಬೆಳೆದ ಧಸಾಳರುಅವರಿಗೆ ನೀಡಿದರೆ ತೆರೆದು ಕೂಡಾ ನೋಡದೇ ಟ್ಯಾಕ್ಸ ಚಾಲಕನ ಉಡುಪಿನಲ್ಲಿದ್ದ ಢಸಾಳರನ್ನು ಅಪಾದಮಸ್ತಕವಾಗಿ ನೋಡಿ ನಿನ್ನದು ಯಾವ ಜಾತಿ?ಪ್ರಶ್ನೆ ಮಾಡಿದರು ಢಸಾಳರು ದಂಗು ಬಡಿದು ಹೋದರು ಈ ಪ್ರಶ್ನೆಯನ್ನು ಆ ಜನಪ್ರಿಯ ಹಿರಿಯ ಕವಿಯಿಂದ ಖಂಡಿತ ನಿರೀಕ್ಷಿಸಿರಲಿಲ್ಲ ಅಂದು ಅವರಿಗೆ ಆದ ಅವಮಾನ ತಾವು ದೊಡ್ಡ ಕವಿಯಾಗಬೇಕು ಎನ್ನುವ ಛಲ ಅವರಲ್ಲಿ ಮೂಡಿಸಿರಬೇಕು.
ಮರಾಠಿ ಮತ್ತು ಉರ್ದು ಮಿಶ್ರಿತ ಮುಂಬಯಿ ಹಿಂದಿ ಬಲ್ಲ ಢಸಾಳ್ ವಿಶ್ವ ಸಾಹಿತ್ಯ ಪ್ರಮುಖರನ್ನು ಮರಾಠಿಯಲ್ಲಿ ಬರೆದುಕೊಂಡಿದ್ದಾರೆ.ಢಸಾಳರನ್ನು ತುಂಬ ಪ್ರಭಾವ ಬೀರಿದ ವೃತ್ತಿ ಭಾರತ ರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಗುರುಮಾರ್ಗದರ್ಶಿ ಸ್ಪೂರ್ತಿ ಎಲ್ಲವೂ ಪ್ರತಿ ವರ್ಷ 14ಕ್ಕೆ ಅಂಬೇಡ್ಕರ ಕುರಿತು ಒಂದು ದೀರ್ಘ ಕವನ ಬರೆಯುವ ಢಸಾಳ ಆ ಸಮಯವನ್ನು ಆತ್ಮವಿಮರ್ಶೆಗೆ ಬೆಳೆಸಿಕೊಂಡವರು.
ಅವರೊಬ್ಬ ಒಳ್ಳೆಯ ಕವಿ ಕಾವ್ಯ ಅವರೊಬ್ಬ ಕವಿರಾಜ ಸಂಘಟಕ ಹೋರಾಟಗಾರರಿಗೆ ಅವರ ವ್ಯಕ್ತಿತ್ವ ನಮ್ಮೆಲ್ಲರಿಗೆ ದಾರಿದೀಪ.
ಪ್ರಶಸ್ತಿಗಳು….
1973 1974 1982 1983 ಮಹಾರಾಷ್ಟ ಸಾಹಿತ್ಯ ಪ್ರಶಸ್ತಿ,
1974ರಲ್ಲಿ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ 1999 ರಲ್ಲಿ ಪದ್ಯಶೀ2004 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹತ್ತು ಹಲವು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮರಾಠಿ ಭಾಷೆ ಮಾತ್ರವಲ್ಲ ಭಾರತೀಯ ಸಾಹಿತ್ಯ ಮಾನ ಅಭಿಮಾನವನ್ನು ಹೆಚ್ಚಿಸಿದವರು ಅವರು ತಳಸಮೂದಾಯಗಳಿಗೆ ತಲೆಯೆತ್ತಿ ಬದುಕುವಂತೆ ಮಾಡಿದ ಕವಿ ನಾಮದೇವ ಢಸಾಳ ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಅಜರಾಮರ.

ಲೇಖಕರು:ದಯಾನಂದ.ಮ.ಪಾಟೀಲ,ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ