ಚಿಕ್ಕಾಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕು ಗ್ರಾಮಾಂತರ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗೌರಿಬಿದನೂರಿನ ಎಲ್ಲಾ ಪೊಲೀಸ್ ಸಿಬ್ಬಂದಿ ಅವರಿಂದ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇದಿಕೆಯಲ್ಲಿ ವಿಶೇಷವಾಗಿ ಜಿಲ್ಲಾ ಐಪಿಎಸ್ ಅಧಿಕಾರಿ ನಾಗರಾಜ್ ರವರನ್ನು ಅಹ್ವಾನಿಸಲಾಗಿತ್ತು.
ಈ ವೇದಿಕೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಸತ್ಯನಾರಾಯಣರವರು ಭಾಷಣ ಮಾಡಿ ಸಿಬ್ಬಂದಿ ವರ್ಗದವರಾದ ಗ್ರಾಮಾಂತರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಮೇಶ್ ಗುಗ್ಗುರಿ,ಚಿಕ್ಕಾಬಳ್ಳಾಪುರ ಜಿಲ್ಲಾ ಪೊಲೀಸ್ ಆಯುಕ್ತರು ಐಪಿಎಸ್ ಅಧಿಕಾರಿಯಾದ ನಾಗರಾಜ್ ರವರು,
ಡಿ ವೈ ಎಸ್ ಪಿ ಶಿವಕುಮಾರ್,ನ್ಯಾಯಾಲಯ ಬಾರ್ ಕನ್ಸಲಿಂಗ್ ಅಸೋಸಿಯೇಷನ್ ಅಧ್ಯಕ್ಷರಾದ ರಾಮದಾಸರವರು,ಪೌರ ಆಯುಕ್ತರಾದ ಗೀತಾ ಅವರು ಮತ್ತು ಎಲ್ಲಾ ಪೊಲೀಸ್ ಸಿಬ್ಬಂದಿ ವರ್ಗದವರಿಗೆ ವಂದನೆಗಳನ್ನು ಸಲ್ಲಿಸುತ್ತಾ ಕಾರ್ಯಕ್ರಮ ಮುಂದುವರೆಸಿದರು.
ಈ ಆವರಣದಲ್ಲಿ 290 ಸಸಿಗಳನ್ನು ನೆಡುತ್ತಿದ್ದು ಹಣ್ಣಿನ ಸಸಿಗಳು ಹಾಗೂ ಇನ್ನಿತರ ಒಳ್ಳೆ ಪರಿಸರ ಕಾಪಾಡುವ ಸಸಿಗಳನ್ನು ನೆಡುತ್ತೇವೆ ಅದೇ ರೀತಿಯಲ್ಲಿ ಬೋರ್ ವೆಲ್ ಪಂಪ್ ಸೆಟ್ ಮೂಲಕ ನೀರನ್ನು ಪೂರೈಕೆ ಮಾಡಿ ಸಸಿಗಳನ್ನು ನಮ್ಮ ಪೊಲೀಸ್ ಸಿಬ್ಬಂದಿಯವರು ನೋಡಿಕೊಳ್ಳತಕ್ಕದ್ದು ಎಂದು ಭಾಷಣ ಮುಗಿಸಿದರು.
ಹಾಗೂ ಈ ವೇದಿಕೆಯಲ್ಲಿ “ಐಪಿಎಸ್”ಅಧಿಕಾರಿ ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆಯ ಹೆಮ್ಮೆಯ ಅಧಿಕಾರಿಯಾದ ನಾಗರಾಜ್ ರವರು ಕೂಡಾ ಭಾಷಣ ಮಾತನಾಡಿದರು. ಕೊನೆಯದಾಗಿ ನಮ್ಮ ಗ್ರಾಮಾಂತರ ಪೊಲೀಸ್ ಠಾಣೆಯ ಪೇದೆ ಜೂಲಪ್ಪ ಅವರು ಸಸಿಯನ್ನು ಮುಟ್ಟಿ ಸಸಿಯನ್ನು ಬೆಳೆಸುವ ಜವಾಬ್ದಾರಿ ನಮಗೆ ಇರಲಿ ಎಂದು ಪ್ರಮಾಣ ಮಾಡಿದರು.
ವರದಿ-ತುಳಸಿ ನಾಯ್ಕ್