ಗದಗ ಜಿಲ್ಲಾ ರೋಣ ತಾಲ್ಲೂಕ ಬೆಳವಣಿಕಿ ಗ್ರಾಮದಲ್ಲಿ ದಿ.೦೫-೦೬-೨೦೨೪ ರಂದು ವಿಶ್ವ ಪರಿಸರ ದಿನಾಚರಣೆ ನಿಮಿತ್ತವಾಗಿ ಸ್ಥಳೀಯ ವಿಕಲಚೇತನರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಗ್ರಾಮ ಪಂಚಾಯತಿ ಆವರಣದಲ್ಲಿ ಗಿಡ ನೆಡೆಸುವುದರ ಮೂಲಕ ಪರಿಸರ ದಿನಾಚರಣೆ ಆಚರಣೆ ಮಾಡಲಾಯಿತು ಹಾಗೂ ವಿಕಲಚೇತನರ ಟ್ರಸ್ಟ್ ಕಮೀಟಿಯ ೫ನೇ ವಾರ್ಷಿಕೋತ್ಸವ ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪ್ರವೀಣ ಮಾಡಳ್ಳಿ ಪರಿಸರ ದಿನಾಚರಣೆ ಕುರಿತು “ಇಂದಿನ ದಿನಗಳಲ್ಲಿ ಗಿಡಮರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೆಡಬೇಕಾಗಿದೆ ನೆಟ್ಟ ಗಿಡಗಳು ಸಂರಕ್ಷಣೆ ಮಾಡಿ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಬೇಕಾಗಿದೆ ಇವತ್ತಿನ ದಿವಸ ೫೨ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬರುತ್ತಿದ್ದು ಇದಕ್ಕೆಲ್ಲಾ ಕಾರಣ ಕಾಡಿನ ನಾಶ,ಗಿಡ-ಮರಗಳ ನಾಶವಾಗುತ್ತಿದ್ದು ಅದನ್ನು ತಡೆಗಟ್ಟಬೇಕಾಗಿದೆ ನಾವು ಮುಂದಿನ ದಿನಗಳಲ್ಲಿ ಬದುಕಬೇಕಾದರೆ,ಗಿಡಗಳನ್ನು ನೆಟ್ಟು ಕಾಡನ್ನು ಬೆಳೆಸಬೇಕಾಗಿದೆ ಎಂದು ಹೇಳಿದರು. ಸಂಘದ ಅಧ್ಯಕ್ಷರಾದ ಹನಮಂತಪ್ಪ ಮ ಬಿಂಗಿ,ಖಜಾಂಚಿ ಎನ್ ಎಸ್ ಪಟ್ಟಣಶೆಟ್ಟಿ,ಗ್ರಾ.ಪಂ ಸಿಬ್ಬಂದಿ ಎಸ್ ಎಸ್ ಸುರಕೋಡ, ಎಫ್ ಪಿ ಪಾಟೀಲ, ಸುರೇಶ ಶಿವಶಿಂಪಿ, ಮುತ್ತು ಗೊರೇಬಾಳ ಮುಂತಾದವರು ಪಾಲ್ಗೊಂಡಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ನೀಲಮ್ಮ ಪಟ್ಟಣಶೆಟ್ಟಿ ಮಾಡಿದರು.
ವರದಿ ನಿಂಗರಾಜ ತಾಳಿ
